- ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಕರೆ । ಡಾ.ಚನ್ನಬಸವ ಪಟ್ಟದ್ದೇವರ ಸ್ಮರಣೋತ್ಸವ । ಮಾನವೀಯತೆಯ ಮಾರ್ಗದಲ್ಲಿ ಹಿರೇಮಠ ಸಂಸ್ಥಾನವಿದೆ
ಕನ್ನಡಪ್ರಭ ವಾರ್ತೆ ಭಾಲ್ಕಿ
ಮಕ್ಕಳಲ್ಲಿ ಧರ್ಮ, ಸಂಸ್ಕೃತಿಯನ್ನು ಬಿತ್ತಿ, ಆಸ್ತಿಕರನ್ನಾಗಿಸುವ ಪ್ರಯತ್ನ ಮಾಡಿ ಧರ್ಮದ ಬಗ್ಗೆ ಶ್ರದ್ಧೆ ಹೊಂದಿ, ದೇವಿ ದೇವತೆಗಳು, ಮಹಾಪುರುಷರ ಬಗ್ಗೆ ಭಕ್ತಿ ಭಾವ ಹೊಂದುವ ಮೂಲಕ ಜೀವನವನ್ನು ಸನ್ಮಾರ್ಗದತ್ತ ಕೊಂಡೊಯ್ಯುವ ಪ್ರಯತ್ನ ಮಾಡಿ ಎಂದು ಕರ್ನಾಟಕದ ರಾಜ್ಯಪಾಲರಾದ ಥಾವರಚಂದ್ ಗೆಹ್ಲೋಟ್ ತಿಳಿಸಿದರು.ಅವರು ಮಂಗಳವಾರ ಚನ್ನಬಸವಾಶ್ರಮದ ಪರಿಸರದಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ವಚನ ಜಾತ್ರೆ- 2025 ಲಿಂ. ಡಾ. ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಈ ಹಿಂದಿನಿಂದಲೂ ಭಾರತೀಯ ಸಂಸ್ಕೃತಿ ಮತ್ತು ಧರ್ಮವನ್ನು ಬಲಹೀನಗೊಳಿಸುವಂಥ ಪ್ರಯತ್ನಗಳು ನಡೆದಿವೆಯಾದರೆ ತನ್ನ ಸಂಸ್ಕೃತಿ, ಸಹಿಷ್ಣುತೆ ಹಾಗೂ ಆಳವಾದ ವೈಜ್ಞಾನಿಕ ಮನೋಭಾವದಿಂದಾಗಿ ಇಂದಿಗೂ ಪ್ರಸ್ತುತ ಹಾಗೂ ಜೀವಂತವಾಗಿದೆ. ಇದಕ್ಕೆ ಪ್ರಯಾಗರಾಜ್ ಸಾಕ್ಷಿ ಎಂದು ಹೇಳಿದರು.
ಡಾ. ಚನ್ನಬಸವ ಪಟ್ಟದ್ದೇವರು ಸಮಾಜೋಧಾರ್ಮಿಕ ಕಾರ್ಯಕ್ರಮಗಳ ಜೊತೆಗೆ ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತ್ಯುತ್ತಮ ಮಾರ್ಗ ಎಂದರಿತು ಸ್ಥಾಪಿಸಿರುವ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ್ದರು. ಮನುಷ್ಯನ ಜೀವನವನ್ನು ಸಫಲವಾಗಿಸುವಲ್ಲಿ ಶಿಕ್ಷಣ ಮತ್ವದ ಪಾತ್ರ ಅತ್ಯುತ್ತಮ ಮಾರ್ಗವಾಗಿದೆ. ಶಿಕ್ಷಣ ಪಡೆಯುವದು ಪ್ರತಿಯೊಬ್ಬನ ಹಕ್ಕು ಮತ್ತು ಅಧಿಕಾರವಾಗಿದೆ. ಹಿರೇಮಠ ಸಂಸ್ಥಾನ ಈ ನಿಟ್ಟಿನಲ್ಲಿ ಇನ್ನಷ್ಟು ಶ್ರಮವಹಿಸಲಿ ಎಂದು ರಾಜ್ಯಪಾಲ ಗೆಹ್ಲೋಟ್ ಕರೆ ನೀಡಿದರು.
ಈಶ್ವರ ಖಂಡ್ರೆ ಹೊಗಳಿದ ರಾಜ್ಯಪಾಲ ಥಾವರಚಂದ್
ಪರಿಸರ ಅಸಮತೋಲನ ನಿಯಂತ್ರಣಕ್ಕಾಗಿ ಅರಣ್ಯೀಕರಣ ಹೆಚ್ಚಳಕ್ಕಾಗಿ ಪ್ರತಿಯೊಬ್ಬರೂ ಶ್ರಮಿಸಬೇಕು. ನೀರಿದ್ದರೆ ಮಾತ್ರ ಭವಿಷ್ಯವಿದೆ ಎಂಬುವದನ್ನು ಅರಣ್ಯ ಸಚಿವ ಖಂಡ್ರೆ ಗಂಭೀರವಾಗಿಟ್ಟುಕೊಂಡು ಶ್ರಮಿಸುತ್ತಿರುವುದು ವಿಶೇಷ ಎಂದು ಅವರು ತಿಳಿಸಿದರು.
ಕನ್ನಡದಲ್ಲಿ ಮಾತನಾಡಿದ ರಾಜ್ಯಪಾಲ ಥಾವರಚಂದ್
ಫೈಲ್ 22ಬಿಡಿ7