ಕಡೂರು: ರಾಜಸ್ತಾನದ ಬಿಕಾನೇರ್ ನಲ್ಲಿ ಗಡಿ ಭದ್ರತಾ ಪಡೆಯ ಯೋಧನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಾಲೂಕಿನ ಜೋಡಿ ತಿಮ್ಮಾಪುರದ ಗಿರೀಶ್ (37) ಅನಾರೋಗ್ಯದಿಂದ ಸೇವೆ ಸಲ್ಲಿಸುತ್ತಿದ್ದ ಸ್ಥಳದಲ್ಲಿ ಮಂಗಳವಾರ ಮೃತಪಟ್ಟಿದ್ದಾರೆ.ಕಡೂರು ತಾಲೂಕಿನ ಬೀರೂರು ಹೋಬಳಿ ಜೋಡಿ ತಿಮ್ಮಾಪುರ ಗ್ರಾಮದ ಬಸಪ್ಪ ಮತ್ತು ಜಯಮ್ಮ ಅವರ ಪುತ್ರರಾದ ಇವರು 10 ವರ್ಷದ ಹಿಂದೆ ಗಿರೀಶ್ ಅಭಿಲಾಷ ಅವರನ್ನು ವಿವಾಹವಾಗಿದ್ದು, ಪ್ರಣೀತ್, ಇಂಪನಾ ಎಂಬ ಮಕ್ಕಳಿದ್ದಾರೆ. ಕಳೆದ ಎರಡು ವಾರದ ಹಿಂದಷ್ಟೇ ಊರಿಗೆ ಬಂದು ಕುಟುಂಬ ಸದಸ್ಯರೊಂದಿಗೆ ಸಂತಸದಿಂದ ಕೆಲ ದಿನಗಳ ಕಾಲ ಇದ್ದು ಮತ್ತೆ ಸೇನೆಗೆ ತೆರಳಿದ್ದ ಗಿರೀಶ್ ಅವರು ಮೃತಪಟ್ಟಿರುವ ಸುದ್ದಿ ತಿಳಿದು ಇಡೀ ಗ್ರಾಮವೇ ಶೋಕದ ಮಡುವಿನಲ್ಲಿ ಮುಳುಗಿದೆ.
ತಾ.ಪಂ ಮಾಜಿ ಸದಸ್ಯ ಗೋವಿಂದ ಸ್ವಾಮಿ ಈ ಕುರಿತು ಮಾತನಾಡಿ, ಕಳೆದ ಸೋಮವಾರ ಸಂಜೆ ಕರ್ತವ್ಯದ ವೇಳೆಯಲ್ಲಿ ಅನಾರೋಗ್ಯದಿಂದ ವಾಂತಿಯಾಗಿದ್ದಾಗಿ ಮನೆಯವರೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ತಿಳಿಸಿದ್ದರು. ಆದರೆ ಮಂಗಳವಾರ ಬೆಳಿಗ್ಗೆ ಬಿಎಸ್ ಎಫ್ ಯುನಿಟ್ ನವರು ಗಿರೀಶ್ ಮೃತಪಟ್ಟಿರುವುದಾಗಿ ತಿಳಿಸಿ ಊರಿಗೆ ಮೃತದೇಹ ತರುವುದಾಗಿ ತಿಳಿಸಿದ್ದಾರೆ ಎಂದರು.
ಬುಧವಾರ ಅವರ ತೋಟದಲ್ಲಿ ಅಂತ್ಯ ಕ್ರಿಯೆ ನಡೆಸುವುದಾಗಿ ಗಿರೀಶ್ ಸಹೋದರ ಸತೀಶ್ ಮಾಹಿತಿ ನೀಡಿದರು.9ಕೆಕೆೆಡಿಯು2.ಮೃತ ಯೋಧ ಗಿರೀಶ್.