ಸಾಮಾಜಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಿವೆ: ಲೋಹಾರ

KannadaprabhaNewsNetwork |  
Published : Apr 12, 2026, 02:30 AM IST
ರೋಶನಿ ಸಮಾಜ ಸೇವಾ ಸಂಸ್ಥೆ ಹಾವೇರಿ ವಿಶ್ವವಿದ್ಯಾಲಯದ ಚಿನ್ನದ ಪದಕ ವಿಜೇತರನ್ನು ಸನ್ಮಾನಿಸಿತು. | Kannada Prabha

ಸಾರಾಂಶ

ಸಾಮಾಜಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇವೆ, ಅವನ್ನು ಪರಿಹರಿಸಲು ಸಮಾಜ ಸೇವಾ ಸಂಸ್ಥೆಗಳೂ ಹರ ಸಾಹಸ ಮಾಡುತ್ತಿರುವಾಗ ಸಾರ್ವಜನಿಕರು ಸಮಾಜಮುಖಿಯಾಗುವ ಅಗತ್ಯವಿದೆ ಎಂದು ನಿವೃತ್ತ ನ್ಯಾಯಾಧೀಶ ಎಂ.ಎ. ಲೋಹಾರ ಕಳಕಳಿ ವ್ಯಕ್ತಪಡಿಸಿದರು.

