ಜಿಲ್ಲಾ ಪೊಲೀಸ್ ಓಟಕ್ಕೆ ಎಸ್‌ಪಿ ಯಶೋದಾ ವಂಟಗೋಡಿ ಚಾಲನೆ

KannadaprabhaNewsNetwork |  
Published : Mar 02, 2026, 02:30 AM IST
ಹಾವೇರಿ ನಗರದ ಎಸ್‌ಪಿ ಕಚೇರಿ ಆವರಣದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಓಟಕ್ಕೆ ಎಸ್‌ಪಿ ಯಶೋಧಾ ವಂಟಗೋಡಿ ಚಾಲನೆ ನೀಡಿದರು. | Kannada Prabha

ಸಾರಾಂಶ

ಹಾವೇರಿ ನಗರದ ಎಸ್‌ಪಿ ಕಚೇರಿ ಆವರಣದಲ್ಲಿ ಹಾವೇರಿ ಜಿಲ್ಲಾ ಪೊಲೀಸ್ ಓಟಕ್ಕೆ ಎಸ್‌ಪಿ ಯಶೋಧಾ ವಂಟಗೋಡಿ ಚಾಲನೆ ನೀಡಿದರು.

ಹಾವೇರಿ: ನಮ್ಮ ಪೊಲೀಸ್ ನಮ್ಮ ಹೆಮ್ಮೆ ಘೋಷ ವಾಕ್ಯದೊಂದಿಗೆ ಆಯೋಜಿಸಲಾಗಿದ್ದ ಹಾವೇರಿ ಜಿಲ್ಲಾ ಪೊಲೀಸ್ ಓಟಕ್ಕೆ ಭಾನುವಾರ ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಚಾಲನೆ ನೀಡಿದರು.ಪುರುಷರಿಗೆ 5ಕೆ ಮತ್ತು 10ಕೆ, ಮಹಿಳೆಯರಿಗೆ 5ಕೆ ಓಟ ಆಯೋಜಿಸಲಾಗಿತ್ತು. ಹಾವೇರಿ ನಗರ ಸೇರಿದಂತೆ ವಿವಿಧ ತಾಲೂಕುಗಳಿಂದ ಆಗಮಿಸಿದ ಮಕ್ಕಳಾದಿಯಾಗಿ ಎಲ್ಲ ವಯೋಮಾನದ ಪುರುಷ ಹಾಗೂ ಮಹಿಳೆಯರು ಅತ್ಯಂತ ಉತ್ಸಾಹದಿಂದ ಓಟದಲ್ಲಿ ಭಾಗವಹಿಸಿದ್ದರು.ಪ್ರಮುಖ ಬೀದಿಯಲ್ಲಿ ಓಟ:ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಿಂದ ಆರಂಭವಾದ ಓಟ ನಗರದ ಹೊಸಮನಿ ಸಿದ್ದಪ್ಪ ವೃತ್ತ, ಹುಕ್ಕೇರಿಮಠ ರಸ್ತೆ, ರೈಲು ನಿಲ್ದಾಣ ಮಾರ್ಗ, ಅಂಬೇಡ್ಕರ್ ವೃತ್ತ, ಸುಭಾಸ್ ಸರ್ಕಲ್, ಜೆ.ಎಚ್.ಪಟೇಲ್ ಹಾಗೂ ಕಿತ್ತೂರು ಚನ್ನಮ್ಮ ವೃತ್ತ ಮಾರ್ಗವಾಗಿ ಸಂಚರಿಸಿ ಜಿಲ್ಲಾ ಪೊಲೀಸ್ ಕಚೇರಿ ಆವರಣಕ್ಕೆ ಆಗಮಿಸಿತು.ಬಹುಮಾನ ವಿತರಣೆ: ಪುರುಷರ 10ಕೆ ಓಟದಲ್ಲಿ ಮಂಜುನಾಥ ಬೇಲೂರಪ್ಪನವರ(ಪ್ರಥಮ), ಸಂಜೀವಕುಮಾರ ಬ್ಯಾಟಪ್ಪನವ (ದ್ವಿತೀಯ), ರಮೇಶ ಬೆಳ್ಳಟ್ಟಿ (ತೃತೀಯ), ಪುರುಷರ 5ಕೆ ಓಟದಲ್ಲಿ ಪ್ರಭು ಲಮಾಣಿ(ಪ್ರಥಮ), ಕಿರಣ ಹೊನ್ನಳ್ಳಿ(ದ್ವಿತೀಯ), ಸುದೀಪ ಹರಿಜನ(ತೃತೀಯ) ಹಾಗೂ ಮಹಿಳೆಯರ 