ಕುಮಟಾ: ಚಾತುರ್ಮಾಸ್ಯ ಕಾಲದಲ್ಲಿ ಭಕ್ತಿ, ಗುರುಸೇವೆ, ಸತ್ಸಂಗದಲ್ಲಿ ಒಗ್ಗಟ್ಟಿನಿಂದ ದುಡಿಯುವುದರಿಂದ ಸ್ವಯಂ ಶಕ್ತಿಯ ಪರಿಚಯವಾಗುತ್ತದೆ. ಧರ್ಮ-ಕರ್ಮಗಳ ಮಹತ್ವ ಅರಿವಾಗುತ್ತದೆ. ಸಮಾಜದ ಪ್ರಗತಿಯೂ ಆಗುತ್ತದೆ ಎಂದು ಕನ್ಯಾಡಿ ಶ್ರೀ ರಾಮಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಶ್ರೀಗಳು ನುಡಿದರು.
ತಾಲೂಕಿನ ಕೋನಳ್ಳಿಯ ಶ್ರೀ ವನದುರ್ಗಾ ಸಭಾಭವನದ ಬಳಿ ನೂತನ ನಿರ್ಮಿತ ಗುರುಭವನ ಹಾಗೂ ಸಭಾಕಾರ್ಯಕ್ರಮವನ್ನು ಶನಿವಾರ ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು. ಭಕ್ತಿ ಮಾರ್ಗವು ದೈವ ಸಾಕ್ಷಾತ್ಕಾರಕ್ಕೆ ಸಹಕಾರಿ, ಚಾತುರ್ಮಾಸ್ಯದ ಸ್ಥಳವು ಪುಣ್ಯಸಂಚಯಿತವಾಗಿ ಸಮೃದ್ಧಿ ಗಳಿಸುತ್ತದೆ. ಜು. ೧೦ರಿಂದ ಆ. ೨೦ರ ವರೆಗೆ ಸಂಕಲ್ಪಿಸಿರುವ ಚಾತುರ್ಮಾಸ್ಯದ ಸ್ಥಳದಲ್ಲಿ ದೇವತೆಗಳ ಸಂಚಾರ, ಸಾನ್ನಿಧ್ಯ ಪ್ರಾಪ್ತವಾಗುತ್ತದೆ. ಎಲ್ಲ ಭಕ್ತರು ಚಾತುರ್ಮಾಸ್ಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದರು.ಕೋನಳ್ಳಿಯ ವನದುರ್ಗಾ ಮಂದಿರದ ಪರಿಸರದಲ್ಲಿ ನಡೆಯಲಿರುವ ಬ್ರಹ್ಮಾನಂದ ಸರಸ್ವತಿ ಶ್ರೀಗಳ ಚಾತುರ್ಮಾಸ ವ್ರತಾಚರಣೆಗಾಗಿ ಶ್ರೀಗಳ ವಾಸ್ತವ್ಯ ಇನ್ನಿತರ ಬಳಕೆಗಾಗಿ ನಿರ್ಮಿಸಿದ ಗುರುಭವನದಲ್ಲಿ ಧಾರ್ಮಿಕ ವಿಧಿ-ವಿಧಾನಗಳನ್ನು ವೈದಿಕರು ನಡೆಸಿಕೊಟ್ಟರು.
ನಾಮಧಾರಿ ಸಂಘದ ಅಧ್ಯಕ್ಷ ಮಂಜುನಾಥ ನಾಯ್ಕ ಕೋಡ್ಕಣಿ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಚಾತುರ್ಮಾಸ್ಯ ಸಮನ್ವಯ ಸಮಿತಿ ಅಧ್ಯಕ್ಷ ಎಚ್.ಆರ್. ನಾಯ್ಕ, ಪ್ರಮುಖರಾದ ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸೂರಜ ನಾಯ್ಕ, ಮಂಜುನಾಥ ಎಲ್. ನಾಯ್ಕ, ಸುನೀಲ ನಾಯ್ಕ ಕಾರವಾರ, ಭಟ್ಕಳದ ಕೃಷ್ಣ ನಾಯ್ಕ, ಅರುಣ ನಾಯ್ಕ, ಕೋನಳ್ಳಿಯ ರಾಮಯ್ಯ ನಾಯ್ಕ, ರಾಮಪ್ಪ ನಾಯ್ಕ ಹೊನ್ನಾವರ, ಬಾಲಕೃಷ್ಣ ನಾಯ್ಕ, ವೈಭವ ನಾಯ್ಕ, ಪ್ರೊ. ಪ್ರಮೋದ ನಾಯ್ಕ ಇತರರು ಇದ್ದರು.ಶಂಕರ ಅಡಿಗುಂಡಿ ಸ್ವಾಗತಿಸಿದರು. ವಿಶ್ವನಾಥ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ನಾಯ್ಕ ಕಾರ್ಯಕ್ರಮ ನಿರೂಪಿಸಿದರು. ಗೋವಿಂದ ನಾಯ್ಕ ವಂದಿಸಿದರು.