ಶಿರಹಟ್ಟಿ: ಸಮಾಜದಲ್ಲಿ ಹತ್ತಾರು ರೀತಿಯಲ್ಲಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಾಕಿಕೊಳ್ಳುವ ಮೂಲಕ ಸಾಮಾಜಿಕ ಬದಲಾವಣೆಗೆ ಮುಂದಾಗಿರುವ ಧರ್ಮಸ್ಥಳ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಶಾಸಕ ಡಾ. ಚಂದ್ರು ಕೆ. ಲಮಾಣಿ ತಿಳಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ವತಿಯಿಂದ ಮ್ಯಾಗೇರಿ ಓಣಿ ಕಾರ್ಯಕ್ಷೇತ್ರದ ಹಿಂದೂ ರುದ್ರಭೂಮಿಗೆ ಕ್ಷೇತ್ರದಿಂದ ಬಂದಿದ್ದ ಸಿಲಿಕಾನ್ ಚೆಂಬರ್ ಹಸ್ತಾಂತರಿಸಿ ಮಾತನಾಡಿ, ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಾರ್ಯ ಮಹತ್ತರವಾಗಿದೆ. ಗಂಡು- ಹೆಣ್ಣು ಎಂಬ ಭೇದವಿಲ್ಲದೇ ಸಮಾಜದಲ್ಲಿ ಪ್ರತಿ ವ್ಯಕ್ತಿಯೂ ಉದ್ಯೋಗ ಕೈಗೊಳ್ಳಬೇಕು. ಸರ್ಕಾರ ಮಾಡುವ ಕೆಲಸವನ್ನು ಧರ್ಮಸ್ಥಳ ಸಂಸ್ಥೆ ಮಾಡುತ್ತಿರುವುದು ಮಾದರಿಯಾಗಿದೆ. ಯುವಜನಾಂಗ ನಿರುದ್ಯೋಗಿಗಳಾಗದೇ ಸ್ವಯಂ ಉದ್ಯೋಗ ಕೈಗೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದರು.ಜಿಲ್ಲಾ ನಿರ್ದೇಶಕ ಕೇಶವ ದೇವಾಂಗ ಅವರ ನೇತೃತ್ವದಲ್ಲಿ ಮ್ಯಾಗೇರಿ ಓಣಿ ಎಲ್ಲ ಗಣ್ಯ ವ್ಯಕ್ತಿಗಳಿಗೆ ಸಿಲಿಕಾನ್ ಚೆಂಬರ್ ಹಸ್ತಾಂತರ ಮಾಡಲಾಯಿತು. ನಂತರ ಕೇಶವ ದೇವಾಂಗ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.ಫಕ್ಕೀರೇಶ ರಟ್ಟಿಹಳ್ಳಿ ಶ್ರೀ ಕ್ಷೇತ್ರದ ಸಮುದಾಯ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಸಂತಸ ವ್ಯಕ್ತಪಡಿಸಿದರು. ಪುನಿತ್ ಓಲೇಕಾರ, ಸಂದೀಪ ಕಪ್ಪತ್ತನವರ, ಪರಶುರಾಮ ಡೊಂಕಬಳ್ಳಿ, ಮಹಾಂತೇಶ ದಶಮನಿ, ಅಜ್ಜು ಪಾಟೀಲ, ನಂದಾ ಪಲ್ಲೇದ, ಅಶೋಕ ವರವಿ ಸೇರಿದಂತೆ ಅನೇಕರು ಇದ್ದರು.ಗುಂಡಿ ಭಾಗ್ಯ ಕರುಣಿಸಿದ ಸರ್ಕಾರ: ರಾಜೀವ್
ಡಿಸಿಎಂ ಹೇಳಿಕೆಗೆ ತಿರುಗೇಟು: ಪ್ರಧಾನಿ ಮೋದಿ ಅವರ ಮನೆ ಮುಂದೆಯೂ ಗುಂಡಿಗಳಿವೆ ಎಂಬ ಡಿಸಿಎಂ ಹೇಳಿಕೆಗೆ ರಾಜೀವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು. ಡಿಸಿಎಂ ಪಾಪ ಯಾವ ದಾರಿಯಲ್ಲಿ ಹೋಗಬೇಕು ಅಂತಾ ಗೊತ್ತಿಲ್ಲ. ಕಳ್ಳ ದಾರಿಯಲ್ಲಿ ಹೋದವರಿಗೆ ಮಾತ್ರ ಗುಂಡಿಗಳು ಕಾಣಿಸುತ್ತವೆ ಎಂದು ವ್ಯಂಗ್ಯವಾಡಿದರು.