ಬಿಎಸ್‌ವೈ ಅಭಿಮಾನೋತ್ಸವ : ಪೂರ್ಣಕುಂಭ ಹೊತ್ತು ಸಾಗಿದ ಸೌಭಾಗ್ಯ

KannadaprabhaNewsNetwork |  
Published : May 09, 2026, 01:15 AM IST
Chitradurga

ಸಾರಾಂಶ

ಬಿಎಸ್‌ವೈ ಅಭಿಮಾನೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಚಿತ್ರದುರ್ಗ ಪುರಪ್ರವೇಶ ಮಾಡಿದ ಯಡಿಯೂರಪ್ಪ ಅವರಿೆಗ ಮಹಿಳೆಯರು ಪೂರ್ಣಕುಂಭ ಸ್ವಾಗತದ ಜೊತೆಗೆ ಹಲಗೆ ಸದ್ದಿಗೆ ಕುಣಿದು ಕುಪ್ಪಳಿಸಿ ನೆರೆದಿದ್ದವರ ಗಮನ ಸೆಳೆದರು.

ಚಿತ್ರದುರ್ಗ: ಬಿಎಸ್‌ವೈ ಅಭಿಮಾನೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ಚಿತ್ರದುರ್ಗ ಪುರಪ್ರವೇಶ ಮಾಡಿದ ಯಡಿಯೂರಪ್ಪ ಅವರಿೆಗ ಮಹಿಳೆಯರು ಪೂರ್ಣಕುಂಭ ಸ್ವಾಗತದ ಜೊತೆಗೆ ಹಲಗೆ ಸದ್ದಿಗೆ ಕುಣಿದು ಕುಪ್ಪಳಿಸಿ ನೆರೆದಿದ್ದವರ ಗಮನ ಸೆಳೆದರು.

ಆರು ಗಂಟೆ ಸುಮಾರಿಗೆ ಚಿತ್ರದುರ್ಗ ಪ್ರವೇಶ

ಯಡಿಯೂರಪ್ಪ ಅವರು ಸಂಜೆ ನಾಲ್ಕು ಗಂಟೆ ವೇಳೆಗೆ ಚಿತ್ರದುರ್ಗಕ್ಕೆ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿತ್ತು. ಆದರೆ ಸೂರ್ಯಾಸ್ತದ ವೇಳೆಗೆ ಆರು ಗಂಟೆ ಸುಮಾರಿಗೆ ಚಿತ್ರದುರ್ಗ ಪ್ರವೇಶಿಸಿದಾಗ ವಾತಾವರಣ ತಣ್ಣಗಿತ್ತು.

ಬಸವೇಶ್ವರ ಪ್ರತಿಮೆ ಪಕ್ಕದಿಂದ ಹೊರಟ ಮೆರವಣಿಗೆ ಆರಂಭದಲ್ಲಿ ಮಹಿಳೆಯರು ಪೂರ್ಣ ಕುಂಭ ಸ್ವಾಗತ ಕೋರಿದರು. ನಂತರ ಒನಕೆ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ವಿಜಯಗರ ಜಿಲ್ಲೆಯಿಂದ ಆಗಮಿಸಿದ್ದ ಐದು ನೂರಕ್ಕೂ ಹೆಚ್ಚು ಮಹಿಳೆಯರು ಅತ್ಯಂತ ಸಂಭ್ರಮದಿಂದಲೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ದಾರಿಯುದಕ್ಕೂ ಸಾಗಿದ ಅವರ ಮೊಗದಲ್ಲಿ ಖುಷಿ ಮನೆ ಮಾಡಿತ್ತು. ಮನೆಯಲ್ಲಿ ಯಾವುದೋ ಸಂಭ್ರದ ಕಾರ್ಯ ನಡೆಯುತ್ತಿದೆ ಎಂಬಷ್ಟರ ಮಟ್ಟಿಗೆ ಮೆರವಣಿಗೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು.

ಪೂರ್ಣಕುಂಭ ಹೊತ್ತ ಮಹಿಳೆಯರ  ಸ್ವಾಗತ

ಪೂರ್ಣಕುಂಭ ಹೊತ್ತ ಮಹಿಳೆಯರೊಟ್ಟಿಗೆ ಚಿತ್ರದುರ್ಗ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸೌಭಾಗ್ಯ ಬಸವರಾಜನ್ ಸ್ವತಹ ಕುಂಬ ಹೊತ್ತು ಸಾಗಿ ಮೆರವಣಿಗೆ ಮೆರಗು ತಂದರು. ಚಿತ್ರದುರ್ಗ ಎಂದಾಕ್ಷಣ ಒನಕೆ ಓಬವ್ವ ನೆನಪಾಗುತ್ತಾಳೆ. ಇಡೀ ಮೆರವಣಿಗೆ ಓಬವ್ವಳ ನಾಡನ್ನು ಪುನರ್ ನೆನಪಿಸಿತು. ಕೈಯಲ್ಲಿ ಒನಕೆ ಹಿಡಿದ ಸಾವಿರಾರು ಮಹಿಳೆಯರು ಐತಿಹಾಸಿಕ ನಗರದ ಮಹತ್ವ ಸಾರಿದರು.

ಸಂಜೆ ಆರು ಗಂಟೆಗೆ ಆರಂಭವಾದ ಮೆರವಣಿಗೆ ಏಳುವರೆ ಆದರೂ ಗಾಂಧಿ ವೃತ್ತಕ್ಕೆ ಆಗಮಿಸಿರಲಿಲ್ಲ. ಒಂದು ಕಿ.ಮೀ ದಾರಿ ಕ್ರಮಿಸಲು ಒಂದುವರೆ ತಾಸು ತೆಗೆದುಕೊಂಡಿತ್ತು. ಮಹಿಳೆಯರು ಅತ್ಯಂತ ಶಿಸ್ತುಬದ್ಧರಾಗಿ ಮೆರವಣಿಗೆ ಜತೆ ಹೆಜ್ಜೆ ಹಾಕಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

ಮಂತ್ರಿಗಿರಿ ಲಾಬಿಗೆ ಅವಕಾಶ ಕೊಡಬೇಡಿ : ಡಿಕೆಗೆ ವರಿಷ್ಠರು
ಜು.1ರಿಂದ ರಾಜ್ಯದಲ್ಲಿ ಜಿ ರಾಮ್‌ ಜಿ