ಕನ್ನಡಪ್ರಭ ವಾರ್ತೆ ಕೋಲಾರ
ನಗರದ ರಂಗ ಮಂದಿರದಲ್ಲಿ ವಿಶ್ವ ಬಾಲ ಕಾರ್ಮಿಕ ವಿರೋಧಿ ದಿನಾಚರಣೆ-೨೦೨೪ರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ೧೪ ವರ್ಷದೊಳಗಿನ ಮಕ್ಕಳನ್ನು ಇತರೆ ಚಟುವಟಿಕೆಗಳ ದುಡಿಮೆಗೆ ಒಳಪಡಿಸಿದರೆ ಬಾಲ ಕಾರ್ಮಿಕ ಪದ್ಧತಿಗೆ ಒಳಪಟ್ಟು ಕಾನೂನಿನನ್ವಯ ಅಪರಾಧವಾಗುತ್ತದೆ, ಈ ಅಪರಾಧಕ್ಕೆ ಕಾರಣವಾಗುವ ದುಡಿಮೆಗೆ ನೇಮಿಸಿಕೊಂಡಿರುವ ಮಾಲೀಕರು ಶಿಕ್ಷಾರ್ಹರಾಗಿ ದಂಡಕ್ಕೊಳಗಾಗಬೇಕಾಗುತ್ತದೆ ಎಂದರು.
ಪೋಷಕರು ೧೪ ವರ್ಷದ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಕಡ್ಡಾಯವಾಗಿದೆ, ಶಿಕ್ಷಣ ಪಡೆಯುವುದು ಮಕ್ಕಳ ಹಕ್ಕಾಗಿದೆ, ಪೋಷಕರು ಮಕ್ಕಳಿಗೆ ಕಲಿಕಾ ಚಟುವಟಿಕೆಗಳಿಂದ ಹೊರತುಪಡಿಸಿ ಇತರೆ ಯಾವುದೇ ಚಟುವಟಿಕೆಗಳಿಗೆ ಒಳಪಡಿಸಬಾರದು, ಮಕ್ಕಳನ್ನು ಸಕಾರಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಬೇಕು, ಕಾರ್ಮಿಕರ ಮಕ್ಕಳಿಗೆ ಸರ್ಕಾರವು ಉಚಿತ ಶಿಕ್ಷಣ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ, ವಸತಿ ಸೌಲಭ್ಯ ಸೇರಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿರುವುದನ್ನು ಸದ್ಬಳಿಸಿಕೊಂಡು ಸಮಾಜ ಸೇವೆಯ ಮೂಲಕ ಮುಖ್ಯ ವಾಹಿನಿಗೆ ಬರುವಂತಾಗಬೇಕೆಂದು ಕರೆ ನೀಡಿದರು.ಕೋಲಾರ ಜಿಲ್ಲಾಧಿಕಾರಿ ಅಕ್ರಂಪಾಷ ಈ ಹಿಂದೆ ಕಾರ್ಮಿಕ ಇಲಾಖೆಯಲ್ಲಿದ್ದಾಗ ಕಾರ್ಮಿಕರ ಕಲ್ಯಾಣಕ್ಕಾಗಿ ೨ ಸಾವಿರ ಕೋಟಿ ಯೋಜನೆ ನೀಡಿದ್ದರು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಸರ್ಕಾರದ ಸೌಲಭ್ಯಗಳನ್ನು ಸದ್ಬಳಿಸಿಕೊಳ್ಳಬೇಕು. ಈ ಕುರಿತು ಶಾಲಾ ವಿದ್ಯಾರ್ಥಿಗಳು ಸಮಾಜದಲ್ಲಿ ಅರಿವು ಮೂಡಿಸುವಂತಾಗಬೇಕೆಂದರು,
ಮಕ್ಕಳ ದುಡಿಮೆಯ ಅನಿಷ್ಠ ಪದ್ಧತಿಯ ವಿರುದ್ಧ ಯೂರೋಪ್ ದೇಶದಲ್ಲಿ ದೊಡ್ಡ ಕ್ರಾಂತಿ ಉಂಟಾಗಿತ್ತು. ನಂತರದಲ್ಲಿ ಎಲ್ಲೆಡೆ ಬಾಲ ಕಾರ್ಮಿಕ ವಿರೋಧಿಯ ಹೋರಾಟದ ಫಲವಾಗಿ ಕಾನೂನುಗಳಲ್ಲಿ ಬಾಲ ಕಾರ್ಮಿಕ ಪದ್ಧತಿ ಅಪರಾಧವೆಂದು ಘೋಷಿಸಲಾಗಿದೆ. ಸಾಮಾನ್ಯವಾಗಿ ಹೋಟೆಲ್. ವರ್ಕ್‌ಶಾಪ್, ಬಟ್ಟೆ ಅಂಗಡಿ, ಇಟ್ಟಿಗೆ ಕಾರ್ಖಾನೆ, ಕಟ್ಟಣ ನಿರ್ಮಾಣ, ಇತ್ಯಾದಿಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದು ಕಾನೂನು ಉಲ್ಲಂಘನೆಯಾಗಲಿದೆ. ಬಾಲ್ಯ ವಿವಾಹಗಳು ಸಹ ಕಾನೂನು ಬಾಹಿರವಾಗಿವೆ. ಇಂತಹ ಪ್ರಕರಣಗಳನ್ನು ಯಾರಾದರೂ ಕಂಡಲ್ಲಿ ಮಕ್ಕಳ ಸಹಾಯವಾಣಿ ೧೦೯೮ಗೆ ಕರೆ ಮಾಡುವ ಮೂಲಕ ಮಾಹಿತಿ ನೀಡ ಬೇಕೆಂದು ಮನವಿ ಮಾಡಿದರು,
ಕಲಿಕೆಯು ಉತ್ತಮ ಸಾಧನೆಗಳ ಮೂಲಕ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾಗಲಿದೆ. ಆಧುನಿಕ ಜಗತ್ತಿನ ತಾಂತ್ರಿಕ ಜ್ಞಾನವನ್ನು ಸಾಧನೆಗೆ ಬಳಸಿಕೊಳ್ಳ ಬೇಕೇ ಹೊರತು ದುರ್ಬಳಿಸಿಕೊಳ್ಳಬಾರದು, ಬಾಲ ಕಾರ್ಮಿಕರ ವಿರುದ್ಧ ಅಂಬೇಡ್ಕರ್ ರೂಪಿಸಿರುವ ಸಂವಿಧಾನದಲ್ಲಿ ಅನೇಕ ಕಾನೂನುಗಳನ್ನು ಜಾರಿಗೆ ತರಲಾಗಿದೆ ಎಂದು ವಿವರಿಸಿದರು.
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನಿಲ್ ಎಸ್.ಹೊಸಮನಿ ಮಾತನಾಡಿ, ಸಮರ್ಪಕವಾದ ಅರಿವು ಇಲ್ಲದೆ ಅನೇಕ ಹಿಂದುಳಿದ ರಾಜ್ಯ ಮತ್ತು ಜಿಲ್ಲೆಗಳಲ್ಲಿ ಮಕ್ಕಳನ್ನು ದುಡಿಮೆಗೆ ಒಳಪಡಿಸುವ ಮೂಲಕ ಕಡ್ಡಾಯ ಶಿಕ್ಷಣದಿಂದ ವಂಚಿತಗೊಳಿಸಿರುವುದನ್ನು ಕಾಣಬಹುದಾಗಿದೆ. ಸರ್ಕಾರದ ಜೂತೆಗೆ ಪ್ರಜ್ಞಾವಂತರು ಕೈಜೋಡಿಸಿ ಕಡ್ಡಾಯ ಶಿಕ್ಷಣದ ಅರಿವು ಮೂಡಿಸುವಂತಾಗಬೇಕು, ವಿದ್ಯಾರ್ಥಿಗಳು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ವಿರುದ್ಧ ಸಹಾಯವಾಣಿ ಬಳಸಿಕೊಳ್ಳುವಂತಾಗಬೇಕು, ಜೂನ್ ೧ ರಿಂದ ೩೦ರವರೆಗೆ ಬಾಲಾ ಕಾರ್ಮಿಕರ ಪುನರ್ ವಸತಿ ಅಭಿಯಾನ, ಶಾಲೆ ಬಿಟ್ಟ ಮಕ್ಕಳ ಪುನರ್ ಸೇರ್ಪಡೆ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿದೆ.
ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೂಸೈಟಿಯ ನಿರ್ದೇಶಕಿ ಶೃತಿ.ಕೆ. ಸ್ವಾಗತಿಸಿ, ವಾರ್ಷಿಕ ವರದಿ ವಾಚಿಸಿದರು, ಶಿಡ್ಲಘಟ್ಟ ಚೈಲ್ಡ್ ರೈಟ್ಸ್ ಟ್ರಸ್ಟ್ ಸಂಯೋಜಕ ಜಯರಾಂರಿಂದ ಉಪನ್ಯಾಸ. ಈ ಜಲ, ಈ ನೆಲ, ಕಲೆ ಮತ್ತು ಸಾಂಸ್ಕೃತಿಕ ಸಂಸ್ಥೆಯ ಕಲಾವಿದ ವೆಂಕಟಾಚಲಪತಿರಿಂದ ನಾಡಗೀತೆ, ತನುಷ ತಂಡದಿಂದ ಪ್ರಾರ್ಥಿಸಿದರು.