ದಾಬಸ್‌ಪೇಟೆ: ಸೋಂಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಬಿ.ಆನಂದ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ್ ಘೋಷಿಸಿದರು.
ದಾಬಸ್‌ಪೇಟೆ: ಸೋಂಪುರ ಗ್ರಾಪಂ ನೂತನ ಅಧ್ಯಕ್ಷರಾಗಿ ಬಿ.ಆನಂದ್ ಕುಮಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಮೇಶ್ ಘೋಷಿಸಿದರು.
ಅಧ್ಯಕ್ಷೆ ಪ್ರೇಮಾ ಅವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಸರ್ವ ಸದಸ್ಯರ ಒಮ್ಮತದಿಂದ ಆನಂದ್ ಕುಮಾರ್ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಆನಂದ್ ಕುಮಾರ್ ಮಾದ್ಯಮಗಳೊಂದಿಗೆ ಮಾತನಾಡಿ, ಸರ್ವ ಸದಸ್ಯರು, ಮಾಜಿ ಅಧ್ಯಕ್ಷ ತೀರ್ಥಪ್ರಸಾದ್ ಸಹಕಾರದಿಂದ ಅಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು ಪಂಚಾಯಿತಿ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಎಲ್ಲಾ ಗ್ರಾಮಗಳಲ್ಲಿಯೂ ಮೂಲ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ನೀರು, ನೈರ್ಮಲ್ಯ, ಕಸ ವಿಲೇವಾರಿ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಲಾಗುವುದು ಎಂದು ತಿಳಿಸಿದರು.ನೂತನ ಅಧ್ಯಕ್ಷರನ್ನು ಮಾಜಿ ಅಧ್ಯಕ್ಷರಾದ ಪ್ರೇಮಾ, ಶಿವಕುಮಾರ್, ಪಂಚಾಕ್ಷರಿ, ಉಪಾಧ್ಯಕ್ಷೆ ಲಾವಣ್ಯ, ಅಲ್ಪಯ್ಯನಪಾಳ್ಯದ ವೆಂಕಟೇಶ್, ಸದಸ್ಯರಾದ ಜಗದೀಶ್, ಪರಮಣ್ಣ, ಮುಖಂಡರಾದ ಯುವರಾಜ್, ಸಂತೋಷ್, ವೆಂಕಟೇಶ್, ಮಾಲೂರು ಮಂಜುನಾಥ್ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಅಶೋಕ್, ಗೌರಮ್ಮ, ಮಂಗಳಮ್ಮ, ಮಂಜುಳ, ಪ್ರೇಮಾ, ಲಕ್ಷ್ಮೀದೇವಿ, ಪವಿತ್ರ, ರಾಜೇಶ್ವರಿ, ಸಿದ್ದಯ್ಯ, ಸರೋಜಮ್ಮ, ನಾಗರತ್ನಮ್ಮ, ಲಕ್ಷ್ಮಮ್ಮ, ಲಾವಣ್ಯ, ಇಂದ್ರಮ್ಮ, ಗಂಗಾಧರ್, ಪ್ರೇಮಾ, ಬಸವರಾಜು, ಶಿಲ್ಪ, ಬೈಲಪ್ಪ, ಮಹಾಲಕ್ಷ್ಮಮ್ಮ, ಚಿಕ್ಕಮ್ಮ, ಪಿಡಿಒ ರವಿಶಂಕರ್, ಕಾರ್ಯದರ್ಶಿ ಹನುಮಂತರಾಜು, ದ್ವಿತೀಯ ದರ್ಜೆ ಸಹಾಯಕ ಮಂಜುನಾಥ್ ಹಾಗೂ ಪಂಚಾಯ್ತಿ ಸಿಬ್ಬಂದಿ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.