ಸಮಾಜಕಾರ್ಯ ವೃತ್ತಿಯಷ್ಟೇ ಅಲ್ಲ ಸೇವಾ ಮನೋಭಾವದ ಪಯಣ

KannadaprabhaNewsNetwork |  
Published : May 09, 2026, 01:30 AM IST
 | Kannada Prabha

ಸಾರಾಂಶ

ಸಮಾಜಕಾರ್ಯ ಎಂಬುದು ಕೇವಲ ಒಂದು ವೃತ್ತಿಯಲ್ಲ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುವ ಒಂದು ಸೇವಾ ಮನೋಭಾವದ ಪಯಣ ಎಂದು ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳು ಹಾಗೂ ಸಮಾಜ ವಿಜ್ಞಾನಿ ಪ್ರೊ. ಅಂಬಾದಾಸ್ ವೈ. ಮೋಹಿತೆ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ತುಮಕೂರು

ಸಮಾಜಕಾರ್ಯ ಎಂಬುದು ಕೇವಲ ಒಂದು ವೃತ್ತಿಯಲ್ಲ, ಅದು ಸಮಾಜದ ಕಟ್ಟಕಡೆಯ ವ್ಯಕ್ತಿಯ ಬದುಕಿನಲ್ಲಿ ಬದಲಾವಣೆ ತರುವ ಒಂದು ಸೇವಾ ಮನೋಭಾವದ ಪಯಣ ಎಂದು ಮಹಾರಾಷ್ಟ್ರದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯದರ್ಶಿಗಳು ಹಾಗೂ ಸಮಾಜ ವಿಜ್ಞಾನಿ ಪ್ರೊ. ಅಂಬಾದಾಸ್ ವೈ. ಮೋಹಿತೆ ಅವರು ಹೇಳಿದರು. ತುಮಕೂರು ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ಅಧ್ಯಯನ ಮತ್ತು ಸಂಶೋಧನಾ ವಿಭಾಗವು, ಭಾರತೀಯ ವೃತ್ತಿಪರ ಸಮಾಜ ಕಾರ್ಯಕರ್ತರ ಸಂಘದ ಸಹಯೋಗದೊಂದಿಗೆ ಎರಡು ದಿನಗಳ ರಾಷ್ಟ್ರಮಟ್ಟದ ಸಮಾಜ ಕಾರ್ಯ ವಿದ್ಯಾರ್ಥಿಗಳ ಹಬ್ಬ ಸ್ವರಂಗ್-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಮಾಜಕಾರ್ಯ ವಿದ್ಯಾರ್ಥಿಗೆ ಇರಬೇಕಾದ ಮೊದಲ ಮತ್ತು ಪ್ರಮುಖ ಗುಣವೆಂದರೆ ಸಹಾನುಭೂತಿ. ಎದುರಿಗಿರುವ ವ್ಯಕ್ತಿಯ ನೋವನ್ನು ಅವರ ಸ್ಥಾನದಲ್ಲಿ ನಿಂತು ಅರ್ಥಮಾಡಿಕೊಳ್ಳುವ ಶಕ್ತಿ ಇರಬೇಕು. ಕೇವಲ ಕನಿಕರ ತೋರಿಸುವುದಕ್ಕಿಂತ ಹೆಚ್ಚಾಗಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಸಂವೇದನಾಶೀಲತೆ ಮುಖ್ಯ. ಎದುರಿಗಿರುವವರು ಹೇಳುವುದನ್ನು ತಾಳ್ಮೆಯಿಂದ ಕೇಳಿಸಿಕೊಳ್ಳುವುದು. ವಿಷಯಗಳನ್ನು ಸರಳವಾಗಿ ಮತ್ತು ಸ್ಪಷ್ಟವಾಗಿ ಮನವರಿಕೆ ಮಾಡಿಕೊಡುವುದು. ಸಮಾಜಕಾರ್ಯದ ವೃತ್ತಿಪರ ನೈತಿಕತೆಯನ್ನು ಪಾಲಿಸುವುದು ಅತಿ ಮುಖ್ಯ. ಫಲಾನುಭವಿಗಳ ವೈಯಕ್ತಿಕ ಮಾಹಿತಿ ಮತ್ತು ರಹಸ್ಯಗಳನ್ನು ಕಾಪಾಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿರುತ್ತದೆ. ಯಾವುದೇ ತಾರತಮ್ಯವಿಲ್ಲದೆ (ಜಾತಿ, ಧರ್ಮ, ಲಿಂಗ) ಎಲ್ಲರನ್ನೂ ಸಮಾನವಾಗಿ ಕಾಣುವ ಗುಣವಿರಬೇಕು ಎಂದರು.

