ರೈತ ಸಂಘಟನೆಯಿಂದ ಸಮಸ್ಯೆಗಳಿಗೆ ಪರಿಹಾರ

KannadaprabhaNewsNetwork | Published : Feb 16, 2024 1:49 AM

ಸಾರಾಂಶ

ಅರಣ್ಯದಂಚಿನ ಗಡಿ ಗ್ರಾಮಗಳಲ್ಲಿ ಮಹಿಳಾ ಘಟಕ ಉದ್ಘಾಟನೆ ಮಾಡಿರುವುದು ಸರ್ವ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಅನುಕೂಲದಾಯಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದರು

ಕನ್ನಡಪ್ರಭ ವಾರ್ತೆ ಹನೂರು ಅರಣ್ಯದಂಚಿನ ಗಡಿ ಗ್ರಾಮಗಳಲ್ಲಿ ಮಹಿಳಾ ಘಟಕ ಉದ್ಘಾಟನೆ ಮಾಡಿರುವುದು ಸರ್ವ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಅನುಕೂಲದಾಯಕವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಜಿಲ್ಲಾಧ್ಯಕ್ಷ ಹೊನ್ನೂರ್ ಪ್ರಕಾಶ್ ತಿಳಿಸಿದರು.ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ವ್ಯಾಪ್ತಿಯ ಕಡಬೂರು ಗ್ರಾಮದಲ್ಲಿ ರೈತ ಸಂಘ ಮಹಿಳಾ ಘಟಕ ಉದ್ಘಾಟಿಸಿ ಮಾತನಾಡಿದರು.ಮಹಿಳೆಯರು ಎಲ್ಲಾ ರಂಗದಲ್ಲೂ ಉತ್ತಮ ಕೆಲಸ ಮಾಡುವ ಮೂಲಕ ಮುಂಚೂಣಿಯಲ್ಲಿದ್ದಾರೆ. ಹೀಗಾಗಿ ತಾಲೂಕಿನ ಅರಣ್ಯದಂಚಿನ ಗಡಿಗ್ರಾಮ ಕಡಬೂರು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ಮಹಿಳಾ ಗ್ರಾಮ ಘಟಕ ಉದ್ಘಾಟನೆ ಮಾಡಲಾಗಿದೆ. ಗ್ರಾಮದಲ್ಲಿನ ಮೂಲಭೂತ ಸೌಲಭ್ಯಗಳಿಗೆ ಹಾಗೂ ಸರ್ಕಾರದ ಯೋಜನೆಗಳನ್ನು ಪಡೆಯಲು ಸಂಘದ ಮೂಲಕ ಸರ್ವ ಸದಸ್ಯರು ಹಾಗೂ ಮಹಿಳೆಯರು ಸಂಘಟನೆಯಲ್ಲಿ ಭಾಗವಹಿಸಲು ಮುಂದಾಗಿರುವುದು ಶ್ಲಾಘನೀಯ ವಿಚಾರವಾಗಿದೆ. ಈ ಗ್ರಾಮದಲ್ಲಿ ವೃದ್ಧಾಪ್ಯ ವೇತನ, ವಿಧವೆ ವೇತನ ಹಾಗೂ ಕುಡಿಯವ ನೀರಿನ ಸಮಸ್ಯೆ ಹಾಗೂ ಪಡಿತರ ವ್ಯವಸ್ಥೆ ನಿಗದಿತ ಸಮಯಕ್ಕೆ ತಲುಪುತ್ತಿಲ್ಲ ಮತ್ತು ಬಸ್ಸಿನ ವ್ಯವಸ್ಥೆ ಇಲ್ಲ ಗ್ಯಾಸ್ ಸಿಲಿಂಡರ್‌ಗಳು ಗ್ರಾಮಕ್ಕೆ ತಲುಪಲು ಆಗುತ್ತಿಲ್ಲ . ಹೀಗಾಗಿ ಮಹಿಳಾ ಗ್ರಾಮ ಘಟಕ ವತಿಯಿಂದ ಗ್ರಾಪಂನಲ್ಲಿ ಸಿಗುವ ಎನ್ ಆರ್ ಐ ಜಿ ಕೆಲಸ ಕಾರ್ಯಗಳಿಗೆ ಮಹಿಳಾ ತಂಡ ರಚನೆ ಮಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಕೆಲಸ ಕಾರ್ಯಗಳಿಗೆ ಸದ್ಬಳಕೆ ಮಾಡಿಕೊಳ್ಳಬೇಕು ಹಾಗೂ ಹೋರಾಟದ ಮೂಲಕ ಸರ್ಕಾರದಿಂದ ಸಿಗುವ ಸೌಲತ್ತು ಪಡೆಯಬೇಕು ಮೂಲಭೂತ ಸೌಲಭ್ಯಗಳಿಗಾಗಿ ಹೋರಾಟದ ಮೂಲಕ ಜನಪ್ರತಿನಿಧಿಗಳು ಅಧಿಕಾರಿಗಳನ್ನು ಗ್ರಾಮದತ್ತ ಬರುವಂತೆ ಮಾಡಬೇಕಾಗಿದೆ. ಇದೇ ವೇಳೆ ಹನೂರು ತಾಲೂಕು ಘಟಕದ ಅಧ್ಯಕ್ಷ ಚಂಗಡಿ ಕರಿಯಪ್ಪ ಮಾತನಾಡಿ, ಗಡಿ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಹಾಗೂ ಗ್ರಾಮಸ್ಥರು ದಿನ ನಿತ್ಯ ಒಂದಲ್ಲ ಒಂದು ಸಮಸ್ಯೆಯಿಂದ ಪರಿತಪಿಸುತ್ತಿದ್ದಾರೆ. ಹೀಗಾಗಿ ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಕಾಡಂಚಿನ ಗ್ರಾಮಗಳಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆಗೊಳಿಸುವ ಮೂಲಕ ಮಳೆ ಇಲ್ಲದೆ ಕಾಡು ಪ್ರಾಣಿಗಳು ಅರಣ್ಯ ಬಿಟ್ಟು ನಾಡಿನತ್ತ ನೀರು ಆಹಾರ ಅರಸಿ ಬರುತ್ತಿದೆ ಹೀಗಾಗಿ ಕ್ರೂರ ಪ್ರಾಣಿಗಳು ಮತ್ತು ಆನೆ, ಹಂದಿ ಹಾಗೂ ಇತರೆ ಪ್ರಾಣಿಗಳನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಗಮನ ಹರಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಈ ವೇಳೆ ಗೌಡಳ್ಳಿ ಸೋಮಣ್ಣ, ಡಿ. ಎಂ ಸಮುದ್ರ ರಾಜು ಮಹಿಳಾ ಘಟಕದ ಜನಿತ ರಾಣಿ ,ಮಾದೇವಮ್ಮ, ಕವಿತಾ ಮತ್ತಿತರರು ಮಹಿಳೆಯರು ಉಪಸ್ಥಿತರಿದ್ದರು.

Share this article