ರಂಗಭೂಮಿಯಿಂದ ಸಮಾಜ ಪರಿವರ್ತನೆ ಸಾಧ್ಯ: ಶಂಕರ

KannadaprabhaNewsNetwork | Published : Aug 26, 2024 1:36 AM

ಸಾರಾಂಶ

ಸಿನಿಮಾ, ಧಾರಾವಾಹಿ ದೂರದರ್ಶನ, ಮೊಬೈಲ್‌ನಿಂದಾಗದ ಕೆಲಸ ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಮಾಲತಿ ಮೈಸೂರು ದತ್ತಿ ಪ್ರಶಸ್ತಿ ಪುರಸ್ಕೃತರು, ವೃತ್ತಿ ಕಲಾವಿದ ಶಂಕರಜಿ ಹೂವಿನ ಹಿಪ್ಪರಗಿ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಳಗಿ

ಸಿನಿಮಾ, ಧಾರಾವಾಹಿ ದೂರದರ್ಶನ, ಮೊಬೈಲ್‌ನಿಂದಾಗದ ಕೆಲಸ ರಂಗಭೂಮಿಯಿಂದ ಸಾಮಾಜಿಕ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಮಾಲತಿ ಮೈಸೂರು ದತ್ತಿ ಪ್ರಶಸ್ತಿ ಪುರಸ್ಕೃತರು, ವೃತ್ತಿ ಕಲಾವಿದ ಶಂಕರಜಿ ಹೂವಿನ ಹಿಪ್ಪರಗಿ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲ್ಲೂಕು ಹವ್ಯಾಸಿ ಕಲಾ ಬಳಗದ ವತಿಯಿಂದ ಹಮ್ಮಿಕೊಂಡ ಕರ್ನಾಟಕ ನಾಟಕ ಅಕಾಡೆಮಿ ಕೊಡಮಾಡುವ ಕಲಬುರಗಿ ಜಿಲ್ಲೆಯಿಂದ ಪ್ರಶಸ್ತಿಗೆ ಆಯ್ಕೆಯಾದ ಸಿದ್ದಲಿಂಗಯ್ಯ ಸ್ವಾಮಿ ಕೋಡಗಿಮಠ, ಶಂಕರಜಿ ಹೂವಿನ ಹಿಪ್ಪರಗಿ ರವರ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿದ ಅವರು ಮಾತನಾಡಿದರು.

ರಂಗಭೂಮಿ ಉಳಿವಿಗಾಗಿ ಶ್ರಮಿಸೋಣ ವೇದಿಕೆಯನ್ನು ಸ್ವತಹ ನಾವು ವೇದಿಕೆ ಸೃಷ್ಟಿ ಮಾಡುತ್ತೆವೆ, ಪ್ರತಿವರ್ಷ ಕಲಾವಿದರಿಗೆ ಕೆಲಸ ಮಾಡುತ್ತೆವೆ ಪ್ರಶಸ್ತಿಗಳಿಗೆ ಯಾವತ್ತೂ ಆಸೆಪಟ್ಟವನಲ್ಲ, ನಮ್ಮನ್ನು ನಾಟಕ ಕವಿಗಳೇಂದು ಹೊರಬರಲು ತಾಳಿ ಹರಿಯಲಿಲ್ಲ ಶೀಲ ಉಳಿಯಲಿಲ್ಲ ಎಂಬ ನಾಟಕ ದಿಂದ ತಾಲೂಕಿನ ಕೊಡದೂರ ಗ್ರಾಮದಿಂದ ಜನತೆಗೆ ಚಿರಪರಿಚಿತನಾದೆ ಎಂದು ಹೇಳಿದರು.

ಕೆ.ರಾಮಚಂದ್ರಯ್ಯ ದತ್ತಿ ಪ್ರಶಸ್ತಿ ಪುರಸ್ಕೃತ ಸಿದ್ದಲಿಂಗಯ್ಯ ಸ್ವಾಮಿ ಮಾತನಾಡಿದ ಅವರು, ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು ಇದರಿಂದ ಪ್ರಶಸ್ತಿ ದೊರಕಿದ್ದು ಕಾಳಗಿ ತಾಲೂಕಿನ ಜನತೆಗೆ ಸಲ್ಲಬೇಕು. ನಾವೆಲ್ಲರೂ ಸೇರಿ ವೃತ್ತಿ ರಂಗಭೂಮಿ ಉಳಿವಿಗಾಗಿ ಶ್ರಮಿಸಬೇಕು ಎಂದರು.

ಬಿಜೆಪಿ ಚಿಂಚೋಳಿ ಮಂಡಲ ಅಧ್ಯಕ್ಷ ವಿಜಯಕುಮಾರ ಚೇಗಂಟಿ, ಬಿಜೆಪಿ ಚಿಂಚೋಳಿ ಮಂಡಲ ಕಾರ್ಯದರ್ಶಿ ರಾಜಶೇಖರ ಗುಡದಾ, ಹಿರಿಯ ಮುಖಂಡ ರಾಮರಾವ ಪಾಟೀಲ ಮೊಘ, ಶಿವರಾಜ ಪಾಟೀಲ ಗೋಣಗಿ, ಕಲಾವಿದ ಪ್ರಶಾಂತ ರಾಜಾಪುರ ಕೊಡದೂರ, ರೈತ ಸೇನಾಧ್ಯಕ್ಷ ವೀರಣ್ಣ ಗಂಗಾಣಿ, ಹಿಂದೂ ಜಾಗೃತಿ ಸೇನಾಧ್ಯಕ್ಷ ಶಂಕರ ಚ್ವಕಾ, ನಾಗರಾಜ ಚಿನ್ನ, ಶಿವಕುಮಾರ ಕೋಡ್ಲಿ, ಶರಣು ಸಾಲಿಮಠ,‌ ಶೇಖರ ಮಾನಶೇಟ್ಟಿ, ಕಾಳಶೆಟ್ಟಿ ಪಡಶೇಟ್ಟಿ, ಜಗದೀಶ ಪಾಟೀಲ, ಬಸವರಾಜ ತಳವಾರ, ಚಂದ್ರಕಾಂತ ಭೀಮಳ್ಳಿ, ಸಿದ್ದು ದುಕಾನದಾರ ಸಾಲಹಳ್ಳಿ ಇದ್ದರು.

Share this article