ಕನ್ನಡಪ್ರಭ ವಾರ್ತೆ ಮಂಡ್ಯ
ಇಂದಿನ ತಂತ್ರಜ್ಞಾನ ಯುಗದಲ್ಲಿ ಕೃತಕ ಬುದ್ಧಿಮತ್ತೆ ಪ್ರತಿಯೊಂದು ಕ್ಷೇತ್ರದಲ್ಲೂ ವೇಗವಾಗಿ ಬೆಳವಣಿಗೆ ಆಧಿಸುತ್ತಿದೆ. ಈ ಬದಲಾವಣೆಯನ್ನು ಗಮನದಲ್ಲಿಟ್ಟುಕೊಂಡು ೨೦೨೬-೨೭ನೇ ಶೈಕ್ಷಣಿಕ ವರ್ಷದಿಂದ ಎಂಆರ್‌ಐಟಿ ತನ್ನ ವಿದ್ಯಾರ್ಥಿಗಳಿಗಾಗಿ ಶೈಕ್ಷಣಿಕ ಉಪಕ್ರಮ (ಸೆವೆನ್ ಸೆಮಿಸ್ಟರ್ ಬ್ರಾಂಚ್-ಸ್ಪೆಸಿಫಿಕ್ ಎಐ ವ್ಯಾಲ್ಯೂ ಏಡೆಡ್ ಲರ್ನಿಂಗ್ ಪಾತ್ ವೇ)ವನ್ನು ಪರಿಚಯಿಸುತ್ತಿರುವುದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮವು ವಿಟಿಯು ಪಠ್ಯಕ್ರಮಕ್ಕೆ ಹೆಚ್ಚುವರಿಯಾದ ಮೌಲ್ಯವರ್ಧಿತ ತರಬೇತಿಯಾಗಿದೆಯೇ ವಿನಃ ಇದು ವಿಟಿಯು ಪಠ್ಯಕ್ರಮವನ್ನು ಬದಲಾಯಿಸುವುದಿಲ್ಲ. ಪ್ರತಿ ಸೆಮಿಸ್ಟರ್‌ನಲ್ಲಿ ವಾರಕ್ಕೆ ೩ ಗಂಟೆಗಳ ವಿಶೇಷ ಎಐ ತರಬೇತಿ ನೀಡಲಾಗುತ್ತದೆ. ಏಳು ಸೆಮಿಸ್ಟರ್‌ಗಳಲ್ಲಿ ಒಟ್ಟು ೨೯೪ ಗಂಟೆಗಳ ತರಬೇತಿ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ. ಪ್ರತಿ ವಿಭಾಗದ ವಿದ್ಯಾರ್ಥಿಗಳಿಗೆ ಅವವರ ವಿಷಯಕ್ಕೆ ಸಂಬಂಧಿಸಿದಂತೆ ಎಐ ಕೌಶಲ್ಯಗಳನ್ನು ಕಲಿಸಲಾಗುವುದು ಎಂದರು.ವಿದ್ಯಾರ್ಥಿಗಳ ಉದ್ಯೋಗಾರ್ಹತೆಯನ್ನು ಹೆಚ್ಚಿಸುವುದು ಕಾರ್ಯಕ್ರಮದ ಮುಖ್ಯ ಉದ್ದೇಶ. ವಿದ್ಯಾರ್ಥಿಗಳು ಕೇವಲ ಎಐ ಉಪಕರಣಗಳನ್ನು ಬಳಸುವುದಲ್ಲ. ತಮ್ಮದೇ ಆದ ಪ್ರಾಜೆಕ್ಟ್‌ಗಳು, ಪೋರ್ಟ್‌ಪೋಲಿಯೋಗಳು ಮತ್ತು ಕೈಗಾರಿಕಾ ಅನುಭವದ ಮೂಲಕ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುವಂತೆ ತರಬೇತಿ ಪಡೆಯಲಿದ್ದಾರೆ ಎಂದರು.
ಈ ಜ್ಞಾನವನ್ನು ಕೇವಲ ಎಂಆರ್‌ಐಟಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮಾತ್ರ ನೀಡುವುದಲ್ಲದೆ, ಇತರೆ ಕಾಲೇಜಿನ ವಿದ್ಯಾರ್ಥಿಗಳಿಗೂ ನೀಡಲಾಗುವುದು. ಅದಕ್ಕೆ ಪ್ರತ್ಯೇಕ ಶುಲ್ಕ ನಿಗದಿಪಡಿಸಲಾಗುತ್ತದೆ ಎಂದರು.
ಗೋಷ್ಠಿಯಲ್ಲಿ ಡಾ.ಅಭಿನಂದನ್, ಡಾ.ರಾಮಲಿಂಗಯ್ಯ, ಡಾ.ಗೋಕುಲ್ ಇದ್ದರು.