ಕನ್ನಡಪ್ರಭ ವಾರ್ತೆ ಉಡುಪಿ
ಜಾತಿ, ಪಂಥ, ವಯಸ್ಸು, ಲಿಂಗ ಭೇದವಿದಲ್ಲದೇ 8 ರಿಂದ 80 ವರ್ಷದ ವರೆಗಿನ ಹಿಂದು ಪುರುಷ, ಮಹಿಳೆಯರಿಗೆ ಶ್ರೀಗಳು ತಪ್ತಮುದ್ರಾಧಾರಣೆಗೈದು, ಜಪಸರವನ್ನಿತ್ತು ಕೃಷ್ಣಮಂತ್ರೋಪದೇಶ ನೀಡಿ ಪ್ರಸಾದ ಸಹಿತ ಅನುಗ್ರಹಿಸಿದರು.ಸಮಸ್ತ ಹಿಂದು ಸಮಾಜದ ಸಂಘಟನೆ ಬಲಪಡಿಸುವುದು, ಎಲ್ಲರೂ ಸದಾಚಾರ ನಿಷ್ಠರಾಗಿ ನೆಮ್ಮದಿಯ ಜೀವನ ನಡೆಸುವ ಹಾಗೆ ಆಗಬೇಕು. ನಮ್ಮ ಆಚಾರ ವಿಚಾರಗಳನ್ನು ಜಾತಿ ಪಂಥಗಳ ಭೇದವಿಲ್ಲದೇ ಸಮಷ್ಟಿಯಾಗಿ ಪಾಲಿಸಿಕೊಂಡು ಬರುವಂತಾಗಬೇಕೆಂಬ ಸದುದ್ದೇಶದಿಂದ ಆಷಾಢ ಮಾಸದ ಪರ್ವಕಾಲದಲ್ಲಿ ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎಂದು ಶ್ರೀಗಳು ತಿಳಿಸಿದರು.
ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತವಿರುವ ಮಠದ ಎಲ್ಲ ಶಾಖೆಗಳಲ್ಲೂ ಇಂಥ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಇದೆ ಎಂದು ಮಠದ ಪ್ರಕಟಣೆ ತಿಳಿಸಿದೆ.ಪೂರ್ಣಪ್ರಜ್ಞ ವಿದ್ಯಾಪೀಠದ ಪ್ರಾಚಾರ್ಯ ಡಾ. ಸತ್ಯನಾರಾಯಣ ಆಚಾರ್ಯ, ಸಂಶೋಧನ ಕೇಂದ್ರದ ನಿರ್ದೇಶಕ ಡಾ. ವೀರನಾರಾಯಣ ಪಾಂಡುರಂಗಿ, ಪ್ರಧಾನ ವ್ಯವಸ್ಥಾಪಕ ವಿದ್ವಾನ್ ಶಶಾಂಕ ಭಟ್ ಹಾಗೂ ಪ್ರಾಧ್ಯಾಪಕರು, ಆಡಳಿತ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.