ಶರಣರ ಆದರ್ಶ ಪಾಲನೆಯಿಂದ ಸಮಾಜ ಸಂಘಟನೆ ಸಾಧ್ಯ: ನಿರಂಜನಾನಂದಪುರಿ ಮಹಾಸ್ವಾಮೀಜಿ

KannadaprabhaNewsNetwork | Published : Dec 23, 2024 1:02 AM

ಸಾರಾಂಶ

ರಾಯಣ್ಣ, ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯಿಂದ ಕುರುಬ ಸಮಾಜ ಸಂಘಟನೆ ಆಗುವುದಿಲ್ಲ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ನುಡಿದರು.

ರಾಣಿಬೆನ್ನೂರು: ಶರಣರು, ಮಹಾತ್ಮರು, ದಾರ್ಶನಿಕರ ಆದರ್ಶಗಳ ಪಾಲನೆಯಿಂದ ಸಮಾಜ ಸಂಘಟನೆ ಸಾಧ್ಯ ಎಂದು ಕಾಗಿನೆಲೆ ಕನಕ ಗುರುಪೀಠದ ಜಗದ್ಗುರು ನಿರಂಜನಾನಂದಪುರಿ ಮಹಾಸ್ವಾಮಿಗಳು ನುಡಿದರು.

ನಗರದ ಹಲಗೇರಿ ರಸ್ತೆ ಬೈಪಾಸ್ ಬಳಿ ಭಾನುವಾರ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಏರ್ಪಡಿಸಲಾಗಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದರು.ರಾಯಣ್ಣ, ಕನಕದಾಸರ ಮೂರ್ತಿ ಪ್ರತಿಷ್ಠಾಪನೆಯಿಂದ ಕುರುಬ ಸಮಾಜ ಸಂಘಟನೆ ಆಗುವುದಿಲ್ಲ. ರಾಯಣ್ಣ, ಕನಕದಾಸರ ಮೂರ್ತಿ ಪ್ರತಿಷ್ಠಾಪಿಸುವುದರಿಂದ ಕುರುಬ ಸಮಾಜ ಸಂಘಟನೆ ಆಗುವುದಿಲ್ಲ. ಬದಲಾಗಿ ಅಭಿಮಾನ ಬರುತ್ತದೆ. ಆದರೆ, ಅವರ ಆದರ್ಶಗಳನ್ನು ಸರ್ವರೂ ಮೈಗೂಡಿಸಿಕೊಂಡು ಮುನ್ನಡೆದರೆ ಸಮಾಜದ ಏಳಿಗೆ ಆಗಲು ಸಾಧ್ಯ. ಈ ನಿಟ್ಟಿನಲ್ಲಿ ಸರ್ವರೂ ಸಮಾಜದ ಸಂಘಟನೆಗೆ ಆದ್ಯತೆ ನೀಡಬೇಕು ಎಂದರು.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಗೆಳೆಯರ ಬಳಗದ ಅಧ್ಯಕ್ಷ ಕುಬೇರಪ್ಪ ಕೊಂಡಜ್ಜಿ ಅಧ್ಯಕ್ಷತೆ ವಹಿಸಿದ್ದರು.

ಬೀರಲಿಂಗೇಶ್ವರ ದೇವಸ್ಥಾನದ ಅರ್ಚಕ ಭರಮಪ್ಪ ಪೂಜಾರ ನೇತೃತ್ವ ವಹಿಸಿದ್ದರು.

ಶಾಸಕ ಪ್ರಕಾಶ ಕೋಳಿವಾಡ ಸಮಾರಂಭ ಉದ್ಘಾಟಿಸಿದರು. ವಿಧಾನಸಭಾ ಉಪ ಸಭಾಪತಿ ರುದ್ರಪ್ಪ ಲಮಾಣಿ ನಾಮಫಲಕ ಉದ್ಘಾಟಿಸಿದರು. ಮಾಜಿ ಶಾಸಕ ಅರುಣಕುಮಾರ ಪೂಜಾರ ರಾಯಣ್ಣನ ಪುತ್ಥಳಿ ಅನಾವರಣಗೊಳಿಸಿದರು. ರಾಜ್ಯ ಕಾಂಗ್ರೆಸ್ ಒಕ್ತಾರ ನಿಖಿತ್‌ರಾಜ್ ಮೌರ್ಯ ಉಪನ್ಯಾಸ ನೀಡಿದರು.

ಮಕ್ಕಳ ಪ್ರಜ್ಞ ಡಾ. ಪ್ರವೀಣ ಖನ್ನೂರ, ಚೋಳಪ್ಪ ಕಸವಾಳ, ಮಂಜುನಾಥ ಗೌಡ ಶಿವಣ್ಣನವರ, ನಿಂಗಪ್ಪ ಗುತ್ತಪ್ಪ ಗೌಡ್ರು, ನಗರಸಭಾ ಸದಸ್ಯರಾದ ನಿಂಗಪ್ಪ ಕೋಡಿಹಳ್ಳಿ, ರಮೇಶ್ ಕರಡೆಣ್ಣನವರ್, ಮುಖಂಡರಾದ ಬಸವರಾಜ ಕಂಬಳಿ, ಷಣ್ಮುಖಪ್ಪ ಕಂಬಳಿ, ಹನುಮಂತಪ್ಪ ದೇವರಗುಡ್ಡ, ಮಾಳಪ್ಪ ಪೂಜಾರ, ಆನಂದ ಹುಲಬನ್ನಿ, ರಾಜು ಮೈಲಾರ, ಮೂರ್ತೆಪ್ಪ ಕಂಬಳಿ, ಹನುಮಂತಪ್ಪ ಮುಳಗುಂದ, ಆಂಜನೇಯ ಹೂಲಿಹಳ್ಳಿ, ರಾಕೇಶ ಮೇಡ್ಲೇರಿ, ಬೀರೇಶ ಪೂಜಾರ, ಚಂದ್ರು ಮೈಲಾರ, ಕುಬೇರಪ್ಪ ಕೋಲಕಾರ, ಚಂದ್ರು ಕದರಮಂಡಲಗಿ, ನಿಂಗಪ್ಪ ಕಂಬಳಿ, ಶಿವಣ್ಣ ನಂದಿಹಳ್ಳಿ, ಚಂದ್ರಪ್ಪ ಬೇಡರ, ರವೀಂದ್ರಗೌಡ ಪಾಟೀಲ, ಶಿವಪುತ್ರಪ್ಪ ಹಲಗೇರಿ ಮತ್ತಿತರರಿದ್ದರು.

Share this article