ಡಂಬಳ: ಮನುಷ್ಯನಿಗೆ ಅಗತ್ಯವಿರುವಂತೆ ಮಣ್ಣಿಗೂ ಪೋಷಕಾಂಶದ ಅಗತ್ಯವಿರುತ್ತದೆ. ಆಹಾರದ ಮುಖ್ಯ ಮೂಲ ಮಣ್ಣು. ಮಣ್ಣಿನ ಮಹತ್ವ ಮಣ್ಣಿನಲ್ಲಿ ಕೆಲಸ ಮಾಡುವವರಿಗೆ ಗೊತ್ತು. ಮಣ್ಣಿನ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಜಿಲ್ಲಾ ಕೃಷಿ ನಿರ್ದೇಶಕಿ ಸ್ಫೂರ್ತಿ ಜಿ.ಎಸ್. ತಿಳಿಸಿದರು.
ಸಹಾಯಕ ಕೃಷಿ ನಿರ್ದೇಶಕ ಪ್ರಾಣೇಶ ಮಾತನಾಡಿ, ಜಲಾನಯನದ ಪರಿಕಲ್ಪನೆಯಲ್ಲಿ ಮಣ್ಣು ಮತ್ತು ನೀರಿನ ಸಂರಕ್ಷಣೆ ನವೀನ ತಳಿಗಳ ಬಳಕೆ ವಿಜ್ಞಾನಿಗಳ ಸಲಹೆಯಂತೆ ಬೆಳೆ ರಕ್ಷಣಾ ಕ್ರಮಗಳನ್ನು ಅನುಸರಿಸುವ ಕುರಿತು ರೈತರಿಗೆ ಸಲಹೆ ನೀಡಿದರು.
ವಿಜ್ಞಾನಿ ಡಾ. ಎಸ್.ಕೆ. ಮದ್ಲಾಪೂರ ಅವರು ಮಣ್ಣಿನ ಕುರಿತು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಹೇಮಣ್ಣ ಪೂಜಾರ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜೈತೂಂಬಿ ರಾ. ಬಳ್ಳಾರಿ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ದೊಡ್ಡಮನಿ, ಗ್ರಾಪಂ ಸದಸ್ಯರಾದ ಯಲ್ಲಪ್ಪ ಜಡಿ, ಯಲ್ಲಪ್ಪ ಹೊಂಬಳ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಸಂತ ಗೋಕಾಕ, ಪಿಡಿಒ ವೀರೇಶ ಆವಾರಿ, ಕೃಷಿ ಅಧಿಕಾರಿ ಎಸ್.ಬಿ. ರಾಮೇನಹಳ್ಳಿ, ತಾಂತ್ರಿಕ ಕೃಷಿ ಅಧಿಕಾರಿ ಹನುಮಂತಪ್ಪ, ವಿರುಪಾಕ್ಷಪ್ಪ ಹಳ್ಳಿಕೇರಿಮಠ, ಶೇಖಪ್ಪ ದೇಸಾಯಿ, ರಂಗಪ್ಪ ಡಂಬಳ, ಮಂಜು ಬಳಗಾನೂರ, ಬಸವರಾಜ ಕಲಕೇರಿ, ಬಾಬೂಜಿ ಹಡಪದ, ಮಾರುತಿ ರಾಥೋಡ, ಅಕ್ಕಮಹಾದೇವಿ ಶೆಲವಡಿ, ಗೌರಿಶಂಕರ ಸಜ್ಜನ, ರಾಕೇಶ್ ಕದಾಂಪೂರ ಗ್ರಾಮದ ರೈತರು ಇದ್ದರು. ಬಸವರಾಜ ಬೇವಿನಮರದ ಕಾರ್ಯಕ್ರಮದಲ್ಲಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.