ದೇವರಾಜು ಕಪ್ಪಸೋಗೆ
ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದ ಮತದಾನಕ್ಕೆ ಕ್ಷಣಗಣನೆ ಆರಂಭಗೊಳ್ಳುತ್ತಿದ್ದಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ವಿಶೇಷ ಮತಗಟ್ಟೆಗಳು ಮತದಾರರನ್ನು ಕೈ ಬೀಸಿ ಕರೆಯುತ್ತಿದೆ.
ಲಿಂಗ ಸಮಾನತೆ ಹಾಗೂ ಮತದಾನದಲ್ಲಿ ಮಹಿಳೆಯರ ಭಾಗವಹಿಸುವಿಕೆ ಉತ್ತೇಜಿಸಲು ''''''''''''''''ಸಖಿ ಸೌರಭ ಶೀರ್ಷಿಕೆಯಡಿ ಮತಗಟ್ಟೆಗಳನ್ನು ವಿಶೇಷವಾಗಿ ಅಲಂಕರಿಸಿ ಮಹಿಳೆಯರನ್ನು ಮತದಾನಕ್ಕೆ ಪ್ರೇರೆಪಿಸಲಾಗಿದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಒಟ್ಟು 16 ಸಖಿ ಸೌರಭ ಮತಗಟ್ಟೆಗಳನ್ನು ಸ್ಥಾಪನೆ ಮಾಡಲಾಗಿದೆ.ಕೊಳ್ಳೇಗಾಲ ತಾಲೂಕಿನ ಸತ್ತೇಗಾಲ ಗ್ರಾಮದಲ್ಲಿ ಸಾಂಸ್ಕೃತಿಕ ಮತಗಟ್ಟೆ ಸ್ಥಾಪನೆ ಮಾಡಲಾಗಿದ್ದು, ಮತಗಟ್ಟೆ ಮುಂಭಾಗ ಭರಚುಕ್ಕಿ ಜಲಪಾತದ ಪ್ರತಿಕೃತಿ ನಿರ್ಮಾಣ ಮಾಡಲಾಗಿದೆ.
ಸತ್ತೆಗಾಲ ಗ್ರಾಪಂ ವ್ಯಾಪ್ತಿಯಲ್ಲಿನ ಪ್ರೇಕ್ಷಣೀಯ ಸ್ಥಳವಾದ ಭರಚುಕ್ಕಿ ಜಲಪಾತದ ಸೊಬಗನ್ನು ಬಹಳ ವಿಶಿಷ್ಟವಾಗಿ ಮತಗಟ್ಟೆಯಲ್ಲಿ ಸೃಷ್ಟಿಸಲಾಗಿದೆ. ಸಾಂಸ್ಕೃತಿಕ ಮತಗಟ್ಟೆ ಕಲ್ಪನೆಯಲ್ಲಿ ಬಹು ವಿಶಿಷ್ಟವಾಗಿ ಸದರಿ ಬೂತ್ ಅನ್ನು ರಚಿಸಲಾಗಿದ್ದು, ಮತದಾರರನ್ನು ಆಕರ್ಷಿಸುತ್ತಿದೆ.
''''''''ಜಾನಪದ ಕಲೆಗಳ ತವರೂರು ಚಾಮರಾಜನಗರ '''''''' ಚಲುವ ಚಾಮರಾಜನಗರ ಹೆಸರಿಗೆ ಸರಿಸಾಟಿಯಾಗಿ ಜಿಲ್ಲೆಯ ಸಾಂಸ್ಕೃತಿಕ ಮಹತ್ವ ಸಾರುವ ಸಾಂಪ್ರದಾಯಿಕ ಮತಗಟ್ಟೆಗಳನ್ನು ತೆರೆಯಲಾಗಿದ್ದು, ಚಾಮರಾಜನಗರದ ರಾಮಸಮುದ್ರದ ಮತಗಟ್ಟೆಯಲ್ಲಿ ಹಿಂದಿನ ಕಾಲದಲ್ಲಿ ಬಳಸುತ್ತಿದ್ದ ಬೀಸುವಕಲ್ಲು, ಒನಕೆ, ಜನಪದ ಸಂಗೀತ ಪರಿಕರಗಳಿದ್ದು ಜನಪದ ಕಲಾವಿದರು ಕೂಡ ಇರಲಿದ್ದಾರೆ.