5ಕೆ ಓಟದಲ್ಲಿ ಶಿಲ್ಪಾ ಹೊಸಮನಿ(ಪ್ರಥಮ), ಸುಪ್ರಿತಾ ಸಿದ್ದಿ (ದ್ವಿತೀಯ), ಸಾಕ್ಷಿ (ತೃತೀಯ) ಸ್ಥಾನ ಪಡೆದಿದ್ದು, ಇವರಿಗೆ ಪ್ರಶಸ್ತಿ ಪತ್ರ, ಪದಕ ಹಾಗೂ ನಗದು ಬಹುಮಾನ ನೀಡಲಾಯಿತು. ಅದೇ ರೀತಿ 4 ರಿಂದ 10ರ ಸ್ಥಾನ ಪಡೆದವರಿಗೆ ಪ್ರಶಸ್ತಿ ಪತ್ರ ನೀಡಲಾಯಿತು.ವಿಶೇಷ ಬಹುಮಾನ: ಓಟದಲ್ಲಿ ಭಾಗವಹಿಸಿದ ಕ್ರೀಡಾ ವಸತಿ ನಿಲಯದ ಬಾಲಕಿಗೆ ಹಾಗೂ ಮ್ಯಾರಥಾನ್‌ಗಳಲ್ಲಿ ಭಾಗವಹಿಸಿ ಪದಕ ಪಡೆದ ಬಾಲಕ ಮಹ್ಮದ ಮತ್ತಿಹಳ್ಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ಅವರು ವಯಕ್ತಿಕವಾಗಿ ತಲಾ ಐದು ಸಾವಿರ ರು. ನಗದು ಬಹುಮಾನ ನೀಡಿ ಗೌರವಿಸಿದರು.ಸೆಲ್ಫಿ ಕಾರ್ನರ್: ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ನಿರ್ಮಿಸಲಾದ ನಮ್ಮ ಪೊಲೀಸ್ ನಮ್ಮ ಹೆಮ್ಮೆ ಸೆಲ್ಫಿ ಕಾರ್ನರನಲ್ಲಿ ಅಧಿಕಾರಿಗಳು, ಸಿಬ್ಬಂದಿಗಳು, ವಿದ್ಯಾರ್ಥಿಗಳು ಸೇರಿದಂತೆ ಎಲ್ಲರೂ ಸೆಲ್ಫಿ ಕಾರ್ನರನಲ್ಲಿ ಫೋಟೋ ತೆಗೆಸಿಕೊಳ್ಳುವು ದು ಕಂಡುಬಂದಿತು. ಉಪಾಹಾರ ವ್ಯವಸ್ಥೆ : ಓಟದಲ್ಲಿ ಭಾಗವಹಿಸಿದ ಎಲ್ಲರಿಗೂ ಪೊಲೀಸ್ ಇಲಾಖೆ ಯಿಂದ ಉಪಹಾರ, ಬಾಳೆಹಣ್ಣು, ಕಿತ್ತಳೆ ಹಣ್ಣು ಹಾಗೂ ಟೀ ಶರ್ಟ್ ವಿತರಣೆ ಮಾಡಲಾಯಿತು.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರುಚಿ ಬಿಂದಲ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಲ್.ವೈ.ಶಿರಕೋಳ, ಡಿವೈಎಸ್‌ಪಿ ಗಿರಿಮಲ್ಲಪ್ಪ ತಳಕಟ್ಟಿ, ಜಿಪಂ ಉಪಕಾರ್ಯದರ್ಶಿ ಡಾ. ಪುನೀತ್, ಪೊಲೀಸ್ ಇಲಾಖೆ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ವಿದ್ಯಾರ್ಥಿಗಳು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಲ್ಡೋಟ ಬೇಡವೆಂದು ಸಿಎಂ ಬಳಿಗೆ ಸರ್ವ ಪಕ್ಷಗಳ ನಿಯೋಗ
ಕೊಟ್ಟೂರು ಕೆರೆ ತುಂಬಿಸುವ ಯೋಜನೆಗೆ ಸಿಗುತ್ತಾ ಹಸಿರು ನಿಶಾನೆ?