ಸೋಮನಾಥ ದೇವಾಲಯ ಸಾಂಸ್ಕೃತಿಕವಾಗಿ ಶ್ರೀಮಂತ

KannadaprabhaNewsNetwork | Updated : Dec 28 2023, 01:46 AM IST

ಸಾರಾಂಶ

ಲಕ್ಷ್ಮೇಶ್ವರದ ಐತಿಹಾಸಿಕ ಸೋಮನಾಥ ದೇವಸ್ಥಾನದಲ್ಲಿ ಪುಲಿಗೆರೆ ಪೌರ್ಣಿಮೆ ಅಂಗವಾಗಿ ವಿವಿಧ ಕಾರ್ಯಕ್ರಮಗಳು ನಡೆದವು. ಶಾಲೆ ವಿದ್ಯಾರ್ಥಿಗಳಿಂದ ಸಂಗೀತ ಸೇವೆ ನಡೆಯಿತು.

ಲಕ್ಷ್ಮೇಶ್ವರ: ಐತಿಹಾಸಿಕವಾಗಿ ಸೋಮನಾಥ ದೇವಾಲಯವು ಹೆಚ್ಚು ಪ್ರಸಿದ್ಧಿ ಪಡೆದಿದೆ. ಸೋಮನಾಥನು ಪತ್ನಿ ಸಮೇತನಾಗಿ ವೃಷಭದ ಮೇಲೆ ಕುಳಿತು ಪ್ರಪಂಚ ಪರ್ಯಟನೆಗೆ ಹೊರಟಿರುವಂತೆ ಭಾಸವಾಗುತ್ತದೆ ಎಂದು ತಹಸೀಲ್ದಾರ್ ವಾಸುದೇವ ಸ್ವಾಮಿ ಹೇಳಿದರು. ಪಟ್ಟಣದ ಸೋಮೇಶ್ವರ ದೇವಾಲಯದಲ್ಲಿ ಮಂಗಳವಾರ ಸಂಜೆ ನಡೆದ ಪುಲಿಗೆರ ಪೌರ್ಣಿಮೆ ಎನ್ನುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 6ನೇ ಶತಮಾನದಲ್ಲಿ ನಿರ್ಮಿತವಾಗಿರುವ ಸೋಮನಾಥ ದೇವಾಲಯವು ತನ್ನ ಐತಿಹಾಸಿಕ ಕುರುಹುಗಳಿಂದ ಪ್ರಸಿದ್ಧ ಹೊಂದಿದೆ. ದೇವಾಲಯದಲ್ಲಿನ ಗರ್ಭಗುಡಿಯಲ್ಲಿ ಸೋಮನಾಥನು ವೃಷಭದ ಮೇಲೆ ಪತ್ನಿ ಸಮೇತನಾಗಿ ಕುಳಿತು ವಿಶ್ವ ಪ್ರದಕ್ಷಿಣೆಗೆ ಹೊರಟಿರುವುದನ್ನು ನೋಡಲು ಎರಡು ಕಣ್ಣುಗಳು ಸಾಲದು. ದೇವಾಲಯದ ಹೊರಭಾಗಗಳಲ್ಲಿ ಕೆತ್ತನೆ ಮಾಡಿರುವ ಶಿಲ್ಪ ಕಲಾಕೃತಿಗಳು ನೋಡಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತವೆ. ಇನ್ಫೋಸಿಸ್‌ನ ಡಾ. ಸುಧಾಮೂರ್ತಿ ಅವರ ಪ್ರಯತ್ನದಿಂದ ಸೋಮನಾಥ ದೇವಾಲಯ ಮೂಲ ರೂಪ ಪಡೆದುಕೊಂಡಿರುವುದು ಹೆಚ್ಚು ಸಂತಸ ನೀಡುತ್ತದೆ. ಇತಿಹಾಸ ಪ್ರಸಿದ್ಧ ದೇವಾಲಯದ ವೀಕ್ಷಣೆಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ ಇದೆ ಎಂದು ಹೇಳಿದರು. ತಾಪಂ ಇಒ ಕೃಷ್ಣಪ್ಪ ಧರ್ಮರ ಮಾತನಾಡಿ, ಸೋಮೇಶ್ವರ ದೇವಾಲಯವು ತನ್ನ ಐತಿಹಾಸಿಕ ವೈಭವವನ್ನು ಮರಳಿ ಪಡೆಯುವುದರಲ್ಲಿ ಯಾವುದೇ ಸಂಶಯ ಬೇಡ ಎಂದು ಹೇಳಿದರು. ಸೋಮೇಶ್ವರ ಭಕ್ತರ ಸೇವಾ ಸಮಿತಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಹಾಗೂ ಡಾ. ಎಂ.ಆರ್. ಕಲಿವಾಳಮಠ ಮಾತನಾಡಿದರು. ಸೋಮಣ್ಣ ಬಂಡಿವಾಡ, ಎಂ. ಸಿದ್ದಲಿಂಗಯ್ಯ. ಎನ್.ಆರ್. ಸಾತಪೂತೆ ಭಾಗವಹಿಸಿದ್ದರು. ಪುಲಿಗೆರೆ ಪೌರ್ಣಿಮೆಯು 25ನೇ ಸಂಚಿಕೆಯೊಂದಿಗೆ ಹೆಜ್ಜೆ ಇಡುತ್ತಿರುವ ವೇಳೆ ಪಟ್ಟಣದ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವ ಗುರು ಗಂಧರ್ವ ಸಂಗೀತ ಶಾಲೆಯ ಮಕ್ಕಳಿಂದ ಸಂಗೀತ ಸೇವೆ ನಡೆಯಿತು. ಸಂಗೀತ ಶಿಕ್ಷಕ ಪರಶುರಾಮ ಭಜಂತ್ರಿ ಅವರು ಸಂಗೀತ ಸೇವೆಗೆ ಸಾಥ ನೀಡಿದರು.

ಸುರೇಶ ರಾಚನಾಯಕರ, ಪೂರ್ಣಾಜಿ ಕರಾಟೆ, ಮಹೇಶ ಹೊಗೆಸೊಪ್ಪಿನ, ನೀಲಪ್ಪ ಕರ್ಜಕಣ್ಣವರ, ಮಾಲಾದೇವಿ ದಂದರಗಿ, ಸುಮಾ ಚೋಟಗಲ್ಲ, ಬಸವರಾಜ ಪುಠಾಣಿ, ಮಲ್ಲೇಶಪ್ಪ ಕಣವಿ, ಗೋಪಾಲ ನಾಯಕ್. ಡಿ.ಎಚ್‌. ಪಾಟೀಲ, ಎಸ್.ವಿ. ಕನೋಜ, ಅಶೋಕ ನೀರಾಲೋಟಿ, ಸೋಮಶೇಖರ ಕೆರಿಮನಿ, ನಾಗರಾಜ ಕಳಸಾಪುರ, ಸತೀಶ್ ಬೊಮಲೆ ಇದ್ದರು. ಎಲ್.ಆರ್. ಮಲಸಮುದ್ರ ಕಾರ್ಯಕ್ರಮ ನಿರ್ವಹಿಸಿದರು. ಜಿ.ಎಸ್. ಗುಡಗೇರಿ ಕಾರ್ಯಕ್ರಮ ನಿರೂಪಿಸಿದರು. ಚಂದ್ರು ನೇಕಾರ ವಂದಿಸಿದರು.

Share this article