25ರಂದು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ೧೬ನೇ ಪಾಂಡೇಶ್ವರ ಶಾಖೆ ಉದ್ಘಾಟನೆ

KannadaprabhaNewsNetwork |  
Published : Oct 22, 2025, 01:03 AM IST
32 | Kannada Prabha

ಸಾರಾಂಶ

ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೧೬ನೇ ಶಾಖೆ ಉದ್ಘಾಟನಾ ಸಮಾರಂಭ ೨೫ರಂದು ಬೆಳಗ್ಗೆ ೧೦.೩೫ಕ್ಕೆ ಮಂಗಳೂರಿನ ಪಾಂಡೇಶ್ವರ ಎ.ಬಿ.ಶೆಟ್ಟಿ ಸರ್ಕಲ್ ಬಳಿಯ ಪೆರೇಡಿಯಂ ಪ್ಲಾಝಾದಲ್ಲಿ ನಡೆಯಲಿದೆ

ಪುತ್ತೂರು: ಆದರ್ಶ ವಿವಿಧೋದ್ದೇಶ ಸಹಕಾರ ಸಂಘದ ೧೬ನೇ ಶಾಖೆ ಉದ್ಘಾಟನಾ ಸಮಾರಂಭ ೨೫ರಂದು ಬೆಳಗ್ಗೆ ೧೦.೩೫ಕ್ಕೆ ಮಂಗಳೂರಿನ ಪಾಂಡೇಶ್ವರ ಎ.ಬಿ.ಶೆಟ್ಟಿ ಸರ್ಕಲ್ ಬಳಿಯ ಪೆರೇಡಿಯಂ ಪ್ಲಾಝಾದಲ್ಲಿ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಸಹಕಾರಿ ರತ್ನ ಕೆ. ಸೀತಾರಾಮ ರೈ ತಿಳಿಸಿದ್ದಾರೆ. ದ.ಕ.ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ನೂತನ ಶಾಖೆಯನ್ನು ಮಂಗಳೂರು ಎ.ಜೆ. ಹಾಸ್ಪಿಟಲ್ ಮತ್ತು ರಿಸರ್ಚ್ ಸೆಂಟರ್‌ನ ಚೇರ್‌ಮ್ಯಾನ್ ಡಾ. ಎ.ಜೆ. ಶೆಟ್ಟಿ ಉದ್ಘಾಟಿಸಲಿದ್ದಾರೆ. ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಡಿ. ವೇದವ್ಯಾಸ ಕಾಮತ್ ಭದ್ರತಾ ಕೊಠಡಿ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಕಂಪ್ಯೂಟರ್ ಉದ್ಘಾಟಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯ ಐವಾನ್ ಡಿಸೋಜ ಪ್ರಥಮ ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಆದರ್ಶ ವಿವಿಧೋದ್ಧೇಶ ಸಹಕಾರ ಸಂಘವು ಸವಣೂರು ಕೆ ಸೀತಾರಾಮ ರೈ ಅಧ್ಯಕ್ಷತೆಯಲ್ಲಿ ೨೦೦೨ರ ಮಾ.೧೧ರಂದು ಆರಂಭಗೊಂಡಿದ್ದು, ಕಳೆದ ೨೪ ವರ್ಷಗಳಲ್ಲಿ ೧೫ ಶಾಖೆಗಳನ್ನು ಹೊಂದಿದೆ. ದ.ಕ. ಜಿಲ್ಲೆಯ ಗ್ರಾಮೀಣ ಪ್ರದೇಶಗಳಾದ ಪುತ್ತೂರು, ಸುಳ್ಯ, ಸುಬ್ರಹ್ಮಣ್ಯ, ವಿಟ್ಲ, ಉಜಿರೆ, ಕಡಬ, ಸವಣೂರು, ಸಾಲೆತ್ತೂರು, ಕುಂಬ್ರ, ಬೆಳ್ಳಾರೆ, ಪಂಜ, ಬೊಳುವಾರು, ಮಡಂತ್ಯಾರು, ಬಿ.ಸಿ.ರೋಡ್ ಮತ್ತು ಕಲ್ಲಡ್ಕದಲ್ಲಿ ಶಾಖೆಗಳನ್ನು ಹೊಂದಿರುತ್ತದೆ. ಎಲ್ಲಾ ಶಾಖೆಗಳನ್ನು ಒಳಗೊಂಡು ೨೦೨೪-೨೫ನೇ ಸಾಲಿನಲ್ಲಿ ಒಟ್ಟು ರು. ೮೨೯.