ಹೃದಯಾಘಾತದಿಂದ ಯೋಧ ಸಾವು

KannadaprabhaNewsNetwork |  
Published : May 30, 2025, 12:28 AM IST
ಯೋಧ | Kannada Prabha

ಸಾರಾಂಶ

ಕೆರೂರಸಮೀಪದ ಚಿಂಚಲಕಟ್ಟಿ ಎಲ್ಎಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ರಾಠೋಡ (23) ಬುಧವಾರ ಹೃದಯಾಘಾತದಿಂದ ಚಂಡಿಗಡದಲ್ಲಿ ಮೃತಪಟ್ಟಿದ್ದಾನೆ.

ಕನ್ನಡಪ್ರಭ ವಾರ್ತೆ ಕೆರೂರ

ಸಮೀಪದ ಚಿಂಚಲಕಟ್ಟಿ ಎಲ್ಎಟಿ ಗ್ರಾಮದ ಯೋಧ ಉಪೇಂದ್ರ ಸೋಮನಾಥ ರಾಠೋಡ (23) ಬುಧವಾರ ಹೃದಯಾಘಾತದಿಂದ ಚಂಡಿಗಡದಲ್ಲಿ ಮೃತಪಟ್ಟಿದ್ದಾನೆ.

ಮೃತ ಯೋಧ ಉಪೇಂದ್ರ ಕಳೆದ ಮಾರ್ಚ 2025 ರಲ್ಲಿ ಅಸ್ಸಾಂ ರೈಫಲ್ಸ್ ನಲ್ಲಿ ಸೇನಗೆ ಆಯ್ಕೆಯಾಗಿದ್ದು,ಕಳೆದ ಮೂರು ತಿಂಗಳಿಂದ ಚಂಡಿಗಂಡದಲ್ಲಿ ಸೇನಾ ತರಬೇತಿ ಪಡೆಯುತ್ತಿದ್ದನು.

ಬುಧವಾರ ಸೇನಾ ತರಬೇತಿ ಪಡೆಯುತ್ತಿದ್ದ ವೇಳೆ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. ಮಗನ ಸಾವಿನ ಸುದ್ದಿ ಕೇಳಿ ತಾಯಿ ಶಾರದಾ ಹಾಗೂ ತಂಗಿ ಕಾವೇರಿ ಆಂಕ್ರದನ ಮುಗಿಲು ಮುಟ್ಟಿತ್ತು.

ಮೃತ ಯೋಧನ ಪಾರ್ಥಿವ ಶರೀರವು ಶುಕ್ರವಾರ ಬೆಳಿಗ್ಗೆ ವಿಮಾನದ ಮೂಲಕ ಬೆಳಗಾವಿ ತಲುಪಿ,ಅಲ್ಲಿಂದ ಸೇನಾ ವಾಹನದ ಮೂಲಕ ಕೆರೂರ ಪಟ್ಟಣಕ್ಕೆ ಆಗಮಿಸಲಿದೆ.ಕೆರೂರ ಪಟ್ಟಣದಿಂದ ಸ್ವ ಗ್ರಾಮ ಚಿಂಚಲಕಟ್ಟಿ ಎಲ್ ಎಟಿ ಗ್ರಾಮದವರೆಗೆ ಪಾರ್ಥಿವ ಶರೀರದ ಮೇರವಣಿಗೆ ನಡೆಯಲಿದೆ.

ಗ್ರಾಮದಲ್ಲಿ ಯೋಧನ ಅಂತಿ ದರ್ಶನಕ್ಕೆ ಸಿದ್ದತೆ ನಡೆಸಲಾಗಿದೆ,ನಂತರ ಸಕಲ ಸರ್ಕಾರಿ ಗೌರವದೊಂದಿದೆ ಯೋಧನ ಅಂತ್ಯಕ್ರಿಯೆ ನಡೆಯಲಿದೆ ಎಂದು ಕೆರೂರ ಉಪತಹಶಿಲ್ದಾರ ವಿರೇಶ ಬಡಿಗೇರ,ಕಂದಾಯ ನಿರೀಕ್ಷಕ ಆನಂದ ಬಾವಿಮಠ ಮೃತ ಯೋಧನ ಗ್ರಾಮಕ್ಕೆ ಬೇಟಿ ಮಾಹಿತಿ ತಿಳಿಸಿದ್ದಾರೆ.

ಮೃತ ಯೋಧನ ಕುಟುಂಬಕ್ಕೆ ಸ್ಥಳಿಯ ಶಾಸಕ ಜೆ ಟಿ ಪಾಟೀಲ ಬೇಟಿ ನೀಡಿ,ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.

ಈ ವೇಳೆ ಮಾತನಾಡಿ ಯೋಧನ ಕುಟುಂಬಕ್ಕೆ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ದೊರಕಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ,ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ತಹಸೀಲ್ದಾರ ಅವರಿಗೆ ದೂರವಾಣಿ ಕರೆ ಮಾಡಿ ಅಂತ್ಯಕ್ರಿಯೆಯನ್ನು ಸಕಲ ಸರಕಾರಿ ಗೌರವಗಳೊಂದಿಗೆ ನಡೆಸಬೇಕು ಎಂದು ಸೂಚಿಸಿದರು.

ವಿಧಾನ ಷರಿಷತ್‌ ಸದಸ್ಯ ಹಣಮಂತ ನಿರಾಣಿ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಹೂವಪ್ಪ ರಾಠೋಡ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯ ಡಾ.ಎಂ.ಜಿ. ಕಿತ್ತಲಿ,ಮುಖಂಡರಾದ ಪ್ರವೀಣ ಚಿಕ್ಕೂರ ಅಶೋಕ ಕೊಪ್ಪದ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!