ಯುವಜನೋತ್ಸವ: ಹಲವು ತಂಡ ರಾಜ್ಯ ಮಟ್ಟಕ್ಕೆ ಆಯ್ಕೆ

KannadaprabhaNewsNetwork |  
Published : Nov 26, 2026, 02:45 AM IST
ಜಿಲ್ಲಾ ಮಟ್ಟದ ಯುವಜನೋತ್ಸವ ಸಂಪನ್ನ: ಹಲವು ತಂಡಗಳು ರಾಜ್ಯ ಮಟ್ಟಕ್ಕೆ ಆಯ್ಕೆ | Kannada Prabha

ಸಾರಾಂಶ

ಸೋಮವಾರಪೇಟೆ: ತಾಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದ ಚೌಡೇಶ್ವರಿ ಆಟದ ಮೈದಾನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಹಲವು ತಂಡಗಳು ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾದವು.

ಸೋಮವಾರಪೇಟೆ: ತಾಲೂಕಿನ ತಲ್ತಾರೆಶೆಟ್ಟಳ್ಳಿ ಗ್ರಾಮದ ಚೌಡೇಶ್ವರಿ ಆಟದ ಮೈದಾನದಲ್ಲಿ ಇತ್ತೀಚೆಗೆ ನಡೆದ ಜಿಲ್ಲಾ ಮಟ್ಟದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಹಲವು ತಂಡಗಳು ಪ್ರಥಮ ಸ್ಥಾನ ಗಳಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾದವು.

ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಕೊಡಗು, ಜಿಲ್ಲಾ ಯುವ ಒಕ್ಕೂಟ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕು ಯುವ ಒಕ್ಕೂಟಗಳು ಮತ್ತು ಅಬ್ಬಿಮಠದ ಚೌಡೇಶ್ವರಿ ಯೂತ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ಜನಪದ ನೃತ್ಯದ ಗುಂಪು ಸ್ಪರ್ಧೆಯಲ್ಲಿ ತಿತಿಮತಿಯ ಹೃತ್ವಿಕಾ ಮತ್ತು ತಂಡ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಯಿತು. ಜನಪದ ಗೀತೆಯಲ್ಲಿ ಗೋಣಿಕೊಪ್ಪದ ಲಯನ್ಸ್ ಪ್ರೌಢಶಾಲೆ, ನೊಕ್ಕಾಡ್ ನಾಟಕದಲ್ಲಿ ಕೊಡ್ಲಿಪೇಟೆ ಕ್ಯಾತೆ ಎಪಿಜೆ ಅಬ್ದುಲ್ ಕಲಾಂ ಶಾಲೆ ರಾಜ್ಯಮಟ್ಟಕ್ಕೆ ಆಯ್ಕೆಯಾದವು. ವೈಯುಕ್ತಿಕ ಸ್ಪರ್ಧೆಯ ಕವಿತೆ ಬರೆಯುವ ಸ್ಪರ್ಧೆಯಲ್ಲಿ ಸೋಮವಾರಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಜಿ.ಎಂ ಜ್ಞಾನೇಶ್ ಹಾಗೂ ಚಿತ್ರಕಲೆಯಲ್ಲಿ ಸೋಮವಾರಪೇಟೆ ಕುವೆಂಪು ಶಾಲೆಯ ಸಿರಿ ರಾಜ್ಯಮಟ್ಟಕ್ಕೆ ಆಯ್ಕೆಯಾದರು.

ಜನಪದ ನೃತ್ಯದ ಗುಂಪು ಸ್ಪರ್ಧೆಯಲ್ಲಿ ಗೋಣಿಕೊಪ್ಪದ ಲಯನ್ಸ್ ಪ್ರೌಢಶಾಲೆ (ದ್ವಿ) ಹಾಗೂ ಕೊಡ್ಲಿಪೇಟೆ ಕ್ಯಾತೆ ಎಪಿಜೆ ಅಬ್ದುಲ್ ಕಲಾಂ ಶಾಲೆ (ತೃ) ಸ್ಥಾನ ಗಳಿಸಿತು. ಜನಪದ ಗೀತೆಯಲ್ಲಿ ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು (ದ್ವಿ) ಹಾಗೂ ಕೊಡ್ಲಿಪೇಟೆ ಕ್ಯಾತೆ ಎಪಿಜೆ ಅಬ್ದುಲ್ ಕಲಾಂ ಶಾಲೆ (ತೃ) ಸ್ಥಾನ ಗಳಿಸಿತು. ವೈಯುಕ್ತಿಕ ಕವಿತೆ ಬರೆಯುವ ಸ್ಪರ್ಧೆಯಲ್ಲಿ ಬಿಟಿಸಿಜಿ ಕಾಲೇಜಿನ ಎಚ್.ಎಸ್. ಜಿತಿನ್ (ದ್ವಿ) ಹಾಗೂ ಗೌಡಳ್ಳಿ ಪ್ರೌಢಶಾಲೆಯ ಸ್ಪಂದನ (ತೃ) ಸ್ಥಾನ ಗಳಿಸಿದರು. ಚಿತ್ರಕಲೆಯಲ್ಲಿ ಕುವೆಂಪು ಶಾಲೆಯ ಕಿಶೋರ್ (ದ್ವಿ) ಹಾಗೂ ವಿ.ಎ. ರಕ್ಷಿತ್ (ತೃ) ಸ್ಥಾನ ಗಳಿಸಿದರು. ಸ್ಪರ್ಧಾ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಶಂಕರಯ್ಯ ಮಾಸ್ಟರ್ ಹಾಗೂ ಕೊಡಗು ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಕಾರ್ಯ ನಿರ್ವಹಿಸಿದರು.ಯುವ ಒಕ್ಕೂಟದ ಜಿಲ್ಲಾಧ್ಯಕ್ಷ ಪಿ.ಪಿ. ಸುಕುಮಾರ್, ತಾಲೂಕು ಘಟಕದ ಅಧ್ಯಕ್ಷೆ ಚಂದ್ರಿಕಾ, ಉಪಾಧ್ಯಕ್ಷ ಮಹೇಶ್, ಕಾರ್ಯದರ್ಶಿ ತಲ್ತರೆ ರವಿ, ಚೌಡೇಶ್ವರಿ ಯುವಕ ಸಂಘದ ಅಧ್ಯಕ್ಷ ಎಚ್.ಬಿ. ರಾಜಪ್ಪ ಸೇರಿದಂತೆ ಹಲವು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5394 ಕೋಟೀಲಿ 2875 ಕಿಮೀ ರಸ್ತೆ ಅಭಿವೃದ್ಧಿ: ಕೃಷ್ಣ
ಭದ್ರಾ ಡ್ಯಾಂ ಬಲ, ಎಡದಂಡೆ ನಾಲೆಗಳಿಗೆ ನೀರು ಹರಿಸಿ