ಅವಧಿ ಮೀರಿದ ರಾಗಿಗಂಜಿ ಸೇವಿಸಿದ ಕೆಲವು ಮಕ್ಕಳು ಅಸ್ವಸ್ಥ

KannadaprabhaNewsNetwork |  
Published : Jun 13, 2024, 12:48 AM IST
ಫೋಟೋ- ಸಿದ್ದು ಯಡ್ರಾಮಿ 1ಯಡ್ರಾಮಿ ತಾಲೂಕಿನ ಸರ್ಕಾರಿ ಮಾದರಿ ಶಾಲೆಯಲ್ಲಿ ಪರಿಶೀಲನೆ ನಡೆಸುತ್ತಿರುವ ತಾಲೂಕ ವೈದ್ಯಾಧಿಕಾರಿ ಡಾ.ಸಿದ್ದು ಪಾಟೀಲ, ಮಳ್ಳಿ ಗ್ರಾಂ.ಪ ಪಿಡಿಒ ಭೀಮನಗೌಡ ಅರಳಗುಂಡಗಿ. | Kannada Prabha

ಸಾರಾಂಶ

ನಾಗರಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಅವಧಿ ಮೀರುತ್ತಿರುವ ಗಂಜಿ ಸೇವಿಸಿದ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ತಾಲೂಕ ವೈದ್ಯಾಧಿಕಾರಿ ಸಿದ್ದು ಪಾಟೀಲ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಯಡ್ರಾಮಿ

ತಾಲೂಕಿನ ನಾಗರಹಳ್ಳಿ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಅವಧಿ ಮೀರುತ್ತಿರುವ ಗಂಜಿ ಸೇವಿಸಿದ ಕೆಲವು ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂದು ತಾಲೂಕ ವೈದ್ಯಾಧಿಕಾರಿ ಸಿದ್ದು ಪಾಟೀಲ ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದ ನಂತರ ತಿಳಿಸಿದ್ದಾರೆ.

ಮಕ್ಕಳನ್ನು ಪಟ್ಟಣದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಎಲ್ಲರೂ ಚೇತರಿಸಿಕೊಂಡಿದ್ದಾರೆ.

ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿಯವರೆಗೆ 260 ಮಕ್ಕಳು ಓದುತ್ತಿದ್ದಾರೆ. ಎಂದಿನಂತೆ ಬೆಳಗ್ಗೆ 10.30ಕ್ಕೆ ಕಲುಷಿತ ನೀರಿನ ಜೊತೆ ಮೊದಲ ಬಾರಿಗೆ ಮಕ್ಕಳಿಗೆ ಗಂಜಿ ವಿತರಿಸಲಾಗಿತ್ತು. ಕೆಲವು ವಿದ್ಯಾರ್ಥಿಗಳು ಗಂಜಿ ಸರಿಯಾಗಿ ಇಲ್ಲ ಎಂದು ಬಿಸಾಕಿದರೆ ಉಳಿದ ವಿದ್ಯಾರ್ಥಿಗಳು ಅದನ್ನು ಸೇವಿಸಿದ ರಾತ್ರಿ ನಾಲ್ಕು ವಿದ್ಯಾರ್ಥಿ ವಾಂತಿ ಮಾಡಿದ್ದ. ನಂತರ ಮೂವರು ವಿದ್ಯಾರ್ಥಿಗಳು ವಾಂತಿ ಮಾಡಿದರು. ಉಳಿದ ಮಕ್ಕಳನ್ನು ವಿಚಾರಿಸಿದಾಗ 1ರಿಂದ 4ನೇ ತರಗತಿಯ 8 ವಿದ್ಯಾರ್ಥಿಗಳು ಹೊಟ್ಟೆ ನೋಯುತ್ತಿರುವುದಾಗಿ ತಿಳಿಸಿದರು.

ನಾಗರಹಳ್ಳಿ ಗ್ರಾಮಸ್ಥರು, ಅಸ್ವಸ್ಥರಾಗಿದ್ದ 16 ವಿದ್ಯಾರ್ಥಿಗಳಿಗೆ ತಕ್ಷಣವೇ ಮಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಿದರು. ಹೆಚ್ಚಿನ ತಪಾಸಣೆಗಾಗಿ ತಾಲ್ಲೂಕು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ. ವೈದ್ಯರು ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡಿದರು.

ಮುನ್ನೆಚ್ಚರಿಕೆ ಕ್ರಮವಾಗಿ ಒಂದರಿಂದ ಐದನೇ ತರಗತಿಯ ವಿದ್ಯಾರ್ಥಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಆಸ್ಪತ್ರೆಗೆ ಬಂದಿದ್ದ ಎಲ್ಲ ವಿದ್ಯಾರ್ಥಿಗಳು ಆರೋಗ್ಯವಾಗಿದ್ದಾರೆ ಎಂದು ತಾಲೂಕ ವೈದ್ಯಾಧಿಕಾರಿ ಸಿದ್ದು ಪಾಟೀಲ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