ಮುಖ್ಯ ಅತಿಥಿಯಾಗಿ ತುಮಕೂರು ವಿವಿಯ ಮಾಜಿ ಕುಲಪತಿ ಪ್ರೊ. ವೈ. ಎಸ್. ಸಿದ್ದೇಗೌಡ ಮಾತನಾಡಿ ಸಮಾಜಕಾರ್ಯದ ವೃತ್ತಿಪರ ನೈತಿಕತೆಯನ್ನು ಪಾಲಿಸುವುದು ಅತಿ ಮುಖ್ಯ. ಫಲಾನುಭವಿಗಳ ವೈಯಕ್ತಿಕ ಮಾಹಿತಿ ಮತ್ತು ರಹಸ್ಯಗಳನ್ನು ಕಾಪಾಡುವುದು ವಿದ್ಯಾರ್ಥಿಗಳ ಜವಾಬ್ದಾರಿಯಾಗಿರುತ್ತದೆ. ಯಾವುದೇ ತಾರತಮ್ಯವಿಲ್ಲದೆ (ಜಾತಿ, ಧರ್ಮ, ಲಿಂಗ) ಎಲ್ಲರನ್ನೂ ಸಮಾನವಾಗಿ ಕಾಣುವ ಗುಣವಿರಬೇಕು. ಸಾಮಾಜಿಕ ಬದಲಾವಣೆ ಎಂಬುದು ರಾತ್ರೋರಾತ್ರಿ ಸಂಭವಿಸುವುದಿಲ್ಲ. ಸವಾಲುಗಳು ಎದುರಾದಾಗ ದೃತಿಗೆಡದೆ, ಸತತ ಪ್ರಯತ್ನ ಮತ್ತು ತಾಳ್ಮೆಯಿಂದ ಕೆಲಸ ಮಾಡುವ ಮನೋಭಾವ ಇರಬೇಕು ಎಂದರು.

