ಜನ್ಮದಿನದ ನೆಪದಲ್ಲಿ ಜನೋಪಯೋಗಿ ಕಾರ್ಯಕ್ರಮ

KannadaprabhaNewsNetwork | Published : Aug 2, 2024 12:52 AM

ಸಾರಾಂಶ

ಗಿಡ-ಮರ ಬೆಳೆಸುವುದರಿಂದ ಅಲ್ಲಿ ಬರುವ ರೋಗಿಗಳಿಗೆ ಉತ್ತಮವಾದ ಆಮ್ಲಜನಕ ದೊರೆಯಲು ಅನುಕೂಲ

ಮುಂಡರಗಿ: ಶಿರಹಟ್ಟಿ ಶಾಸಕ ಡಾ.ಚಂದ್ರು ಲಮಾಣಿ ಜನ್ಮದಿನದ ನೆಪದಲ್ಲಿ ರಕ್ತದಾನ ಶಿಬಿರ, ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಗಳಿಗೆ ಹಾಲು, ಹಣ್ಣು ವಿತರಣೆ ಸೇರಿದಂತೆ ಅನೇಕ ಜನೋಪಯೋಗಿ ಕಾರ್ಯಕ್ರಮ ಮಾಡುತ್ತಿರುವುದು ಎಲ್ಲರೂ ಮೆಚ್ಚುವಂತದ್ದು ಎಂದು ಬಿಜೆಪಿ ಮುಂಡರಗಿ ಮಂಡಲದ ಅಧ್ಯಕ್ಷ ಹೇಮಗಿರೀಶ ಹಾವಿನಾಳ ಹೇಳಿದರು.

ಅವರು ಗುರವಾರ ಮುಂಡರಗಿ ಪಟ್ಟಣದಲ್ಲಿ ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಜನ್ಮದಿನದ ಅಂಗವಾಗಿ ಡಾ. ಚಂದ್ರು ಲಮಾಣಿ ಗೆಳೆಯರ ಬಳಗ ಹಾಗೂ ಅಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ರಕ್ತದಾನ ಶಿಬಿರ, ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಗಳಿಗೆ ಹಾಲು, ಹಣ್ಣು ವಿತರಣೆ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಶ್ರಮದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಜನ್ಮದಿನದ ನೆಪದಲ್ಲಿ ವಿನಾಕಾರಣ ಖರ್ಚು ಮಾಡುವ ಬದಲು ಅನಾರೋಗ್ಯದಿಂದ ಬಳಲುತ್ತಿರುವ ರೋಗಿಗಳಿಗೆ ಹಾಲು ಹಣ್ಣು ವಿತರಿಸುವುದು, ಯಾವುದೇ ಅಪಘಾತ ಅಥವಾ ದುರಂತದಲ್ಲಿ ತೊಂದರೆಗೊಳಗಾಗಿ ರಕ್ತ ಕಳೆದುಕೊಂಡು ಸಾವು ಬದುಕಿನ ಮಧ್ಯ ಹೋರಾಡುತ್ತಿರುವವರಿಗೆ ರಕ್ತ ಉಪಯೋಗವಾಗುವ ಮೂಲಕ ಜೀವ ಉಳಿಸುತ್ತದೆ. ಆಸ್ಪತ್ರೆ ಆವರಣದಲ್ಲಿ ಗಿಡ-ಮರ ಬೆಳೆಸುವುದರಿಂದ ಅಲ್ಲಿ ಬರುವ ರೋಗಿಗಳಿಗೆ ಉತ್ತಮವಾದ ಆಮ್ಲಜನಕ ದೊರೆಯಲು ಅನುಕೂಲವಾಗುತ್ತದೆ. ಒಟ್ಟಾರೆ ಇದೊಂದು ಉತ್ತಮವಾದ ಕಾರ್ಯಕ್ರಮವಾಗಿದೆ ಎಂದರು.

ಬಿಜೆಪಿ ಮುಖಂಡ ಲಿಂಗರಾಜಗೌಡ ಪಾಟೀಲ ಮಾತನಾಡಿ, ರಾಜ್ಯಾದ್ಯಂತ ಡೆಂಘೀ ಪ್ರಕರಣಗಳು ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ರೋಗಿಗಳಲ್ಲಿನ ಬಿಳಿ ರಕ್ತಕಣಗಳು ಕಡಿಮೆಯಾಗಿರುತ್ತವೆ. ಇಂತಹ ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ರಕ್ತದಾನಕ್ಕೆ ಇದು ಸೂಕ್ತ ಸಮಯವಾಗಿದೆ. ರಕ್ತದಾನ ಮಾಡುವುದರಿಂದ ಮನುಷ್ಯ ಆರೋಗ್ಯವಾಗಿರುವುದರ ಜತೆಗೆ ಕ್ರಿಯಾಶೀಲವಾಗಿರುತ್ತಾನೆ. ಆದ್ದರಿಂದ ಸ್ವಯಂ ಪ್ರೇರಣೆಯಿಂದ ರಕ್ತದಾನಕ್ಕೆ ಮುಂದಾಬೇಕು ಎಂದರು.

ಕಾರ್ಯಕ್ರಮದಲ್ಲಿ ಆನಂದಗೌಡ ಪಾಟೀಲ, ನಾಗೇಶ ಹುಬ್ಬಳ್ಳಿ, ಜ್ಯೋತಿ ಹಾನಗಲ್, ಆರ್.ಎಂ. ತಪ್ಪಡಿ, ಮಂಜುನಾಥಗೌಡ ಪಾಟೀಲ, ಪ್ರಶಾಂತಗೌಡ ಗುಡದಪ್ಪನವರ, ಬಸವರಾಜ ಬಿಳಿಮಗ್ಗದ, ಮೈಲಾರಪ್ಪ ಕಲಿಕೇರಿ, ರವೀಂದ್ರಗೌಡ ಪಾಟೀಲ, ಬಸವರಾಜ ಚಿಗನ್ನವರ್, ಓಂ. ಪ್ರಕಾಶ್ ಲಿಂಗಶೆಟ್ಟರ್, ಸೋಮಶೇಖರ ಹಕ್ಕಂಡಿ, ಗಿರೀಶ ಶೀರಿ, ಅರುಣಾ ಪಾಟೀಲ, ಪುಷ್ಪಾ ಉಕ್ಕಲಿ, ಮಂಜುಳಾ ಹೆಬ್ಬಳ್ಳಿಮಠ, ಪವಿತ್ರಾ ಕಲ್ಲುಕುಟುಗರ್, ಗೌಡರ್, ಮಾರುತಿ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Share this article