ನೈಋತ್ಯ ರೈಲ್ವೆಗೆ ₹ 7000 ಕೋಟಿ ಆದಾಯ

KannadaprabhaNewsNetwork |  
Published : Jan 28, 2026, 03:15 AM IST
ಹುಬ್ಬಳ್ಳಿಯ ಕ್ಲಬ್‌ ರಸ್ತೆಯಲ್ಲಿರುವ ರೈಲ್ವೆ ಸ್ಪೋರ್ಟ್ಸ್‌ ಮೈದಾನದಲ್ಲಿ ನೈಋತ್ಯ ರೈಲ್ವೆ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು. | Kannada Prabha

ಸಾರಾಂಶ

ಪ್ರಸಕ್ತ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು ₹6,939 ಕೋಟಿ ಒಟ್ಟು ಆದಾಯ ಗಳಿಸಿದೆ. ಪ್ರಯಾಣಿಕರ ವಿಭಾಗದಲ್ಲಿ ಸಾರ್ವಕಾಲಿಕ ಗರಿಷ್ಠ ಎನಿಸಿದ ₹2,543 ಕೋಟಿ, ಸರಕು ಸಾಗಾಣಿಕೆಯಲ್ಲಿ ಡಿಸೆಂಬರ್ ಅವಧಿವರೆಗಿನ ದಾಖಲೆಯ ₹3,976 ಕೋಟಿ ಆದಾಯ ಹೊಂದಿದೆ.

ಹುಬ್ಬಳ್ಳಿ:

ನಗರದ ಕ್ಲಬ್‌ ರಸ್ತೆಯಲ್ಲಿರುವ ರೈಲ್ವೆ ಸ್ಪೋರ್ಟ್ಸ್‌ ಮೈದಾನದಲ್ಲಿ ಸೋಮವಾರ ನೈಋತ್ಯ ರೈಲ್ವೆ ವತಿಯಿಂದ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು. ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಮುಕುಲ್ ಸರನ್ ಮಾಥುರ್ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿದರು.

ಈ ವೇಳೆ ಮಾತನಾಡಿದ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು ₹6,939 ಕೋಟಿ ಒಟ್ಟು ಆದಾಯ ಗಳಿಸಿದೆ. ಪ್ರಯಾಣಿಕರ ವಿಭಾಗದಲ್ಲಿ ಸಾರ್ವಕಾಲಿಕ ಗರಿಷ್ಠ ಎನಿಸಿದ ₹2,543 ಕೋಟಿ, ಸರಕು ಸಾಗಾಣಿಕೆಯಲ್ಲಿ ಡಿಸೆಂಬರ್ ಅವಧಿವರೆಗಿನ ದಾಖಲೆಯ ₹3,976 ಕೋಟಿ ಆದಾಯ ಹೊಂದಿದೆ ಎಂದರು.

ಬೇಡಿಕೆಗೆ ತಕ್ಕಂತೆ 481 ವಿಶೇಷ ರೈಲು ಹಾಗೂ 614 ಹೆಚ್ಚುವರಿ ಬೋಗಿಗಳ ವ್ಯವಸ್ಥೆ ಮಾಡಲಾಗಿದೆ. ಸುರಕ್ಷತೆಗಾಗಿ 3,692 ಕಿಮೀ ವ್ಯಾಪ್ತಿಯಲ್ಲಿ ''''''''ಕವಚ್'''''''' ಅಳವಡಿಸಲು ಅನುಮೋದನೆ ನೀಡಲಾಗಿದೆ. 2 ವಂದೇ ಭಾರತ್ ಸೇರಿದಂತೆ 10 ಹೊಸ ರೈಲುಗಳ ಸೇವೆ ಆರಂಭಿಸಲಾಗಿದೆ. ''''''''ಆಪರೇಷನ್ ನನ್ಹೆ ಫರಿಸ್ತೆ'''''''' ಅಡಿಯಲ್ಲಿ 487 ಮಕ್ಕಳು ಮತ್ತು 54 ದುರ್ಬಲರನ್ನು ರಕ್ಷಿಸಿದೆ. ''''''''ಮೇರಿ ಸಹೇಲಿ'''''''' ಯೋಜನೆಯಡಿ 3.3 ಲಕ್ಷ ಮಹಿಳಾ ಪ್ರಯಾಣಿಕರಿಗೆ ನೆರವು ನೀಡಲಾಗಿದೆ. ನಿಗಾ ವ್ಯವಸ್ಥೆಗಾಗಿ 164 ನಿಲ್ದಾಣಗಳಲ್ಲಿ 2,179 ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ನಂತರ ನಡೆದ ಶ್ವಾನದಳದ ಸಾಹಸ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರೇಕ್ಷಕರ ಮನ ಗೆದ್ದವು. ಹೆಚ್ಚುವರಿ ಪ್ರಧಾನ ವ್ಯವಸ್ಥಾಪಕ ಪಿ. ಅನಂತ್, ಹುಬ್ಬಳ್ಳಿ ಡಿಆರ್‌ಎಂ ಬೇಲಾ ಮೀನಾ, ಡಾ. ಸಂಜೀಲಾ ಮಾಥುರ್ ಸೇರಿದಂತೆ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪಾಲ್ಗೊಂಡಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮುಖ್ಯಮಂತ್ರಿ ಸಿದ್ದರಾಮಯ್ಯ ನನ್ನ ಪಾಲಿನ ಶ್ರೀರಾಮ : ಶಾಸಕ ಪ್ರದೀಪ್‌ ಈಶ್ವರ್‌
ಜಿ ರಾಮ್‌ ಜಿ ವಿರುದ್ಧ ಸಿಡಿದೆದ್ದ ಕಾಂಗ್ರೆಸ್‌ ಪಡೆ - ದುಡಿವ ಕೈಗಳ ಅನ್ನ ಕಸಿವ ಕಾಯ್ದೆ