ಕಾರ್ಮಿಕರ ಸಂಘಟನೆಯಿಂದ ಸಮಾಜಮುಖಿ ಕಾರ್ಯ ಸಾಧ್ಯ

KannadaprabhaNewsNetwork |  
Published : Aug 29, 2026, 01:30 AM IST
ದಿ.27-ಅರ್.ಪಿ.ಟಿ.3ಪಿ ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತ್ ಸಭಾಭವನದಲ್ಲಿ ಏರ್ಪಡಿಸಲಾಗಿದ್ದ ತಾಲ್ಲೂಕ್ ಕಾರ್ಮಿಕರ ಸಭೆಯಲ್ಲಿ ಪಿಎಸ್‍ಐ ರಾಜುರೆಡ್ಡಿ ಭಾಗವಹಿಸಿ ``ಹರಿಗೆ ಸಂದರ್ಭದಲ್ಲಿ ಮೃತಳಾದ ಸುಮಾ ಕುಟುಂಬಕ್ಕೆ ಕಾರ್ಮಿಕರ ಸಂಘಟನೆಯಿಂದ ನೀಡಲಾದ ಆರ್ಥಿಕಾ ನೆರವು’’ಯನ್ನು ವಿತರಿಸಿದರು. | Kannada Prabha

ಸಾರಾಂಶ

Social work is possible through workers' organizations.

ಕನ್ನಡಪ್ರಭ ವಾರ್ತೆ ರಿಪ್ಪನ್‍ಪೇಟೆ

ಕಾರ್ಮಿಕರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಸಮಾಜಮುಖಿ ಕಾರ್ಯದಲ್ಲಿಯೂ ಸಂಘಟನೆ ತೊಡಗಿದೆ ಎಂದು ಆಖಿಲ ಕರ್ನಾಟಕ ಕಟ್ಟಡ ಹಾಗೂ ಅಸಂಘಟಿತ ಕಾರ್ಮಿಕರ ಒಕ್ಕೂಟದ ಜಿಲ್ಲಾ ಕಾರ್ಯಾಧ್ಯಕ್ಷ ಸುಂದರೇಶ ಬಾಬು ಹೇಳಿದರು.

ರಿಪ್ಪನ್‍ಪೇಟೆ ಗ್ರಾಮ ಪಂಚಾಯಿತಿ ಸಭಾಭವನದಲ್ಲಿ ಏರ್ಪಡಿಸಿದ್ದ ತಾಲೂಕು ಕಾರ್ಮಿಕರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಕಾರ್ಮಿಕರಿಗೆ ಸವಲತ್ತುಗಳ ಮಾಹಿತಿ ನೀಡಲಾಗುತ್ತಿದೆ ಎಂದರು.

ಅನಾರೋಗ್ಯ ಪೀಡಿತ ಕಾರ್ಮಿಕರ ಕುಟುಂಬಕ್ಕೆ ನೆರವು, ಸರ್ಕಾರಿ ಶಾಲೆಗಳ ಆಭಿವೃದ್ಧಿಗೆ ಸಹಾಯ, ಧಾರ್ಮಿಕ ಕೇಂದ್ರಗಳ ಸ್ವಚ್ಚತೆ ಮತ್ತಿತರ ಕಾರ್ಯಗಳಲ್ಲಿ ನಿರಂತರ ತೊಡಗಿಕೊಂಡಿದೆ. ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಆಧಾರ ರಹಿತ ಆರೋಪಗಳನ್ನು ಮಾಡುತ್ತಿದ್ದಾರೆ. ಕಾರ್ಮಿಕರು ಇಂತಹ ಸುಳ್ಳು ವಂದತಿಗಳಿಗೆ ಹೆದರಿಕೊಳ್ಳುವ ಅಗತ್ಯವಿಲ್ಲ. ಪ್ರಾಮಾಣಿಕವಾಗಿ ಸಂಘವನ್ನು ಪ್ರಗತಿಯತ್ತ ಸಾಗಿಸುವ ನಿಟ್ಟಿನಲ್ಲಿ ಸಂಘಟನೆ ತನ್ನ ಕೆಲಸ ಮಾಡಬೇಕು ಎಂದರು.

ಹೆರಿಗೆ ಸಂದರ್ಭ ಸುಮಾ ಎಂಬುವರು ಮೃತಪಟ್ಟಿದ್ದು, ಅವರ ಮಗುವಿನ ಯೋಗಕ್ಷೇಮಕ್ಕಾಗಿ ಸಂಘದಿಂದ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯತೆ ಮೆರೆಯಲಾಯಿತು,

ಸಬ್‍ಇನ್‌ಸ್ಪೆಕ್ಟರ್‌ ರಾಜುರೆಡ್ಡಿ, ಸಂಘದ ಜಿಲ್ಲಾಧ್ಯಕ್ಷ ಸಂಜಯ್‍ಕುಮಾರ್, ತಾಲೂಕು ಆಧ್ಯಕ್ಷ ಮಹಮ್ಮದ್‍ ಹುಸೇನ್, ಶಂಕರಾಚಾರ್ಯ, ರಾಘವೇಂದ್ರ,ಪ್ರಭಾಕರ್ ಅಚಾರ್ಯ, ಕೃಷ್ಣಪ್ಪ, ಮಂಜುನಾಥ ಅಚಾರ್ ಇನ್ನಿತರರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯ ಸರ್ಕಾರ ಕಸ್ತೂರಿ ರಂಗನ್ ವರದಿ ತಿರಸ್ಕರಿಸಲಿದೆ: ಭೀಮಣ್ಣ ನಾಯ್ಕ
ಚಿಂತಕರ ವಿಚಾರಧಾರೆ ಇಂದಿಗೂ ಪ್ರಸ್ತುತ: ಉಮೇಶ