ಕನ್ನಡಪ್ರಭ ವಾರ್ತೆ ಹೊಸಕೋಟೆವಿಶ್ವದಲ್ಲಿ ವಿಜ್ಞಾನ ಹಾಗೂ ತಂತ್ರಜ್ಞಾನ ಎಷ್ಟೇ ಬೆಳೆಯುತ್ತಿದ್ದರೂ ಕೂಡ ಸಮಾಜದಲ್ಲಿ ಮೌಢ್ಯತೆ ಎಂಬ ಮಾರಿ ದೂರವಾಗುತ್ತಿಲ್ಲ ಎಂದು ವಿಜ್ಞಾನ ತಂತ್ರಜ್ಞಾನ ಅಕಾಡೆಮಿ ನಿರ್ದೇಶಕರಾದ ಡಾ.ಹುಲಿಕಲ್ ನಟರಾಜು ತಿಳಿಸಿದರು.ತಾಲೂಕಿನ ತಿರುಮಲ ಶೆಟ್ಟಿಹಳ್ಳಿ ಕ್ರಾಸ್‌ನಲ್ಲಿರುವ ವಿದ್ಯಾವನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಶೈಕ್ಷಣಿಕ ಕಾರ್ಯಕ್ರಮ ಆರಂಭ- 2025 ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಮಾತನಾಡಿದರು.ವಿಜ್ಞಾನ ತಂತ್ರಜ್ಞಾನ ಬೆಳೆದಂತೆ ಮೌಢ್ಯತೆ ಮಾರಿಯೂ ಬೆಳೆಯುತ್ತಿದೆ. ನಾವೆಲ್ಲ 20ನೇ ಶತಮಾನದಲ್ಲಿದ್ದು ಮಂಗಳ ಗ್ರಹದಲ್ಲಿ ಮನೆ ಮಾಡಿ ವಾಸ ಮಾಡಲು ಹೊರಟಿದ್ದೇವೆ. ನಾವು ಕಂಡುಹಿಡಿದ ತಂತ್ರಜ್ಞಾನಗಳ ದುರ್ಬಳಕೆ ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಮೌಢ್ಯತೆಯ ಮಾರಿಯನ್ನು ಅತೀ ಹೆಚ್ಚು ಪ್ರಚಾರ ಮಾಡುತ್ತಿದ್ದಾರೆ. ಇದರಿಂದ ಅತ್ಯಾಚಾರ ವ್ಯಭಿಚಾರ ಮನೋವಿಕೃತಿ ಮಾನಸಿಕ ದೌರ್ಬಲ್ಯ ಹೆಚ್ಚಾಗುತ್ತಿದೆ. ಇದನ್ನು ಕಡಿವಾಣ ಮಾಡಲು ಮೌಢ್ಯ ವಿರೋಧಿ ಪ್ರತಿಬಂಧಕ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಬೇಕು. ಎಲ್ಲಾ ಕಡೆ ನೇತು ಹಾಕಿರುವ ಮಂತ್ರ ತಂತ್ರಗಳ ಜ್ಯೋತಿಷ್ಯಗಳ ಬೋರ್ಡ್‌ಗಳನ್ನು ಪೊಲೀಸ್ ಕಾನೂನಿನಡಿಯಲ್ಲಿ ನಿರ್ಬಂಧಿಸಬೇಕು ಎಂದರು.
ವಿದ್ಯಾವನ ಕಾಲೇಜಿನ ಅಧ್ಯಕ್ಷ ಸುಜಾತ ರೆಡ್ಡಿ ಮಾತನಾಡಿ, ಶಿಕ್ಷಣ ಕ್ಷೇತ್ರ ಎನ್ನುವುದು ವ್ಯಾಪಾರಿಕರಣವಾಗುತ್ತಿದೆ. ಇದರ ನಡುವೆ ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ವಿದ್ಯಾವನ ಕಾಲೇಜು ಮುಂದಾಗಿದ್ದು ನಮ್ಮ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿ ತಿರುಪತಿ ಯುನಿವರ್ಸಿಟಿಯಲ್ಲಿ ಐಐಟಿ ವ್ಯಾಸಂಗ ಮಾಡುತ್ತಿದ್ದಾನೆ. ಇದೆಲ್ಲಾ ನಮಗೆ ಹೆಗ್ಗಳಿಕೆ ವಿಚಾರ ಎಂದರು.ವಿದ್ಯಾವನ ಕಾಲೇಜಿನ ಪ್ರಾಂಶುಪಾಲ ಬೈರಾರೆಡ್ಡಿ ಜಿ. ಮಾತನಾಡಿದರು. ಕಾರ್ಯಕ್ರಮದಲ್ಲಿ ವಿದ್ಯಾವನ ಎಜುಕೇಷನ್ ಟ್ರಸ್ಟ್ ಅಧ್ಯಕ್ಷೆ ಸುಜಾತರೆಡ್ಡಿ, ಕಾಲೇಜಿನ ಪ್ರಾಂಶುಪಾಲ ಬೈರಾರೆಡ್ಡಿ ಜಿ, ರಾಜ್ಯ ವೈಜ್ಞಾನಿಕ ಪರಿಷತ್ ಬೆಂಗಳೂರು ಗ್ರಾಮಾಂತರ ಜಿಲ್ಲಾಧ್ಯಕ್ಷ ಸೂಲಿಬೆಲೆ ಉಮೇಶ್, ಪ್ರಭು ಎಲೆಕ್ಟ್ರಿಕ್ ಮಾಲೀಕ ಕುಮಾರ್ ಕಾಲೇಜಿನ ಪ್ರಾಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು,ಪೋಟೋ: 2 ಹೆಚ್‌ಎಸ್‌ಕೆ 1 ಮತ್ತು 21: ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಕ್ರಾಸ್‌ನಲ್ಲಿರುವ ವಿದ್ಯಾವನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಶೈಕ್ಷಣಿಕ ಕಾರ್ಯಕ್ರಮ ಆರಂಭ-2025 ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮವನ್ನು ಪವಾಡ ಭಂಜಕ ಡಾ.ಹುಲಿಕಲ್ ನಟರಾಜ್ ಉದ್ಘಾಟಿಸಿದರು.2 : ಹೊಸಕೋಟೆ ತಾಲೂಕಿನ ತಿರುಮಲಶೆಟ್ಟಿಹಳ್ಳಿ ಕ್ರಾಸ್‌ನಲ್ಲಿರುವ ವಿದ್ಯಾವನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಶೈಕ್ಷಣಿಕ ಕಾರ್ಯಕ್ರಮ ಆರಂಭ-2025 ಹಾಗೂ ಪವಾಡ ರಹಸ್ಯ ಬಯಲು ಕಾರ್ಯಕ್ರಮದಲ್ಲಿ ಹುಲಿಕಲ್ ನಟರಾಜ್ ಅವರು ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆ ಮೂಲಕ ಪವಾಡ ಬಯಲು ಮಾಡಿ ತೋರಿಸಿದರು.