ಒಡಕು ಬಿಟ್ಟು ಸಂಘಟಿತರಾದರೆ ಸಮಾಜ ಅಭಿವೃದ್ಧಿ

KannadaprabhaNewsNetwork |  
Published : Jul 06, 2025, 01:48 AM IST
ಶಂಕರ ಬಿದ | Kannada Prabha

ಸಾರಾಂಶ

ನಾವು ಶಾಶ್ವತವಲ್ಲ ಆದರೆ ಸಮಾಜ ಸಮಾಜ ಶಾಶ್ವತ, ವೀರಶೈವ-ಲಿಂಗಾಯತ ಎನ್ನುವುದು ಬೇರೆ ಬೇರೆ ಅಲ್ಲ. ಒಡಕು ಬಿಟ್ಟು ಸಂಘಟಿತರಾದರೆ ಮಾತ್ರ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಒಳಿತಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಹೇಳಿದರು.

ವೀರಶೈವ-ಲಿಂಗಾಯತ ಎನ್ನುವುದು ಬೇರೆ ಬೇರೆ ಅಲ್ಲ: ಶಂಕರ ಮಹಾದೇವ ಬಿದರಿ ಅಭಿಮತ । ಸಾಧಕರಿಗೆ ಸನ್ಮಾನ ಸಮಾರಂಭ

ಕನ್ನಡಪ್ರಭ ವಾರ್ತೆ ಚಾಮರಾಜನಗರ

ನಾವು ಶಾಶ್ವತವಲ್ಲ ಆದರೆ ಸಮಾಜ ಸಮಾಜ ಶಾಶ್ವತ, ವೀರಶೈವ-ಲಿಂಗಾಯತ ಎನ್ನುವುದು ಬೇರೆ ಬೇರೆ ಅಲ್ಲ. ಒಡಕು ಬಿಟ್ಟು ಸಂಘಟಿತರಾದರೆ ಮಾತ್ರ ಸಮಾಜಕ್ಕೆ ಹಾಗೂ ಮುಂದಿನ ಪೀಳಿಗೆಗೆ ಒಳಿತಾಗುತ್ತದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಹೇಳಿದರು.ನಗರದ ಸತ್ತಿ ರಸ್ತೆಯಲ್ಲಿರುವ ಶ್ರೀಶಿವಕುಮಾರಸ್ವಾಮಿ ಭವನದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಹಾಗೂ ತಾಲೂಕು ಘಟಕಗಳ ವತಿಯಿಂದ ನಡೆದ ಸಮಾಜದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.ವೀರಶೈವ-ಲಿಂಗಾಯತ ಎನ್ನುವುದು ಧರ್ಮ ಅದನ್ನು ಜಾತಿಗೆ ಮೀಸಲಿರಿಸಿ ಎಲ್ಲಾ ಸೌಲಭ್ಯಗಳಿಂದ ವಂಚಿತ ಹಿಂದುಳಿಯಲು ಕಾರಣವಾಗಿದೆ, ಸಮಾಜ ನಿಷ್ಕ್ರೀಯವಾಗದೆ ಸಕ್ರೀಯವಾವಾಗಿ ಸಂಘಟಿತರಾದಾಗ ಸಮಾಜಕ್ಕೆ ಒಳ್ಳೆಯದನ್ನು ಮಾಡಬಹದು ಎಂದರು.ಸಿಖ್, ಮುಸ್ಲಿಂ, ಜೈನ ಸಮಾಜದವರು ತಮ್ಮ ಆದಾಯದಲ್ಲಿ ಸಮಾಜಕ್ಕೆ ಇಂತಿಷ್ಟು ಹಣ ಎಂದು ಕೊಡುತ್ತಾರೆ, ಆದ್ದರಿಂದ ನಮ್ಮ ಸಮಾಜದವರು ತಮ್ಮ ವಾರ್ಷಿಕ ಆದಾಯದಲ್ಲಿ ಶೇ.೧ ರಷ್ಟು ಆದಾಯವನ್ನು ಬಸವ ಭವನ ನಿರ್ಮಾಣಕ್ಕೆ ನೀಡಬೇಕು, ಯಾರನ್ನು ಬಯಸುವುದು ಬೇಡ. ಮುಂದಿನ ವರ್ಷದವರೆಗೆ ಬಸವ ಭವನ ನಿರ್ಮಾಣ ಆಗಿ ಶ್ರೀಗಳು ಉದ್ಘಾಟಿಸಬೇಕು ಎಂದರು.ಅಖಂಡ ಮೈಸೂರು ಭಾಗದಲ್ಲಿ ವೀರಶೈವ-ಲಿಂಗಾಯತ ಸಮಾಜ ಹಿಂದುಳಿಯಲು ಸಂಘಟಿತರಾಗುವುದೇ ಕಾರಣ, ಅಧಿಕಾರ ಶಾಶ್ವತವಲ್ಲ ಆದರೆ ಸಮಾಜ ಶಾಶ್ವತ ಈ ನಿಟ್ಟಿನಲ್ಲಿ ಚಿಂತಿಸಿ ಸಂಘಟಿತರಾಗಬೇಕು. ಸಮಾಜದ ಅಭಿವೃದ್ದಿಗಾಗಿ ಪರಿಶ್ರಮ ಪಡಬೇಕು, ಬಸವ ಭವನ ನಿರ್ಮಾಣವದ ಮೇಲೆ, ಮಾರ್ಗದರ್ಶನ ಕೇಂದ್ರ ತೆಗೆಯಬೇಕು, ಸಮಾಜದ ಶಕ್ತಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕು ಎಂದರು,

