ಕನ್ನಡಪ್ರಭ ವಾರ್ತೆ ಶಹಾಪುರ
ಈ ವೇಳೆ ಮಾತನಾಡಿದ ಅವರು, ಶಾಲೆಗೆ ಶಿಕ್ಷಕರು ಹಾಜರಾಗದಿರುವುದು, ಮಕ್ಕಳಿಗೆ ಚಾರ್ಟ್ ಪ್ರಕಾರ ಊಟ ನೀಡುತ್ತಿಲ್ಲ. ಕುಡಿಯಲು ನೀರಿನ ವ್ಯವಸ್ಥೆ ಅಲ್ಲದೆ ಶಾಲೆಯಲ್ಲಿ ಇನ್ನು ಸಮಸ್ಯೆಗಳಿದ್ದು, ನೀವು ಯಾವ ಪುರುಷಾರ್ಥಕ್ಕಾಗಿ ಶಾಲೆ ನಡೆಸುತ್ತೀರಿ, ನಿಮ್ಮ ಕೈಯಲ್ಲಿ ಆಗದಿದ್ದರೆ ಬಿಟ್ಟು ಹೋಗಿ. ಇಲ್ಲ ಒಂದು ವಾರದಲ್ಲಿ ಎಲ್ಲ ಸಮಸ್ಯೆ ಸರಿಪಡಿಸಬೇಕು ಎಂದು ವಸತಿ ಶಾಲೆಯ ಪ್ರಾಚಾರ್ಯರಿಗೆ ಖಡಕ್ ಸೂಚನೆ ನೀಡಿದರು.
6 ರಿಂದ 10ನೇ ತರಗತಿವರೆಗೆ 250 ಮಕ್ಕಳು ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ 160 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. 8 ಜನ ಖಾಯಂ ಶಿಕ್ಷಕರಿದ್ದಾರೆ. 4 ಜನ ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಪದವಿ ಪೂರ್ವ ಕಾಲೇಜಿನಲ್ಲಿ ಕಾಯಂ ಉಪನ್ಯಾಸಕರಿಲ್ಲ. ಮೂರು ಜನ ನಿಯೋಜನೆ ಮೇಲೆ ಹಾಗೂ ಐದು ಜನ ಅತಿಥಿ ಉಪನ್ಯಾಸಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.ಗಣಿತ ಸರಿಗತಿ ಸರಿಯಾಗಿ ನಡೆಯುತ್ತಿಲ್ಲ, ಅಲ್ಲದೆ ಲ್ಯಾಬ್ ಸಹ ನಡೆಯುವುದಿಲ್ಲ ಎಂದು ಮಕ್ಕಳು, ನ್ಯಾಯಾಧೀಶರ ಗಮನಕ್ಕೆ ತಂದರು. ಈ ಶಾಲೆಯ ಯಾವ ಮಕ್ಕಳಿಗೂ ಮಲಗಲು ಬೆಡ್‌ಗಳಿಲ್ಲ. ಮಂಚದ ಮೇಲೆ ಬೆಡ್‌ಶೀಟ್ ನೊಂದಿಗೆ ಮಲಗಬೇಕು. ಅಲ್ಲದೆ ಕಿಟಕಿ ಬಾಗಿಲುಗಳು ಮುರಿದುಹೋಗಿವೆ. ಚಳಿ ಜಾಸ್ತಿ ಇರುವುದರಿಂದ ಮಲಗಲು ಆಗುತ್ತಿಲ್ಲ. ನಮ್ಮಲ್ಲಿ ಸುಮಾರು ಜನರಿಗೆ ಜ್ವರ, ನೆಗಡಿ, ಕೆಮ್ಮು ಕಾಣಿಸಿಕೊಂಡಿದೆ. ಕಿಟಕಿ ರಿಪೇರಿ ಮಾಡಲು ಮುಂದಾಗುತ್ತಿಲ್ಲ. ಶೌಚಾಲಯಗಳಿಗೆ ಬಾಗಿಲುಗಳೆ ಇಲ್ಲ. ಸ್ವಚ್ಛತೆ ಮರೀಚಿಕೆಯಾಗಿದೆ. ಶೌಚಾಲಯಕ್ಕೆ ಹೋಗಲು ಮುಜುಗರವಾಗುತ್ತಿದೆ ಎಂದು ನ್ಯಾಯಾಧೀಶರ ಎದುರು ಅಳಲು ತೋಡಿಕೊಂಡರು.
ಈ ವೇಳೆ ಜಿಲ್ಲಾ ಪ್ಯಾನಲ್ ಅಡ್ವಕೇಟ್ ಕೃಷ್ಣವೇಣಿ ಬಿ., ವಸತಿ ಶಾಲೆಯ ಪ್ರಾಚಾರ್ಯ ಸಿದ್ದು ಪೂಜಾರಿ, ವಾರ್ಡನ್ ರಾವುತಪ್ಪ, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ರಾವುತಪ್ಪ ಹವಾಲ್ದಾರ ಇದ್ದರು.
ವಸತಿ ಶಾಲೆ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡಿದ್ದು, ಸಮಸ್ಯೆಗಳನ್ನು ಒಂದು ವಾರದಲ್ಲಿ ಬಗೆಹರಿಸುವಂತೆ ಶಾಲಾ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು. ಅಡುಗೆಯವರು ಸರಿಯಾದ ಸಮಯಕ್ಕೆ ಬರದಿದ್ದರೆ ಅವರನ್ನು ಒಳಗಡೆ ಸೇರಿಸಿಕೊಳ್ಳಬಾರದೆಂದು ತಿಳಿಸಿದ್ದೇನೆ. ಯಾವುದೇ ಕಾರಣಕ್ಕೂ ಮಕ್ಕಳಿಗೆ ತೊಂದರೆಯಾದರೆ ಸಹಿಸುವುದಿಲ್ಲ.ರವೀಂದ್ರ ಹೊನೋಲೆ ಯಾದಗಿರಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