ಸೊಳ್ಳೇಪುರ ಸೊಸೈಟಿ ನರಸಿಂಹೇಗೌಡ ಅಧ್ಯಕ್ಷ, ನರಸಿಂಹಯ್ಯ ಉಪಾಧ್ಯಕ್ಷರು

KannadaprabhaNewsNetwork |  
Published : Jun 01, 2025, 02:22 AM IST
30ಕೆಎಂಎನ್ ಡಿ19 | Kannada Prabha

ಸಾರಾಂಶ

12 ನಿರ್ದೇಶಕರು ಇರುವ ಸೊಳ್ಳೇಪುರ ಕೃಷಿ ಪತ್ತಿನ ಸಹಕಾರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ನರಸಿಂಹೇಗೌಡ ಹಾಗೂ ನರಸಿಂಹಯ್ಯ ಹೊರತು ಪಡಿಸಿ ಬೇರೆ ನಿರ್ದೇಶಕರು ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಹೋಬಳಿಯ ಸೊಳ್ಳೇಪುರ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ನರಸಿಂಹೇಗೌಡ, ಉಪಾಧ್ಯಕ್ಷರಾಗಿ ನರಸಿಂಹಯ್ಯ ಅವಿರೋಧವಾಗಿ ಆಯ್ಕೆಯಾದರು. 12 ನಿರ್ದೇಶಕರು ಇರುವ ಸಂಘದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ಚುನಾವಣೆ ನಡೆದು ಕಾಂಗ್ರೆಸ್ ಬೆಂಬಲಿತ ನರಸಿಂಹೇಗೌಡ ಹಾಗೂ ನರಸಿಂಹಯ್ಯ ಹೊರತು ಪಡಿಸಿ ಬೇರೆ ನಿರ್ದೇಶಕರು ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್, ಸಿಇಒ ಮಂಜುನಾಥ್‌ ಕಾರ್ಯನಿರ್ವಹಿಸಿದರು.

ನಂತರ ಬೆಂಬಲಿತರು, ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪುಷ್ಪಮಾಲೆ ಹಾಕಿ ಸಂಭ್ರಮಸಿದರು. ಕೆಪಿಸಿಸಿ ಸದಸ್ಯ ಸುರೇಶ್ ಮಾತನಾಡಿ, ಕಳೆದ 15 ವರ್ಷಗಳಿಂದ ಕಾಂಗ್ರೆಸ್ ಬೆಂಬಲಿತ ಸದಸ್ಯರು ಸಂಘದಲ್ಲಿದ್ದು, ಸಂಘದ ಅಭಿವೃದ್ಧಿಗೆ ಸದಾ ಶ್ರಮಿಸಲಾಗುತ್ತಿದೆ. ಚುನಾವಣೆ ನಂತರ ಪಕ್ಷ ಮರೆತು ಒಗ್ಗಟ್ಟಿನಿಂದ ಸಂಘದ ಅಭಿವೃದ್ಧಿ, ಷೇರುದಾರರಿಗೆ, ರೈತರಿಗೆ ಸಿಗುವ ಸವಲತ್ತುಗಳನ್ನು ನೀಡಲು ಪ್ರಾಮಾಣಿಕವಾಗಿ ಪ್ರಯತ್ನಿಸಲು ಮಾರ್ಗದರ್ಶನ ನೀಡಲಾಗುತ್ತಿದೆ ಎಂದರು.

ಸಂಘದ ನಿರ್ದೇಶಕರಾದ ಜಯರಾಂ, ಸುರೇಶ್, ರೇಖಾ, ಕೃಷ್ಣೇಗೌಡ, ಮಂಜೇಗೌಡ, ಕೋಳಿ ಸುರೇಶ್, ರಾಮಚಂದ್ರ, ವಸಂತಕುಮಾರ್, ಮಂಜುಳಮ್ಮ, ದೇವರಾಜು, ಮುಖಂಡರಾದ ಕೃಷ್ಣೇಗೌಡ, ಬೇಕರಿ ಮಂಜು, ಸಣ್ಣಪ್ಪ, ಲೋಕೇಶ್, ಗುಂಡ ಇದ್ದರು.

ಸೊಸೈಟಿ ಅಧ್ಯಕ್ಷರಾಗಿ ಕೆ.ವೈ.ಹರೀಶ್, ಉಪಾಧ್ಯಕ್ಷರಾಗಿ ಅಕ್ಷಯ್‌ ಆಯ್ಕೆ

ಕಿಕ್ಕೇರಿ

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಕೆ.ವೈ.ಹರೀಶ್‌, ಉಪಾಧ್ಯಕ್ಷರಾಗಿ ಅಕ್ಷಯ್‌ ಅವಿರೋಧವಾಗಿ ಆಯ್ಕೆಯಾದರು. 12 ನಿರ್ದೇಶಕರಿರುವ ಸಂಘದ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹರೀಶ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅಕ್ಷಯ್ ಹೊರತು ಪಡಿಸಿ ಬೇರೆ ಯಾರು ಉಮೇದುವಾರಿಕೆ ಸಲ್ಲಿಸದ ಕಾರಣ ಅವಿರೋಧವಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಭರತ್‌ಕುಮಾರ್, ಸಿಇಒ ಪುಟ್ಟರಾಜು ಕಾರ್ಯ ನಿರ್ವಹಿಸಿದರು.

ಅಭಿಮಾನಿಗಳು ಪಟಾಕಿ ಸಿಡಿಸಿ, ಸಿಹಿ ಹಂಚಿ, ಪುಷ್ಪಮಾಲೆ ಹಾಕಿ ಸಂಭ್ರಮಸಿದರು.

ನೂತನ ಅಧ್ಯಕ್ಷ ಕೆ.ವೈ.ಹರೀಶ್ ಮಾತನಾಡಿ, ಕೆಪಿಸಿಸಿ ಸದಸ್ಯ ಸುರೇಶ್‌ ಹಾಗೂ ನಿರ್ದೇಶಕರ ಸಹಕಾರದಲ್ಲಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು. ಜಿಲ್ಲೆಯಲ್ಲಿಯೇ ನಂ.1 ಸೊಸೈಟಿ ತಮ್ಮದಾಗಿದ್ದು, ರೈತರಿಗೆ ಸಕಾಲದಲ್ಲಿ ಸಾಲ ಮತ್ತಿತರ ಸವಲತ್ತು ನೀಡಲು ಒತ್ತು ನೀಡಲಾಗುವುದು ಎಂದರು.

ಈ ವೇಳೆ ಕೆಪಿಸಿಸಿ ಸದಸ್ಯ ಸುರೇಶ್, ಮುಖಂಡರಾದ ಸಾಸಲು ಈರಪ್ಪ, ಲಕ್ಷ್ಮೀಪುರ ಚಂದ್ರು, ರಾಮಚಂದ್ರು, ಎಲ್.ಪಿ.ದೇವರಾಜು, ನಿರ್ದೇಶಕರು ಇದ್ದರು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