ದೊಡ್ಡಣಗುಡ್ಡೆ ಪ್ರಜ್ಞಾ ಶಾಲೆಯಲ್ಲಿ ವಿಶ್ವಶಾಂತಿ ಪೋಸ್ಟರ್ ಸ್ಪರ್ಧೆ

KannadaprabhaNewsNetwork |  
Published : Nov 08, 2026, 02:45 AM IST
ದೊಡ್ಡಣಗುಡ್ಡೆ ಪ್ರಜ್ಞಾ ಶಾಲೆಯಲ್ಲಿ ಪೋಸ್ಟರ್ ಸ್ಪರ್ಧೆಯ ವಿಜೇತರಿಗೆ ಗುರೂಜಿ ಬಹುಮಾನ ವಿತರಿಸಿದರು. | Kannada Prabha

ಸಾರಾಂಶ

ಇಲ್ಲಿನ ದೊಡ್ಡಣಗುಡ್ಡೆಯ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ಸ್ ಆಶ್ರಯದಲ್ಲಿ 2026-27ನೇ ಸಾಲಿನ ವಿಶ್ವಶಾಂತಿ ಪೋಸ್ಟರ್ ಸ್ಪರ್ಧೆ ನಡೆಯಿತು.

ಉಡುಪಿ: ಇಲ್ಲಿನ ದೊಡ್ಡಣಗುಡ್ಡೆಯ ಪ್ರಜ್ಞಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ಸ್ ಆಶ್ರಯದಲ್ಲಿ 2026-27ನೇ ಸಾಲಿನ ವಿಶ್ವಶಾಂತಿ ಪೋಸ್ಟರ್ ಸ್ಪರ್ಧೆ ನಡೆಯಿತು. ಈ ವರ್ಷದ ಸ್ಪರ್ಧೆಗೆ ಮಾನವೀಯತೆಯಲ್ಲಿ ಸಾಮರಸ್ಯ ಎಂಬ ವಿಷಯದಲ್ಲಿ 11ರಿಂದ 13 ವರ್ಷದ ಮಕ್ಕಳಿಗೆ ಈ ಸ್ಪರ್ಧೆಯನ್ನು ನಡೆಸಲಾಯಿತು. ಶಾಲೆಯ ವಿದ್ಯಾರ್ಥಿಗಳು ತಮ್ಮ ಕಲ್ಪನೆ ಮತ್ತು ಸೃಜನಶೀಲತೆಯನ್ನು ಬಣ್ಣಗಳ ಮೂಲಕ ಅಭಿವ್ಯಕ್ತಿಸಿ ಶಾಂತಿ, ಸಹಬಾಳ್ವೆ, ಮಾನವೀಯತೆ ಹಾಗೂ ಸಾಮರಸ್ಯದ ಮಹತ್ವವನ್ನು ಮನಮುಟ್ಟುವಂತೆ ಅನಾವರಣಗೊಳಿಸಿದರು

ಸ್ಪರ್ಧೆಯಲ್ಲಿ 7ನೇ ತರಗತಿಯ ಸರಜೀತ್ ಮಂಡಲ್ ಪ್ರಥಮ, 6ನೇ ತರಗತಿಯ ಸಾನಿಕಾ ದ್ವಿತೀಯ ಹಾಗೂ 5ನೇ ತರಗತಿಯ ದೀಕ್ಷಾ ತೃತೀಯ ಸ್ಥಾನ ಗಳಿಸಿದರು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸಿ ಪ್ರೋತ್ಸಾಹಿಸಲಾಯಿತು.

ಶಾಲೆಯ ಸಂಸ್ಥಾಪಕ ಶ್ರೀ ರಮಾನಂದ ಗುರೂಜಿ ಅವರನ್ನು ಲಯನ್ಸ್ ಕ್ಲಬ್‌ ಬನ್ನಂಜೆ ಟೈಗರ್ಸ್ ವತಿಯಿಂದ ಗೌರವಿಸಿ ಸನ್ಮಾನಿಸಲಾಯಿತು.

ಶಾಲೆಯ ಉಸ್ತುವಾರಿ ಕುಸುಮಾ ನಾಗರಾಜ್, ಪ್ರಾಂಶುಪಾಲೆ ಉಷಾ ರಾಮಾನಂದ, ಲಯನ್ಸ್ ಕ್ಲಬ್ ಬನ್ನಂಜೆ ಟೈಗರ್ಸ್‌ ಅಧ್ಯಕ್ಷೆ ಸುಮಾಲಿನಿ ದಯಾನಂದ್, ಕಾರ್ಯದರ್ಶಿ ಅನುಪಮ ಜಯಕುಮಾರ್, ಕೋಶಾಧಿಕಾರಿ ರಮಾದೇವಿ ಹಾಗೂ ಸದಸ್ಯರಾದ ದಯಾನಂದ ಮತ್ತು ವಿನೋದ್ ಶೆಟ್ಟಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕವಿ ಹೃದಯದ ಡಾ.ಚೆನ್ನಬಸವ ಶ್ರೀಗಳು: ತೋಂಟದಾರ್ಯ ಶ್ರೀ
ಶಿರಗುಪ್ಪಿ ಕಾರ್ಖಾನೆಯಿಂದ ₹4,000 ದರ ಘೋಷಣೆ