ಮಸೀದಿಗಳಲ್ಲಿ ಸೌಂಡ್ ಲಿಮಿಟ್ ಕಡಿಮೆ ಆಗಿಲ್ಲ

KannadaprabhaNewsNetwork |  
Published : Oct 26, 2025, 02:00 AM IST
ಶಿವಮೊಗ್ಗದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ  ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಮಾತನಾಡಿದರು. | Kannada Prabha

ಸಾರಾಂಶ

ಮಸೀದಿಗಳಲ್ಲಿ ಅಜಾನ್ ಕೂಗುವ ಬಗ್ಗೆ ಸುಪ್ರೀಂ ಕೊರ್ಟ್ ಸ್ಪಷ್ಟ ಸೂಚನೆ ನೀಡಿದೆ. ಆದರೂ ಕೂಡ ಮಸೀದಿಗಳಲ್ಲಿ ಸೌಂಡ್ ಲಿಮಿಟ್ ಕಡಿಮೆ ಆಗಿಲ್ಲ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಶುರುವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಎಚ್ಚರಿಕೆ ನೀಡಿದರು.

ಶಿವಮೊಗ್ಗ: ಮಸೀದಿಗಳಲ್ಲಿ ಅಜಾನ್ ಕೂಗುವ ಬಗ್ಗೆ ಸುಪ್ರೀಂ ಕೊರ್ಟ್ ಸ್ಪಷ್ಟ ಸೂಚನೆ ನೀಡಿದೆ. ಆದರೂ ಕೂಡ ಮಸೀದಿಗಳಲ್ಲಿ ಸೌಂಡ್ ಲಿಮಿಟ್ ಕಡಿಮೆ ಆಗಿಲ್ಲ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಶುರುವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಎಚ್ಚರಿಕೆ ನೀಡಿದರು. ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ರಾಜ್ಯದ ಕಾಂಗ್ರೆಸ್ ಸರ್ಕಾರವು ಹಿಂದೂಗಳಿಗೆ ಒಂದು ನೀತಿ, ಮುಸಲ್ಮಾ ನರಿಗೇ ಒಂದುನೀತಿ ಅನುಸರಿಸುತ್ತಿದೆ. ಆರ್‌ಎಸ್‌ಎಸ್ ಸೇರಿ ಹಿಂದೂ ಸಂಘಟನೆಗಳ ಮೇಲೆ ನಿರ್ಬಂಧ ಹೇರುವುದಕ್ಕಾಗಿಯೇ ಪಥಸಂಚಲನಗಳಿಗೆ, ಪಾದಯಾತ್ರೆಗಳಿಗೆ ಅನುಮತಿ ಕಡ್ಡಾಯ ಮಾಡಿದೆ. ಆದರೆ ಸರ್ಕಾರ ನಿರ್ಬಂಧ ಹಾಕಬೇಕಿರುವುದು ನಮಗಲ್ಲ, ಅಜಾನ್ ಸೌಂಡ್ ಲಿಮಿಟ್‌ಗೆ ನಿರ್ಬಂಧ ಹಾಕಲಿ, ಕೋರ್ಟ್ ಕೊಟ್ಟ ಸೂಚನೆಗಳನ್ನು ಅನುಷ್ಠಾನಕ್ಕೆ ತರಲು ಶ್ರಮಿಸಲಿ ಎಂದು ಕಿಡಿಕಾರಿದರು.

ಮಸೀದಿಗಳಲ್ಲಿ ದಿನಕ್ಕೆ ಐದಾರು ಬಾರಿ ಅಜಾನ್ ಹಾಕಲಾಗುತ್ತದೆ. ಇದು ಮಸೀದಿ ಸುತ್ತ-ಮುತ್ತಲ ಜನರಿಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಓದುವ ಮಕ್ಕಳಂತೂ ತೀವ್ರ. ತೊಂದರೆ ಅನುಭವಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈಬಗ್ಗೆ ಮಾತನಾಡಲು ಶುರು ಮಾಡುತ್ತೇವೆ ಎಂದರು.

ಕಾಂಗ್ರೆಸ್‌ ಸರ್ಕಾರ ಹಳ್ಳ ಹಿಡಿದಿದೆ. ಎಲ್ಲೂ ಅಭಿವೃದ್ಧಿ ಕೆಲಸಗಳೇ ಇಲ್ಲ. ಜನರ ರೊಚ್ಚಿಗೆದಿದ್ದಾರೆ. ಜನರ ಗಮನ ದಿಕ್ಕು ತಪ್ಪಿಸಲು ಇವರು ನಾಟಕ ಆಡುತ್ತಿದ್ದಾರೆ. ಪ್ರಿಯಾಂಕ್‌ ಖರ್ಗೆ, ಸಂತೋಷ್ ಲಾಡ್, ಮಧು ಬಂಗಾರಪ್ಪ ದಿನಕ್ಕೊಂದು ಹೇಳಿಕೆ ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಸಿಎಂ ಆಗೋದಿಲ್ಲ. ಅವರನ್ನು ಸಿಎಂ ಸ್ಥಾನದಿಂದ ವಂಚಿಸುವುದಕ್ಕಾಗಿಯೇ ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ. ಈ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಶಾಸಕರಿಗೆ ಕೊಡಬೇಕಾದ ಅನುದಾನಗಳು ಒಂದು ನಯಾಪೈಸೆ ಬಂದಿಲ್ಲ. 25 ಕೋಟಿ ರು. ನೀಡುವುದಾಗಿ ಘೋಷಣೆ ಮಾತ್ರ ಮಾಡಿದ್ದಾರೆ. ಈ ವರ್ಷದ ಅನುದಾನ 2 ಕೋಟಿ ರು. ಕೂಡ ಬಂದಿಲ್ಲ. ನನ್ನ ಕ್ಷೇತ್ರದಲ್ಲಿ ಅಭಿವೃದ್ಧಿಗೆ ಅನುದಾನವಿಲ್ಲದೆ ಹಿನ್ನಡೆಯಾಗಿದೆ. ಒಂದು ಪಂಚಾಯ್ತಿಗೆ 40 ಸಾವಿರ ರು.ಗಳು ಮಾತ್ರ ಬರುತ್ತದೆ. ಅದನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ ಎಂದು ದೂರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಗದೀಶ್, ಪ್ರಮುಖರಾದ ಮಾಲತೇಶ್, ಬಿಜೆಪಿ ನಗರ ಅಧ್ಯಕ್ಷ ಮೋಹನ್ ರೆಡ್ಡಿ, ಪದ್ಮಿನಿರಾವ್, ಗಾಯತ್ರಿ ಮಲ್ಲಪ್ಪ, ಕುಪೇಂದ್ರ, ಕೆ.ವಿ.ಅಣ್ಣಪ್ಪ ಮತ್ತಿತರರು ಇದ್ದರು.

PREV

Recommended Stories

ಮೋಂಥಾ ಚಂಡಮಾರುತ ಅಬ್ಬರ : ಹವಾಮಾನ ಇಲಾಖೆ ಕಟ್ಟೆಚ್ಚರ
ಕೆಆರ್‌ಎಸ್‌ ವರ್ಷದಲ್ಲಿ 3ನೇ ಬಾರಿ ಭರ್ತಿ-ಬೆಂಗಳೂರಿಗಿಲ್ಲ ಜಲ ಸಂಕಷ್ಟ: ಡಿಸಿಎಂ