ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ರೈಲ್ವೆ ಯೋಜನೆಗಳಿಗೆ 3372 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ಹಸ್ತಾಂತರ ಮಾಡಬೇಕಿದ್ದು ಬೆಳಗಾವಿ-ಧಾರವಾಡ ಹೊಸ ಮಾರ್ಗದ ಭೂಮಿ ಹಸ್ತಾಂತರ ಇನ್ನೂ ಆಗಿಲ್ಲ ಎಂದು ಇದೇ ವೇಳೆ ತಿಳಿಸಿದರು.
ಕಳೆದ ವರ್ಷಕ್ಕಿಂತ (50.36 ಮಿಲಿಯನ್ ಟನ್) ಹೆಚ್ಚುವರಿ 6.81 ಮಿಲಿಯನ್ ಟನ್ ಸರಕು ಸಾಗಾಣಿಕೆ ಸಾಗಿಸಿದೆ. 20.97 ಮಿಲಿಯನ್ ಟನ್ ಸಾಗಣೆ ಮಾಡುವ ಮೂಲಕ ಉತ್ತರ ಕೇಂದ್ರ ವಲಯವು ಎರಡನೇ ಸ್ಥಾನ ಹೊಂದಿದೆ. ಒಟ್ಟಾರೆ ಸಾಗಣೆ ವಿಭಾಗದಲ್ಲಿ ನೈಋತ್ಯ ರೈಲ್ವೆಯು ₹ 9487.88 ಕೋಟಿ ಆದಾಯ ಗಳಿಸಿದೆ ಎಂದರು.ಕಲ್ಲಿದ್ದಲು, ಕಬ್ಬಿಣ ಅದಿರು, ಸ್ಟೀಲ್, ಖನಿಜ ತೈಲ, ಸಿಮೆಂಟ್ ಹಾಗೂ ರಾಸಾಯನಿಕ ಗೊಬ್ಬರ, ಕಂಟೇನರ್ಸ್, ಆಹಾರ ವಸ್ತುಗಳು ಸೇರಿದಂತೆ ಇತರ ಸರಕು ಸಾಗಿಸಲಾಗಿದೆ. ಕಬ್ಬಿಣ ಅದಿರು, ಕಲ್ಲಿದ್ದಲು ಹಾಗೂ ಸ್ಟೀಲ್ ಸಾಗಾಣಿಕೆಯಿಂದ ಹೆಚ್ಚು ಆದಾಯ ಹರಿದು ಬಂದಿದೆ ಎಂದು ತಿಳಿಸಿರುವ ಅವರು, ಸರಕು ಸಾಮರ್ಥ್ಯ ಹೆಚ್ಚಿಸಲು 409 ಗೂಡ್ಸ್ ಟ್ರ್ಯಾಕ್ಸ್ ಮೇಲ್ದರ್ಜೆಗೇರಿಸಲಾಗಿದೆ. ತೋರಣಗಲ್ಲು-ರಣಜಿತಪುರ ಮತ್ತು ಬಳ್ಳಾರಿ-ಚಿಕ್ಕಜಾಜೂರ ಮಾರ್ಗದಲ್ಲಿ ಡಬ್ಲಿಂಗ್‌ಗೆ ಅನುಮತಿ ದೊರೆತಿದೆ ಎಂದು ತಿಳಿಸಿದರು.
ಭೂಮಿ ಹಸ್ತಾಂತರವಾಗಿಲ್ಲ:
ಸುದ್ದಿಗೋಷ್ಠಿಯಲ್ಲಿ ಪ್ರಧಾನ ವಾಣಿಜ್ಯ ವ್ಯವಸ್ಥಾಪಕ ಎಸ್.ಪಿ. ಶಾಸೀ ಸೇರಿದಂತೆ ಇತರ ಹಿರಿಯ ಅಧಿಕಾರಿಗಳು ಇದ್ದರು. ಡೆಮು ರೇಕ್‌ಗೆ ಬೇಡಿಕೆಗ್ರಾಮೀಣ ಜನರಿಗೆ ರೈಲು ಪ್ರಯಾಣ ಸೇವೆ ಕಲ್ಪಿಸಲು 27 ಡೆಮು ರೈಲುಗಳಿಗೆ ಬೋಗಿ ಕಳಿಸುವಂತೆ ರೈಲ್ವೆ ಮಂಡಳಿಗೆ ಬೇಡಿಕೆ ಸಲ್ಲಿಸಿದ್ದೇವೆ. ವಾರ್ಷಿಕ ಕೇವಲ 3-4 ಮಾತ್ರ ಕೋಚ್ ಬರುತ್ತಿವೆ. ಹಾಗಾಗಿ ಹುಬ್ಬಳ್ಳಿ ವಿಭಾಗದಲ್ಲಿ ಲೋಕಲ್ ಟ್ರೇನ್ ಬೇಡಿಕೆ ಈಡೇರಿಸಲಾಗುತ್ತಿಲ್ಲ. ಮಂಡಳಿಯು ರೇಕ್‌ಗಳನ್ನು ಪೂರೈಸುತ್ತಿದ್ದಂತೆ ಸೇವೆ ಆರಂಭಿಸಲಾಗುವುದು ಎಂದು ಪಿ.ಅನಂತ ತಿಳಿಸಿದರು.