ಬ್ಯಾಡಗಿ: ಉಪ್ಪಾರ ಸಮಾಜದ (ಭಗೀರಥ) ಸಮುದಾಯ ಭವನ ನಿರ್ಮಾಣಕ್ಕೆ ಶೀಘ್ರದಲ್ಲಿಯೇ ಪಟ್ಟಣದಲ್ಲಿ ನಿವೇಶನ ಮಂಜೂರು ಮಾಡಿಸುವುದಾಗಿ ಶಾಸಕ ಬಸವರಾಜ ಶಿವಣ್ಣವರ್ ಭರವಸೆ ನೀಡಿದರು.
ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಅತ್ಯಂತ ಕಡಿಮೆ ಜನಸಂಖ್ಯೆ ಹೊಂದಿರುವ ಅಲ್ಪ ಸಂಖ್ಯಾತರಾಗಿರುವ ಉಪ್ಪಾರ ಸಮಾಜಕ್ಕೆ ತನ್ನದೇ ಆದ ಹಿರಿಮೆ ಇದೆ, ದೇವಲೋಕದಿಂದ ಗಂಗೆಯನ್ನು ಭೂಮಿಗೆ ಹರಿಸಿದ ಭಗೀರಥ ವಂಶ ಎಂಬ ಹೆಗ್ಗಳಿಕೆ ಸದಾ ಇರಲಿದೆ ಎಂದರಲ್ಲದೇ ಸಂಘಟನೆ ಮೂಲಕ ಸಮಾಜ ಮೇಲೆತ್ತುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದರು.
ಶಂಕರ್ ಉಪ್ಪಾರ ಉಪನ್ಯಾಸ ನೀಡಿದರು, ಲಿಂಗರಾಜ ಹರ್ಲಾಪುರ, ಸ್ವಾಗತಿಸಿದರು, ಶ್ರೀನಿವಾಸ ಕರ್ನೂಲ ನಿರೂಪಿಸಿದರು. ಶಿವಬಸಪ್ಪ ಉಪ್ಪಾರ ವಂದಿಸಿದರು.ಕಾರ್ಯಕ್ರಮದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪಗೋಳ, ಮುರಿಗೆಪ್ಪ ಶೆಟ್ಟರ್, ಬಸವರಾಜ ಸುಂಕಾಪುರ, ಪುರಸಭೆ ಸದಸ್ಯ ಗಾಯಿತ್ರಿ ರಾಯ್ಕರ, ಚೆನ್ನಬಸಪ್ಪ ಹುಲ್ಲತ್ತಿ, ಎಂ.ಎಸ್. ಪಾಟೀಲ, ಚಂದ್ರು ಆಟದವರ, ಮಾಲತೇಶ ಉಪ್ಪಾರ, ಶಿವಮೂರ್ತಿ ಉಪ್ಪಾರ, ವೆಂಕಟೇಶ ಉಪ್ಪಾರ, ಕೃಷ್ಣಪ್ಪ ಉಪ್ಪಾರ ಹಾಗೂ ಬ್ಯಾಡಗಿ ಪಟ್ಟಣದ ಉಪ್ಪಾರ ಸಮಾಜದ ಮಹಿಳೆಯರು ಯುವಕರು ಹಾಗೂ ಬಂಧುಗಳು ಕಾಸಂಬಿ, ಗುಂಗುರಗೊಪ್ಪ ಗ್ರಾಮಗಳ ಮುಖಂಡರಿದ್ದರು.
ಎಲ್ಲ ಜಯಂತಿ ಕಾರ್ಯಕ್ರಮಗಳು ಕೇವಲ ಅವರವರ ಜಾತಿಗೆ ಮಾತ್ರ ಸೀಮಿತಾಗುತ್ತಿರುವುದು ನೋವಿನ ಸಂಗತಿ, ಎಲ್ಲ ಸಮಾಜದವರನ್ನು ಅಪ್ಪುವ, ಭಗೀರಥ ಜಯಂತಿಗೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಗೈರಾಗಿರುವುದೇ ಇದಕ್ಕೆ ಸಾಕ್ಷಿ ಎಂದು ನೋವು ತೋಡಿಕೊಂಡರು.