೮೮ ಕೋಟಿ ವ್ಯವಹಾರ ನಡೆಸಿ, ದಾಖಲೆಯ ರು.೨.೧ ಕೋಟಿ ಲಾಭಾಂಶ ಗಳಿಸಿರುತ್ತದೆ. ಪ್ರಸ್ತುತ ಸಂಘದಲ್ಲಿ ೩೦,೪೦೦ ಸದಸ್ಯರಿದ್ದು, ಒಟ್ಟು ರು. ೩.೪೫ ಕೋಟಿ ಪಾಲು ಬಂಡವಾಳ ಹೊಂದಿದೆ. ಪ್ರಸ್ತುತ ರು. ೧೫೫ ಕೋಟಿ ಠೇವಣಾತಿ ಹೊಂದಿದ್ದು, ರು. ೧೩೮ ಕೋಟಿ ವಿವಿಧ ರೀತಿಯ ಸಾಲ ನೀಡಿದೆ. ಸಂಘದ ಸಾಧನೆಯನ್ನು ಪರಿಗಣಿಸಿ ೬೪ನೇ ಅಖಿಲ ಭಾರತ ಸಹಕಾರ ಸಪ್ತಾಹದಲ್ಲಿ ಅವಿಭಜಿತ ಜಿಲ್ಲೆಯ ‘ಅತ್ಯುತ್ತಮ ಸಹಕಾರ ಸಂಘ’ ಪ್ರಶಸ್ತಿ ಪತ್ರ ಪಡೆದುಕೊಂಡಿದೆ. ಅಲ್ಲದೆ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಿಂದ ೬ನೇ ಬಾರಿ ‘ಸಾಧನಾ ಪ್ರಶಸ್ತಿ’ಪಡೆದುಕೊಂಡಿದೆ. ಸಂಘದ ವತಿಯಿಂದ ವಿವಿಧ ನಿಧಿಗಳಾದ ಕ್ಷೇಮ ನಿಧಿ, ಕಟ್ಟಡ ನಿಧಿ, ಮರಣೋತ್ತರ ನಿಧಿ, ಕರಡು ಸಾಲದ ನಿಧಿ, ಧರ್ಮಾರ್ಥ ಮತ್ತು ವಿದ್ಯಾನಿಧಿ, ನೌಕರರ ಕಲ್ಯಾಣ ನಿಧಿ, ಸದಸ್ಯರ ಕಲ್ಯಾಣ ನಿಧಿ, ಸಮಾನ್ಯ ಕ್ಷೇಮ ನಿಧಿಗಳನ್ನು ಒಳಗೊಂಡಂತೆ ಒಟ್ಟು ರು. ೫.೮೭ ಕೋಟಿ ಮೊತ್ತವನ್ನು ಹೊಂದಿದೆ. ಸಂಘವು ಸ್ಥಾಪನೆಗೊಂಡ ವರ್ಷದಿಂದ ಆರಂಭಗೊಂಡು ೨೦೨೪-೨೫ ನೇ ಸಾಲಿನ ತನಕ ಅಡಿಟ್ ವರ್ಗೀಕರಣದಲ್ಲಿ ಎ ತರಗತಿ ಪಡೆದುಕೊಂಡಿದೆ. ೨೦೨೪-೨೫ನೇ ಸಾಲಿನಲ್ಲಿ ಶೇ. ೧೭ ಡಿವಿಡೆಂಡ್ ವಿತರಿಸಿದೆ. ಸಂಘದ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲೆಗಳಲ್ಲಿ ೭ರಿಂದ ೧೦ನೇ ತರಗತಿಯಲ್ಲಿ ಕಲಿಯುತ್ತಿರುವ ಬಡ ಪ್ರತಿಭಾವಂತ ಮಕ್ಕಳಿಗೆ ವಿದ್ಯಾನಿಧಿ ಸಹಾಯಧನವಾಗಿ ಈ ತನಕ ಒಟ್ಟು ೧೫೪೫ ಮಕ್ಕಳಿಗೆ ರು. ೩,೧೨,೯೦೦ ವಿತರಣೆ ಮಾಡಲಾಗಿದೆ. ಸಂಘದ ಕೇಂದ್ರ ಕಚೇರಿಗೆ ಸ್ವಂತ ಕಟ್ಟಡದ ನಿರ್ಮಾಣವು ಪ್ರಗತಿ ಹಂತದಲ್ಲಿದ್ದು, ಸಂಘಕ್ಕೆ ೨೫ ವರ್ಷಗಳು ಪೂರೈಸುವುದರೊಳಗೆ ಕಟ್ಟಡ ನಿರ್ಮಾಣದ ಕೆಲಸ ಪೂರ್ಣಗೊಳಿಸಿ ಲೋಕಾರ್ಪಣೆಗೊಳಿಸಲಾಗುವುದು ಎಂದು ಸವಣೂರು ಸೀತಾರಾಮ ರೈ ತಿಳಿಸಿದ್ದಾರೆ.

PREV

Recommended Stories

ಬೆಂಗಳೂರು : ದೀಪಾವಳಿ ವೇಳೆ ವಾಯುಮಾಲಿನ್ಯ ಹೆಚ್ಚಾಗಲಿಲ್ಲ, ಭಾರೀ ಇಳಿಕೆ!
ಹೊಸೂರಿಗೆ ಮೆಟ್ರೋ ವಿಸ್ತರಣೆ ಅಸಾಧ್ಯ : ರಾಜ್ಯ ಸರ್ಕಾರಕ್ಕೆ ಬಿಎಂಆರ್‌ಸಿಎಲ್‌ ವರದಿ