ಮಂಗಳೂರು: 10,11ರಂದು ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ

KannadaprabhaNewsNetwork |  
Published : Feb 05, 2024, 01:54 AM IST
ಅಂ.ರಾ.ಗಾಳಿಪಟ ಉತ್ಸವದ ಲಾಂಛನ ಅನಾವರಣಗೊಳಿಸಿದ ಸ್ಪೀಕರ್‌ ಖಾದರ್‌  | Kannada Prabha

ಸಾರಾಂಶ

ಫೆ.10ರಂದು ಮಧ್ಯಾಹ್ನ 2.30ರಿಂದ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮರುದಿನ ಅಪರಾಹ್ನ ಗಾಳಿಪಟ ಉತ್ಸವ ಮತ್ತೆ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಇರುತ್ತದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಟೀಂ ಮಂಗಳೂರು ತಂಡದ ನೇತೃತ್ವದಲ್ಲಿ ಒಎನ್‌ಜಿಸಿ-ಎಂಆರ್‌ಪಿಎಲ್‌ ಪ್ರಾಯೋಜಕತ್ವದಲ್ಲಿ ಅಂತಾರಾಷ್ಟ್ರೀಯ ಗಾಳಿ ಉತ್ಸವ-2024 ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಫೆ.10 ಮತ್ತು 11 ರಂದು ನಡೆಯಲಿದೆ. ಇದರ ಲಾಂಛನವನ್ನು ಕರ್ನಾಟಕ ವಿಧಾನಸಭಾ ಸ್ಪೀಕರ್‌ ಯು.ಟಿ.ಖಾದರ್‌ ಅವರು ಭಾನುವಾರ ಮಂಗಳೂರಿನಲ್ಲಿ ಅನಾವರಣಗೊಳಿಸಿದರು. ಸಣ್ಣ ಮಕ್ಕಳಿಂದ ತೊಡಗಿ ದೊಡ್ಡವರ ವರೆಗೆ ಗಾಳಿಪಟ ಹಾರಿಸುವುದು ಎಂದರೆ ಸಂಭ್ರಮ. ಗಾಳಿಪಟ ಹಾರಿಸುವ ಆಸಕ್ತಿ ಉಳಿಸುವ ಟೀಂ ಮಂಗಳೂರಿನಂತಹ ತಂಡಗಳು ಕಾರ್ಯ ಶ್ಲಾಘನೀಯ ಎಂದರು. 8 ದೇಶಗಳ ತಂಡ: ಗಾಳಿಪಟ ಉತ್ಸವದ ಲಾಂಛನವನ್ನು ವಿಶೇಷವಾಗಿ ರೂಪಿಸಲಾಗಿದೆ. ಕಳೆದ 25 ವರ್ಷಗಳಲ್ಲಿ ಮಂಗಳೂರಿನಲ್ಲಿ ನಡೆಯುತ್ತಿರುವ ಆರನೇ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಇದಾಗಿದೆ. ಗಾಳಿಪಟ ಉತ್ಸವಕ್ಕೆ ಮಂಗಳೂರು ಬೀಚ್‌ ಹೇಳಿಮಾಡಿಸಿದಂತಿದ್ದು, ಸಂಜೆ ವೇಳೆಗೆ ಬೀಸುವ ಗಾಳಿ ಬಾನಂಗಳದಲ್ಲಿ ಗಾಳಿಪಟದ ಕಳೆ ಹೆಚ್ಚಿಸಲಿದೆ ಎಂದು ಟೀಂ ಮಂಗಳೂರು ತಂಡದ ಸಂಯೋಜಕ ಸರ್ವೇಶ್‌ ರಾವ್‌ ತಿಳಿಸಿದರು. ಫೆ.10ರಂದು ಮಧ್ಯಾಹ್ನ 2.30ರಿಂದ ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಲಾಗುವುದು. ಸಂಜೆ 5 ಗಂಟೆಗೆ ಸಭಾ ಕಾರ್ಯಕ್ರಮ ನಡೆಯಲಿದೆ. ಮರುದಿನ ಅಪರಾಹ್ನ ಗಾಳಿಪಟ ಉತ್ಸವ ಮತ್ತೆ ಆರಂಭವಾಗಲಿದ್ದು, ಸಂಜೆ 7 ಗಂಟೆಗೆ ಸಭಾ ಕಾರ್ಯಕ್ರಮ ಇರುತ್ತದೆ ಎಂದರು. 8 ವಿವಿಧ ರಾಷ್ಟ್ರಗಳಿಂದ 13 ಮಂದಿ ಹಾಗೂ ದೇಶದ 4 ರಾಜ್ಯಗಳಿಂದ 35 ಮಂದಿ ಗಾಳಿಪಟ ಉತ್ಸವದಲ್ಲಿ ತಮ್ಮ ಗಾಳಿಪಟವನ್ನು ಪ್ರದರ್ಶಿಸಲಿದ್ದಾರೆ. ಈ ಬಾರಿ ವಾಹನ ಪಾರ್ಕಿಂಗ್‌ಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು. ಎಂಆರ್‌ಪಿಎಲ್‌ ಎಚ್‌ಆರ್‌ ಜಿಎಂ ಕೃಷ್ಣ ಹೆಗಡೆ, ಟೀಂ ಮಂಗಳೂರು ತಂಡದ ಸದಸ್ಯರಾದ ನಿತಿನ್‌ ಜೆ.ಶೆಟ್ಟಿ, ಪ್ರಾಣ್‌ ಹೆಗ್ಡೆ, ಗಿರಿಧರ ಕಾಮತ್‌, ಸುಭಾಸ್‌ ಪೈ, ಗೌರವ್‌ ಹೆಗ್ಡೆ ಮತ್ತಿತರರಿದ್ದರು.

PREV

Recommended Stories

ತುಮಕೂರಲ್ಲಿ 20 ನವಿಲುಗಳ ಸಾವು
ರಾಜ್ಯದಲ್ಲಿ 4 ಹಾಲಿನ ಮಾದರಿ ಗುಣಮಟ್ಟ ಕಡಿಮೆ