ಹಾನಗಲ್ಲ: ಸಾಮಾಜಿಕ ಸಮಸ್ಯೆಗಳು ದಿನದಿಂದ ದಿನಕ್ಕೆ ವಿಸ್ತರಿಸುತ್ತಲೇ ಇವೆ, ಅವನ್ನು ಪರಿಹರಿಸಲು ಸಮಾಜ ಸೇವಾ ಸಂಸ್ಥೆಗಳೂ ಹರ ಸಾಹಸ ಮಾಡುತ್ತಿರುವಾಗ ಸಾರ್ವಜನಿಕರು ಸಮಾಜಮುಖಿಯಾಗುವ ಅಗತ್ಯವಿದೆ ಎಂದು ನಿವೃತ್ತ ನ್ಯಾಯಾಧೀಶ ಎಂ.ಎ. ಲೋಹಾರ ಕಳಕಳಿ ವ್ಯಕ್ತಪಡಿಸಿದರು.ಹಾನಗಲ್ಲ ಸಮೀಪದ ನಾಲ್ಕರ ಕ್ರಾಸ್ ಬಳಿ ಇರುವ ರೊಶನಿ ಸಮಾಜಸೇವಾ ಸಂಸ್ಥೆಯ ಸಭಾಂಗಣದಲ್ಲಿ ಆಯೋಜಿಸಿದ ವಿದ್ಯಾರ್ಥಿಗಳಿಗಾಗಿ ವ್ಯಕ್ತಿತ್ವ ವಿಕಸನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜ ಸೇವಾ ಸಂಸ್ಥೆಗಳು ಈಗ ಶಿಕ್ಷಣ ಹಾಗೂ ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಬೇಕು. ಸಮಾಜ ಸೇವೆ ಒಂದು ಪ್ರೇರಣೆಯ ಕಾರ್ಯ. ಇಡೀ ಮನಷ್ಯನ ಬದುಕು ಹಸನಾಗಲು ಸಾರ್ಥಕ ಜೀವನ ನಡೆಸಲು ತಾಳ್ಮೆ ಪ್ರೀತಿ ಅತ್ಯಂತ ಮುಖ್ಯ. ಇದು ಒಬ್ಬರ ಕಾಳಜಿಯಾದರೆ ಸಾಲದು ಎಂದರು.ಅಧ್ಯಕ್ಷತೆವಹಿಸಿ ಮಾತನಾಡಿದ ರೋಶನಿ ಸಮಾಜಸೇವಾ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ, ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸುವ ಜವಾಬ್ದಾರಿ ಪಾಲಕರದ್ದೇ ಆಗಿದೆ. ಶಾಲೆಗಳು ಸಮಾಜ ಸೇವಾ ಸಂಸ್ಥೆಗಳು ತಮ್ಮ ಪಾತ್ರವನ್ನೂ ನಿರ್ವಹಿಸಿದರೂ ಕೂಡ ಪಾಲಕರು ಮುಖ್ಯ ಜವಾಬ್ದಾರರು. ಮಕ್ಕಳಲ್ಲಿರು ಪ್ರತಿಭೆಯನ್ನು ಪ್ರೋತ್ಸಾಹಿಸುವಲ್ಲಿ ಅವರನ್ನು ಇನ್ನಷ್ಟು ಓದಿನತ್ತ ಸ್ಫೂರ್ತಿಯಾಗಿಸಲು ಸಾಧ್ಯ. ವಸ್ತು ವಿಷಯಗಳ ಬಗ್ಗೆ ಮಕ್ಕಳಿಗೆ ಕಾಳಜಿ ಬರುವಂತಾಗಬೇಕು. ಎಲ್ಲದಕ್ಕೂ ಮೊದಲು ಮಕ್ಕಳಿಗೆ ಶಿಸ್ತಿನ ಪಾಠವಾಗಬೇಕಾಗಿದೆ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಸಾಹಿತಿ ಪ್ರೊ. ಮಾರುತಿ ಶಿಡ್ಲಾಪೂರ, ಇದು ಸ್ಪರ್ಧಾತ್ಮಕ ಯುಗ. ಉದ್ಯೋಗ, ವ್ಯಾಪಾರ, ಶಿಕ್ಷಣ ಎಲ್ಲದರಲ್ಲೂ ಸ್ಪರ್ಧೆ ಇದೆ. ಯಾರು ಪರಿಶ್ರಮಿಸಿ ಮುನ್ನಡೆಯಬಲ್ಲರೋ ಅವರೇ ಉತ್ತಮ ಜೀವನ ಮಾರ್ಗ ಕಂಡುಕೊಳ್ಳಬಲ್ಲರು. ಮಕ್ಕಳಿಗೆ ಕಾಲ ಹರಣವಿಲ್ಲದೆ ಬದುಕಿಗಾಗಿ ಉತ್ತಮ ಗುಣ ಸ್ವಭಾವ ಕಲಿಸಿ, ನಾಳೆಗಾಗಿ ಉತ್ತಮ ಜೀವನ ವಿಧಾನವನ್ನು ಅಳವಡಿಸಿಕೊಳ್ಳುವ ಸಹಜ ತರಬೇತಿ ಮನೆಯಲ್ಲಾಗಬೇಕು. ರಜಾ ದಿನಗಳಲ್ಲಿ ಮೊಬೈಲ್, ದೂರದರ್ಶನದ ಮೂಲಕ ಕಾಲಹರಣ ಮಾಡುವ ಬದಲು ಸಮಯದ ಸದುಪಯೋಗದ ಇಂತಹ ಶಿಬಿರಗಳು ನಿಜಕ್ಕೂ ಅರ್ಥಪೂರ್ಣವಾದವುಗಳು ಎಂದರು.ಸನ್ಮಾನ : ಹಾವೇರಿ ವಿಶ್ವವಿದ್ಯಾಲಯದಿಂದ ಎಂಎ ಪದವಿಯಲ್ಲಿ ಚಿನ್ನದ ಪದಕ ವಿಜೇತರಾದ ಹೊಂಕಣದ ಪ್ರಿಯಾಂಕ ಈಳಿಗೇರ, ಡೊಳ್ಳೇಶ್ವರದ ನೇತ್ರಾ ಹರಿಜನ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾಗಿ ಪ್ರಗತಿಪರ ಸಂಘಟನೆಯ ಮಂಜುನಾಥ ಕುದರಿ, ಆರ್.ಎಫ್. ತಿರುಮಲೆ, ಕಲ್ಲಪ್ಪ ನಾಯಕ ಪಾಲ್ಗೊಂಡಿದ್ದರು.ಸಾಂವಸಗಿ ಕಲಿಕಾ ಕೇಂದ್ರಮಕ್ಕಳು ನೃತ್ಯ ಸಹಿತ ಪ್ರಾರ್ಥನೆ ಹಾಡಿದರು. ಪವಿತ್ರಾ ಜೋಗೇರ ಪ್ರಾಸ್ತಾವಿಕ ಮಾತನಾಡಿದರು. ಪ್ರವೀಣ ಮಾಂಗ್ಲೇನವರ ಸಂವಿಧಾನ ಪೀಠಿಕೆ ಓದಿದರು. ಸಿಂಚನಾ ಸುಣಗಾರ ಸ್ವಾಗತಿಸಿದರು. ಆಶಾ ಹಾಗೂ ಲಿಖಿತ ಲಮಾಣಿ ಕಾರ್ಯಕ್ರಮ ನಿರೂಪಿಸಿದರು. ಶೃತಿ ಹರಿಜನ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಂಸ್ಕೃತಿಕ ನಾಯಕ ಬಸವಣ್ಣನವರ ಚಿಂತನೆಗಳು ಸರ್ವಕಾಲಕ್ಕೂ ಪ್ರಸ್ತುತ: ಪ್ರೊ. ಎನ್. ಚಿನ್ನಸ್ವಾಮಿ ಸೋಸಲೆ
ತೃತೀಯ ಲಿಂಗಿ ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