ವೀರಶೈವ-ಲಿಂಗಾಯತ ಸಮಾಜ ಬಸವ ಧರ್ಮ ಪಾಲನೆ ಮಾಡುವ ಮೂಲಕ ಸಂಘಟಿತರಾಗಬೇಕು ಅಂತರಂಗದಲ್ಲಿ ಮುಂದಿನ ಪೀಳಿಗೆಗೆ ಸದೃಡವಾಗಬೇಕು. ಸಮಾಜದ ಬಗ್ಗೆ ಕಾಳಜಿ ವಹಿಸಬೇಕಿದೆ ಸಮಾಜ ೨೦ ವರ್ಷಗಳಿಂದ ಕುಂಠಿತವಾಗಿದೆ ಸಮಾಜ ಸಕ್ರೀಯ ವಾಗಬೇಕು. ನಿಷ್ಷ್ರೀಯವಾದರೆ ಕಷ್ಟವಾಗುತ್ತದೆ. ಸಮಾಜಕ್ಕೆ ಒಳ್ಳೆಯದನ್ನು ಮಾಡೋಣ ಎಂದರು.ಎಸ್. ಆರ್. ಬೊಮ್ಮಾಯಿ ಬಿಟ್ಟರೆ ಇಲ್ಲಿಯವರೆಗೂ ಕೇಂದ್ರದಲ್ಲಿ ಸಮಾಜದ ಯಾರೊಬ್ಬರು ಕ್ಯಾಬಿನೆಟ್ ಸಚಿವರಾಗಿಲ್ಲ, ಬಿ.ಡಿ. ಜತ್ತಿಯವರ ನಂತರ ಯಾರೊಬ್ಬರು ಅಂತಹ ಉನ್ನತ ಸ್ಥಾನಕ್ಕೆ ಹೋಗಿಲ್ಲ. ಸಮಾಜದ ಸಾಧಕರನ್ನು ಗುರುತಿಸಿ ಅಖಿಲ ಭಾರತ ವೀರಶೈವ ಮಹಾಸಭಾ ಸನ್ಮಾನ ಮಾಡುತ್ತಿರುವುದು ತುಂಬಾ ಸಂತಸವಾಗಿದೆ ಎಂದರು.

