ಸ್ವಸ್ಥ ಹಾಗೂ ಸ್ವಚ್ಫ ದೀಪಾವಳಿ ಆಚರಣೆಯ ಉದ್ದೇಶದಿಂದ ಮಕ್ಕಳಿಗೆ ಜಾಗೃತಿ ಮೂಡಿಸಲು ತಾಲೂಕಿನ ಐಗೂರು ಸರ್ಕಾರಿ ಪ್ರೌಢಶಾಲೆಯ ಭುವನಕ್ಕೊಂದು ಸದನ ಇಕೋ ಕ್ಲಬ್ ವತಿಯಿಂದ ಹಸಿರು ದೀಪಾವಳಿ ಆಚರಿಸಲಾಯಿತು.
ಸೋಮವಾರಪೇಟೆ: ಸ್ವಸ್ಥ ಹಾಗೂ ಸ್ವಚ್ಫ ದೀಪಾವಳಿ ಆಚರಣೆಯ ಉದ್ದೇಶದಿಂದ ಮಕ್ಕಳಿಗೆ ಜಾಗೃತಿ ಮೂಡಿಸಲು ತಾಲೂಕಿನ ಐಗೂರು ಸರ್ಕಾರಿ ಪ್ರೌಢಶಾಲೆಯ ಭುವನಕ್ಕೊಂದು ಸದನ ಇಕೋ ಕ್ಲಬ್ ವತಿಯಿಂದ ಹಸಿರು ದೀಪಾವಳಿ ಆಚರಿಸಲಾಯಿತು.ಇಕೋ ಕ್ಲಬ್ ಸಂಚಾಲಕ ಎಸ್.ಎಸ್.ರಂಜಿನಿ, ಪಟಾಕಿ ಸಿಡಿಸುವುದರಿಂದ ಆಗುವ ದುಷ್ಪರಿಣಾಮಗಳು ಹಾಗೂ ಹಸಿರು ದೀಪಾವಳಿ ಆಚರಣೆ ಕುರಿತು ಮಾಹಿತಿ ನೀಡಿ, ಪ್ರತಿಜ್ಞಾವಿಧಿ ಬೋಧಿಸಿದರು.
10ನೇ ತರಗತಿ ವಿದ್ಯಾರ್ಥಿನಿ ಕೆ.ಆರ್. ದೀಕ್ಷಿತಾ ಪರಿಸರಕ್ಕೆ ಹಾನಿಯಾಗದಂತೆ ಹಣತೆ ಬೆಳಗಿಸುವ ಮೂಲಕ ಪರಿಸರ ಸ್ನೇಹಿ ದೀಪಾವಳಿ ಆಚರಣೆ ಕುರಿತ ಅನಿಸಿಕೆ ವ್ಯಕ್ತಪಡಿಸಿದಳು. ಮುಖ್ಯ ಶಿಕ್ಷಕ ಎಂ.ಎಂ.ಯಶ್ವಂತ್ ಕುಮಾರ್, ಸಹ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.