ನಿಮ್ಹಾನ್ಸ್ ಮನೋವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮಾಜಿ ಮುಖ್ಯಸ್ಥರು, ಐ ಎಸ್ ಪಿ ಎಸ್ ಡಬ್ಲ್ಯೂ ನ ಶಾಶ್ವತ ಸಲಹೆಗರ ಪ್ರೊ. ಐ. ಎ. ಶರೀಫ್ ಮಾತನಾಡಿ ಸಮಾಜದ ದುರ್ಬಲ ವರ್ಗದವರಿಗೆ ನ್ಯಾಯ ಕೊಡಿಸಲು ಭಾರತೀಯ ಸಂವಿಧಾನದ ಮೂಲಭೂತ ಹಕ್ಕುಗಳು, ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾಯ್ದೆಗಳು ಹಾಗೂ ಮಾನವ ಹಕ್ಕುಗಳ ಬಗ್ಗೆ ಕನಿಷ್ಠ ಜ್ಞಾನವಿರಬೇಕು. ಇಂದಿನ ಕಾಲದಲ್ಲಿ ಸಾಮಾಜಿಕ ಬದಲಾವಣೆ ತರಲು ತಂತ್ರಜ್ಞಾನದ ಅರಿವು ಮುಖ್ಯ ಎಂದರು. ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ರಮೇಶ್ ಬಿ.ಮಾತನಾಡಿ ಸೇವೆ ಮಾಡುತ್ತ ಮಾಡುತ್ತ ನಮ್ಮ ನಾವು ತೊಡಗಿಸಬೇಕು. ಕಾರ್ಪೋರೆಟ್ ನಲ್ಲಿ ಗುರುತಿಸುವಿಕೆ ಜೊತೆಗೆ ಸೇವೆ ಯಲ್ಲೂ ತೊಗಡಿಸಿಕೊಳ್ಳುವುದು ಅಗತ್ಯ.ಸಮಾಜ ಕಾರ್ಯ ವಿದ್ಯಾರ್ಥಿಗಳನ್ನು ಶಿಸ್ತು, ವರ್ತನೆ, ನಡೆಯಿಂದ ಗುರುತಿಸಬಹುದು ಎಂದರು. ಸಿಂಡಿಕೇಟ್ ಸದಸ್ಯರಾದ ಡಾ. ಮನೋಜ್ ಎಚ್. ಆರ್. ಮಾತನಾಡಿ ಪ್ರತಿದಿನ ಹೊಸ ಹೊಸ ವ್ಯಕ್ತಿಗಳನ್ನು ಭೇಟಿಯಾಗುವುದರಿಂದ, ಮನುಷ್ಯರ ಭಾವನೆಗಳು, ವರ್ತನೆಗಳು ಮತ್ತು ಅವರ ಪ್ರತಿಕ್ರಿಯೆಗಳನ್ನು ಅರ್ಥಮಾಡಿಕೊಳ್ಳುವ ಕಲಿಕೆ ಸಿಗುತ್ತದೆ. ಒಂದು ಸಣ್ಣ ಸನ್ನಿವೇಶದಲ್ಲಿ ಜನರು ಹೇಗೆ ವರ್ತಿಸುತ್ತಾರೆ ಎಂಬುದನ್ನು ಗಮನಿಸುವುದು ಇವರಿಗೆ ದೊಡ್ಡ ಪಾಠ.ಒಂದು ಸಮಸ್ಯೆ ಮೇಲ್ನೋಟಕ್ಕೆ ಕಾಣುವುದಕ್ಕಿಂತ ಭಿನ್ನವಾಗಿರಬಹುದು. ಅದರ ಮೂಲ ಕಾರಣವನ್ನು ಹುಡುಕುವುದು ಇವರ ದೈನಂದಿನ ಕಲಿಕೆ ಎಂದರು. ತುಮಕೂರು ವಿವಿ ಕುಲಸಚಿವರಾದ ನಾಹಿದಾ ಜಮ್ ಜಮ್ ಮಾತನಾಡಿ ಸಮಾಜಕಾರ್ಯ ವಿದ್ಯಾರ್ಥಿಗಳಿಗೆ ಇಡೀ ಸಮಾಜವೇ ಒಂದು ತೆರೆದ ವಿಶ್ವವಿದ್ಯಾಲಯ. ಅವರು ಅನುಭವದ ಮೂಲಕ ಪಡೆಯುವ ಶಿಕ್ಷಣಕ್ಕೆ ಬೆಲೆ ಕಟ್ಟಲಾಗದು. ಸೀಮಿತ ಸಂಪನ್ಮೂಲಗಳಲ್ಲಿ ಜನರಿಗೆ ಹೇಗೆ ಉತ್ತಮ ಸಹಾಯ ಮಾಡಬಹುದು ಎಂಬ ಸಂಕುಚಿತ ಸಂಪನ್ಮೂಲ ನಿರ್ವಹಣೆಯನ್ನು ಇವರು ಕಲಿಯುತ್ತಾರೆ ಎಂದರು. ತುಮಕೂರು ವಿವಿ ಕಲಾ ನಿಕಾಯದ ಡೀನ್ ಹಾಗೂ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷರಾದ ಪ್ರೊ. ಪರಶುರಾಮ ಕೆ. ಜಿ. ಅವರು ಸ್ವಾಗತಿಸಿದರೆ, ಡಾ. ಆರ್. ಧನಶೇಖರ ಪಾಂಡಿಯನ್ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೆಳವಾಡಿಯಲ್ಲಿ ಅಂಬೇಡ್ಕರ್‌ ಪುತ್ಥಳಿ ಅನಾವರಣ
ಸಂಬಳ ಹೆಚ್ಚಳಕ್ಕೆ ಒತ್ತಾಯಿಸಿ ಶಾಹಿ ಕಂಪನಿ ಕಾರ್ಮಿಕರ ಪ್ರತಿಭಟನೆ