ಜಾತಿ ಗಣತಿಯಲ್ಲಿ ಏನು ಬರೆಸಬೇಕೆಂಬ ಇನ್ನು ತೀರ್ಮಾನವಾಗಿಲ್ಲ, ಮುಂದೆ ಜಾತಿ ಗಣತಿ ಆರಂಭವಾದರೆ ಅದರ ಬಗ್ಗೆ ತಿಳಿಸುತ್ತೇವೆ, ಲಿಂಗಾಯತ ಉಪ ಪಂಗಡಗಳನ್ನು ಎ೧, ಎಬಿಗೆ ಸೇರಿಸಬೇಕೆಂದು ಮನವಿ ಮಾಡಿದ್ದೇವೆ ಎಂದರು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರಮಹಾಸ್ವಾಮಿಜೀ ಆಶೀರ್ವಚನ ನೀಡಿ, ಎಲ್ಲಿ ಒಗ್ಗಟ್ಟು ಇದೆಯೋ ಅಲ್ಲಿ ಯಶಸ್ಯು ಖಂಡಿತ ಸಿಗುತ್ತದೆ. ಈ ನಿಟ್ಟಿನಲ್ಲಿ ಒಗ್ಗಟ್ಟಾಗಿ ಕಾರ್ಯನಿರ್ವಹಿಸಿ ಎಲ್ಲರ ಸಹಕಾರ ಸಿಗುತ್ತದ ಎಂದರು, ಹರವೆ ವಿರಕ್ತ ಮಠದ ಶ್ರೀ ಸರ್ಪ ಭೂ?ಣ ಸ್ವಾಮೀಜಿ, ಶ್ರೀಸಿದ್ದಮಲ್ಲೇಶ್ವರ ವಿರಕ್ತ ಮಠ ಚನ್ನಬಸವಸ್ವಾಮೀಜಿ, ಮರಿಯಾಲ ಶ್ರೀಮುರುಘರಾಜೇಂದ್ರಸ್ವಾಮೀಜಿ ಆಶೀರ್ವಚನ ನೀಡಿದರು, ಶಾಸಕರಾದ ಎಚ್.ಎಂ.ಗಣೇಶಪ್ರಸಾದ್, ಎ. ಆರ್. ಕೃಷ್ಬಮೂತಿ, ಮಾಜಿ ಶಾಸಕರಾದ ಪರಿಮಳಾನಾಗಪ್ಪ, ಕೆ.ಆರ್. ಮಲ್ಲಿಕಾರ್ಜುನಪ್ಪ ಮಾತನಾಡಿದರು.ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಿ, ಗೌರವಿಸಲಾಯಿತುನಗರಸಭಾ ಅಧ್ಯಕ್ಷ ಸುರೇಶ್, ಚೂಡಾಧ್ಯಕ್ಷ ಮಹಮ್ಮದ್ ಅಸ್ಗರ್, ಕಾಡಾಧ್ಯಕ್ಷ ಪಿ.ಮರಿಸ್ವಾಮಿ, ಚಾಮುಲ್ ನಂಜುಂಡಸ್ವಾಮಿ, ರಾಷ್ಟ್ರೀಯ ಸದಸ್ಯೆ ರೂಪ ರಾಜಶೇಖರ್ , ನಂಜಪ್ಪ, ಎನ್ ರಿಚ್.ಮಹಾದೇವಸ್ವಾಮಿ, ಜಿಲ್ಲಾಧ್ಯಕ್ಷ ನಂದೀಶ್ ಮೂಡ್ಲುಪುರ, ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು, ಮಹಿಳಾ ಘಟಕದ ಪದಾಧಿಕಾರಿಗಳು ಇತರರು ಇದ್ದರು.ಬಿ.ಎಂ. ಪ್ರಭುಸ್ವಾಮಿ, ಪ್ರಾಸ್ತಾವಿಸಿದರು.

----------5ಸಿಎಚ್ಎನ್‌13

ಚಾಮರಾಜನಗರದ ಶ್ರೀ ಶಿವಕುಮಾರಸ್ವಾಮಿ ಭವನದಲ್ಲಿ ನಡೆದ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಉದ್ಘಾಟಿಸಿದರು.----------5ಸಿಎಚ್ಎನ್‌14ಚಾಮರಾಜನಗರದ ಶ್ರೀ ಶಿವಕುಮಾರಸ್ವಾಮಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಸಮಾಜದ ಸಾಧಕರಿಗೆ ಸನ್ಮಾನ ಮಾಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿರ್ಮಲ ತುಂಗಭದ್ರಾ ಅಭಿಯಾನಕ್ಕೆ ಕೈಜೋಡಿಸಿ
ಹೊಲಗಳಲ್ಲಿ ಚರಗ ಚೆಲ್ಲಿ ಹಬ್ಬ ಆಚರಿಸಿದ ಅನ್ನದಾತರು