ಸಮಾಜ, ಸಂಸ್ಕೃತಿಯ ಸಂಪರ್ಕ ಎಂಜಿನಿಯರ್‌ಗಳು

KannadaprabhaNewsNetwork |  
Published : Nov 27, 2024, 01:01 AM IST
26ಡಿಡಬ್ಲೂಡಿ4ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ಸ ಏರ್ಪಡಿಸಿದ್ದ ಅಸೋಸಿಯೇಷನ್ ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ. | Kannada Prabha

ಸಾರಾಂಶ

ದೇಶ ಕಟ್ಟುವಲ್ಲಿ ಮತ್ತು ಪ್ರಗತಿಪಥದತ್ತ ಸಾಗುವಲ್ಲಿ ಎಂಜಿನಿಯರ್‌ಗಳ ಪಾತ್ರ ಪ್ರಮುಖ. ಈ ಪೈಕಿ ಸರ್‌.ಎಂ. ವಿಶ್ವೇಶ್ವರಯ್ಯನವರು ಎಂಜಿನಿಯರ್ಸ್ ಸಮೂಹಕ್ಕೆ ಆದರ್ಶರು.

ಧಾರವಾಡ:

ಸಿವಿಲ್ ಎಂಜಿನಿಯರಿಂಗ್‌ ಕ್ಷೇತ್ರವು ಸಮಾಜ, ಸಂಸ್ಕೃತಿ ಮತ್ತು ಮಾನವ ನಡವಳಿಕೆಯೊಂದಿಗೆ ಅಂತರ್‌ ಸಂಪರ್ಕ ಹೊಂದಿದ ಕ್ಷೇತ್ರ. ಅದನ್ನು ಸುಭದ್ರವಾಗಿ ಕಟ್ಟಿಕೊಡುವ ಕಾರ್ಯವನ್ನು ತಮ್ಮ ಎಂಜಿನಿಯರ್‌ ಸಂಘ ಮಾಡುತ್ತಿರುವುದು ನಗರಕ್ಕೆ ಹೆಮ್ಮೆಯ ಸಂಗತಿ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು.

ಅಸೋಸಿಯೇಷನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಎಂಜಿನಿಯರ್ಸ್ ವತಿಯಿಂದ ಆಲೂರ ವೆಂಕಟರಾವ ಸಭಾಭವನದಲ್ಲಿ ಏರ್ಪಡಿಸಿದ್ದ ನೂತನ ಪದಾಧಿಕಾರಿಗಳ ಪದಗ್ರಹಣಕ್ಕೆ ಚಾಲನೆ ನೀಡಿದ ಅವರು, ನೂತನ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗಳನ್ನು ಸಮರ್ಥವಾಗಿ, ಎಲ್ಲರಿಗೂ ಸಮಾನವಾಗಿ ಹಂಚಿಕೊಳ್ಳುವ ಕಾರ್ಯವಾಗಬೇಕು. ಆಗ ಸಂಸ್ಥೆ ಬೆಳೆಯುತ್ತದೆ ಎಂದು ಹೇಳಿದರು.

ವಿಧಾನ ಪರಿಷತ್‌ ಸದಸ್ಯರಾದ ಎಸ್.ವಿ. ಸಂಕನೂರ ತಮ್ಮ ಸಂದೇಶದಲ್ಲಿ ದೇಶ ಕಟ್ಟುವಲ್ಲಿ ಮತ್ತು ಪ್ರಗತಿಪಥದತ್ತ ಸಾಗುವಲ್ಲಿ ಎಂಜಿನಿಯರ್‌ಗಳ ಪಾತ್ರ ಪ್ರಮುಖ. ಈ ಪೈಕಿ ಸರ್‌.ಎಂ. ವಿಶ್ವೇಶ್ವರಯ್ಯನವರು ಎಂಜಿನಿಯರ್ಸ್ ಸಮೂಹಕ್ಕೆ ಆದರ್ಶರು. ದೇಶದ ಆಣೆಕಟ್ಟು, ಕಾರ್ಖಾನೆಗಳ ನಿರ್ಮಾಣ ಹೀಗೆ ಅಭಿವೃದ್ಧಿಶೀಲ ವಿಚಾರಗಳ ಮೂಲಕ ಜಗತ್ಪಸಿದ್ಧರಾಗಿದ್ದರು. ಅಂತಹವರ ಆದರ್ಶದಲ್ಲಿ ನಾವು ಮುನ್ನಡೆಯಬೇಕು ಎಂದರು.

ಅಧ್ಯಕ್ಷತೆ ವಹಿಸಿದ್ದ ಅಸೋಸಿಯೇಷನ್ ಅಧ್ಯಕ್ಷ ಸುನೀಲ ಬಾಗೇವಾಡಿ, ಸದಸ್ಯರಿಗೆ ಮಾರ್ಗದರ್ಶನ ನೀಡಲು ಮತ್ತು ಸಾರ್ವಜನಿಕರಿಗೆ ಹೆಚ್ಚಿನ ಮಾಹಿತಿ ನೀಡಲು ಈಗಾಗಲೇ ಹಲವು ಕಾರ್ಯಕ್ರಮ ಮಾಡಿದ್ದು, ಮುಂಬರುವ ದಿನಗಳಲ್ಲಿ ಹಲವಾರು ಯೋಜನೆಗಳಿವೆ ಎಂದು ಹೇಳಿದರು.

ನೂತನ ಅಧ್ಯಕ್ಷರಾಗಿ ಸುನೀಲ ಬಾಗೇವಾಡಿ, ಉಪಾಧ್ಯಕ್ಷರಾಗಿ ಅರುಣ ಶೀಲವಂತ, ಕಾರ್ಯದರ್ಶಿಯಾಗಿ ಸಿದ್ದನಗೌಡ ಪಾಟೀಲ, ಖಜಾಂಚಿಯಾಗಿ ಕಬೀರ ನದಾಫ್ ಮತ್ತು ಕಾರ್ಯಕ್ರಮ ಸಂಯೋಜಕರಾಗಿ ದಾಮೋದರ ಹೆಗಡೆ ಅವರಿಗೆ ಶಾಸಕ ಅರವಿಂದ ಬೆಲ್ಲದ ಪುಷ್ಪ ನೀಡಿ ಶುಭಕೋರಿದರು. ಸಂಘಟಕ ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ವಿಜಯೆಂದ್ರಗೌಡ ಪಾಟೀಲ ಪ್ರಾಸ್ತಾವಿಕ ಮಾತನಾಡಿದರು. ವಸುಧಾ ಚಕ್ರವರ್ತಿ ಪ್ರಾರ್ಥಿಸಿದರು. ಎಂಜಿನಿಯರ್ಸ್‌ಗಳಾದ ಎಂ. ನಾರಾಯಣ, ಬಸವರಾಜ ಬಂಡಿವಡ್ಡರ, ಕಿರಣ ಶಿಂಧೆ, ಆನಂದ ಶಿವಾಪೂರ, ಕೆ.ಎನ್. ಪಾಟೀಲ, ಎಸ್.ಜಿ. ಜೋಶಿ, ಮಹಾದೇವ ಕರ್ಜಗಿ, ಆರ್.ಆರ್ ಬಾರಕೇರ, ಶಂಕರ ಜೀರಾಳ, ಗುರು ಮತ್ತೂರ, ಮೆಹಬೂಬ್ ಬಾಷಾ ಮತ್ತಿತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