ಯಲಬುರ್ಗಾ:
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಾಚಾರ್ಯ ಶರಣಪ್ಪ ಬೇಲೇರಿ ಅವರ ವಯೋನಿವೃತ್ತಿ ಹಿನ್ನೆಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರಿಗೆ ಹಾಗೂ ಗಣ್ಯರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಯಾವುದೇ ಕ್ಷೇತ್ರದಲ್ಲಿ ಪ್ರಾಮಾಣಿಕ ಸೇವೆ ಸಲ್ಲಿಸಿದವರಿಗೆ ಸಮಾಜ ಋಣಿಯಾಗಿರುತ್ತದೆ. ವೃತ್ತಿಯಲ್ಲಿ ಬದ್ಧತೆ, ದೃಢ ನಿರ್ಧಾರ ಇಟ್ಟುಕೊಂಡು ಕೆಲಸ ಮಾಡಿದ ಪರಿಣಾಮ ಬೇಲೇರಿಯವರು ಒಬ್ಬ ಮಾದರಿ ಪ್ರಾಚಾರ್ಯರಾಗಿ ಗುರುತಿಸಿಕೊಳ್ಳುವುದಕ್ಕೆ ಸಾಧ್ಯವಾಗಿದೆ. ಸಾವಿರಾರು ಶಿಷ್ಯಬಳಗಕ್ಕೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. ಸ್ವಗ್ರಾಮದ ಶಾಲೆಯ ವಿದ್ಯಾರ್ಥಿಯಾಗಿ ಅದೇ ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿರುವುದು ಅವರ ಜೀವನದಲ್ಲಿ ಮರೆಯಲಾರದ ಕ್ಷಣವಾಗಿದೆ ಎಂದ ಅವರು, ಶೈಕ್ಷಣಿಕ ಗುಣಮಟ್ಟ ಕುಸಿಯುತ್ತಿರುವ ಇಂದಿನ ದಿನಗಳಲ್ಲಿ ಆತ್ಮಸಾಕ್ಷಿಗೆ ಅನುಗುಣವಾಗಿ ಸೇವೆ ಸಲ್ಲಿಸುವುದು ಬೋಧಕರ ಜವಾಬ್ದಾರಿಯಾಗಿದೆ ಎಂದರು.ನಿವೃತ್ತ ಪ್ರಾಚಾರ್ಯ ಶರಣಪ್ಪ ಬೇಲೇರಿ ಮಾತನಾಡಿ, ವೃತ್ತಿ ಜೀವನದಲ್ಲಿ ಸಾಕಷ್ಟು ತೊಂದರೆಗಳನ್ನು ಸಮಚಿತ್ತದಿಂದ ಎದುರಿಸಿ ಪರಿಹಾರ ಕಂಡುಕೊಂಡಿದ್ದೇನೆ. ನನ್ನ ಸೇವೆಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ ಆತ್ಮತೃಪ್ತಿ ನನಗಿದೆ ಎಂದರು.
ವಕೀಲ ಬಿ.ಎಂ. ಶಿರೂರು, ಮುಖಂಡರಾದ ಸಂಗಪ್ಪ ಕೊಪ್ಪಳ, ಗೋವಿಂದಾಚಾರ, ಭೀಮಪ್ಪ ಹವಳಿ ಮಾತನಾಡಿದರು. ನಿವೃತ್ತ ಪ್ರಾಚಾರ್ಯ ಶರಣಪ್ಪ ಬೇಲೇರಿ ಹಾಗೂ ಪೌರಕಾರ್ಮಿಕರು, ಗಣ್ಯರನ್ನು ಸನ್ಮಾನಿಸಲಾಯಿತು.ಈ ವೇಳೆ ಪ್ರಮುಖರಾದ ವೀರನಗೌಡ ಬನ್ನಪ್ಪಗೌಡರ, ಯಮನೂರಪ್ಪ ನಡುಲಮನಿ, ಶಂಕರ ಬಾವಿಮನಿ, ಅಮರೇಶ ಹುಬ್ಬಳ್ಳಿ, ರೇವಣಪ್ಪ ಸಂಗಟಿ, ಸಿದ್ದು ಬನ್ನಪ್ಪಗೌಡರ, ಪ್ರಕಾಶ ಬೇಲೆರಿ, ಸಿದ್ರಾಮೇಶ ಬೇಲೇರಿ ಇದ್ದರು