- ಹಿರೇಕಲ್ಮಠ ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ರೇಣುಕಾಚಾರ್ಯ ಪ್ರಾರ್ಥನೆ
- - -ಕನ್ನಡಪ್ರಭ ವಾರ್ತೆ ಹೊನ್ನಾಳಿ
ಪಾಕಿಸ್ತಾನದಲ್ಲಿ ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆ ಶುಕ್ರವಾರ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹಿರೇಕಲ್ಮಠದ ವೀರಭದ್ರೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ, ದೇಶದ ಸೈನಿಕರು, ಸೇನಾ ಕಾರ್ಯಾಚರಣೆ ಬೆಂಬಲಿಸುವ ನಿಟ್ಟಿನಲ್ಲಿ ಹಾಗೂ ನರೇಂದ್ರ ಮೋದಿ, ಅಮಿತ್ ಶಾ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿದರು.ಇದೇ ವೇಳೆ ಮಠದಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿದ್ದು, ವಿಶೇಷವಾಗಿ ವಧು- ವರರಿಗೆ ಹಾಗೂ ಎಲ್ಲ ಹೆಣ್ಣುಮಕ್ಕಳಿಗೆ ಸಿಂದೂರ ಕೊಡಲಾಯಿತು.
ಪ್ರಧಾನಿ ಮೋದಿ ಅವರ ಅಚಲ ನಿರ್ಧಾರದೊಂದಿಗೆ ಪಹಲ್ಗಾಂ ದಾಳಿಗೆ ಪ್ರತಿರೋಧವಾಗಿ ‘ಆಪರೇಷನ್ ಸಿಂದೂರ’ ನಡೆಸಿ, ಪಾಕಿಸ್ತಾನಕ್ಕೆ ಭಾರತ ತಕ್ಕ ಶಾಸ್ತಿ ಮಾಡಿದೆ. ಕಳೆದ ರಾತ್ರಿ ಭಾರತದ ಮೇಲೆ ದಾಳಿ ನಡೆಸಲು ವಿಫಲ ಯತ್ನ ನಡೆಸಿದ ಪಾಕಿಸ್ತಾನಕ್ಕೆ ಭಾರತೀಯ ಸೇನಾ ಪಡೆಗಳು ತಕ್ಕ ಉತ್ತರ ನೀಡಿವೆ ಎಂದರು.ವಾಯುಸೇನೆ, ಭೂ ಸೇನೆ ಹಾಗೂ ನೌಕಾ ಸೇನೆಯ ಸರ್ವ ಸನ್ನದ್ಧ ನಿರ್ಧಾರದೊಂದಿಗೆ ‘ಆಪರೇಷನ್ ಸಿಂದೂರ ಕಾರ್ಯಾಚರಣೆ ನಡೆಸಲಾಗಿದೆ. ಪಾಕ್ ಪ್ರಧಾನಿ ಶಹಬಾಜ್ ಷರೀಫ್ ತಮ್ಮ ನಿವಾಸ ಬಿಟ್ಟು ಬಂಕರ್‌ನಲ್ಲಿ ಅವಿತು ಕುಳಿತಿದ್ದಾರೆಂದರೆ ನಮ್ಮ ಸೇನಾ ಶಕ್ತಿ ಏನೆಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.
ಭಾರತೀಯ ಸೇನೆಯ ಚಾಕಚಕ್ಯತೆ ಹಾಗೂ ಮೋದಿ ಅವರು ಸಾಧಿಸಿದ ಉತ್ತಮ ಬಾಂಧವ್ಯದೊಂದಿಗೆ ವಿಶ್ವದ 16 ದೇಶಗಳು ಭಾರತೀಯರ ಬೆಂಬಲಕ್ಕೆ ನಿಂತಿರುವುದು ಶ್ಲಾಘನೀಯ. ಭಾರತ ಈಗ ಯುದ್ಧ ಪರಿಸ್ಥಿತಿ ಎದುರಿಸುತ್ತಿದೆ. ಇಂಥ ಸಮಯದಲ್ಲಿ ದೇಶದ 150 ಕೋಟಿ ನಾಗರಿಕರೂ ಭಾರತೀಯ ಸೇನೆಯೊಂದಿಗೆ ನಿಂತು ಸೇನಾ ಕಾರ್ಯಾಚರಣೆಗೆ ಬೆಂಬಲ ನೀಡಬೇಕಾಗಿದೆ ಎಂದರು.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರಕ್ಕೆ ಬೆಂಬಲಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಯುದ್ಧ ಬೇಡ ಎನ್ನುತ್ತಾರೆ. ಕರ್ನಾಟಕ ಕಾಂಗ್ರೆಸ್ಸೇ ಬೇರೆ, ರಾಷ್ಟ್ರೀಯ ಕಾಂಗ್ರೆಸ್ಸೇ ಬೇರೆ ಬೇರೆ ಹೇಳಿಕೆ ನೀಡುತ್ತಿವೆ. ಜೈರಾಮ್ ರಮೇಶ್ ಅವರ ಎಚ್ಚರಿಕೆಗೆ ನಯಾ ಪೈಸೆ ಬೆಲೆ ನೀಡುತ್ತಿಲ್ಲ. ಶಾಂತಿಮಂತ್ರ ಜಪಿಸುವ ಕಾಂಗ್ರೆಸ್ ಯಾರ ಪರ ಇದೆ? ಇದು ದೇಶಕ್ಕೆ ಅಪಮಾನ.
ಈ ಸಂದರ್ಭ ಬಿಜೆಪಿ ತಾಲೂಕು ಅಧ್ಯಕ್ಷ ಆರಕೆರೆ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಮಾದೇನಹಳ್ಳಿ ನಾಗರಾಜ್, ಮಾರುತಿ ನಾಯ್ಕ, ಶಿವು ಹುಡೇದ್, ಕೆ.ರಂಗಪ್ಪ, ಮಹೇಶ್ ಹುಡೇದ್, ಮಂಜುನಾಥ ಇಂಚರ ನವಹೊನ್ನೆ ಮಂಜು ಮತ್ತಿತರ ಮುಖಂಡರು ಇದ್ದರು.- - -
* (ಬಾಕ್ಸ್) ದುಗ್ಗಮ್ಮಗೆ ಸಂಸದೆ ಡಾ.ಪ್ರಭಾ ಪ್ರಾರ್ಥನೆದಾವಣಗೆರೆ: ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದೇವಸ್ಥಾನಕ್ಕೆ ಶುಕ್ರವಾರ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೇಟಿ ನೀಡಿ, ದೇವಿಯ ದರ್ಶನ ಪಡೆದು, ನಾಡಿನ ಸುಖ-ಶಾಂತಿ ಹಾಗೂ ಜನರ ಒಳಿತಿಗಾಗಿ ಪೂಜೆ ಸಲ್ಲಿಸಿದರು. ಶಕ್ತಿ ಸ್ವರೂಪಿಣಿಯಾದ ದುರ್ಗಾದೇವಿಯು "ಆಪರೇಷನ್ ಸಿಂದೂರ್ " ಕಾರ್ಯಾಚರಣೆಯಲ್ಲಿ ತೊಡಗಿರುವ ನಮ್ಮ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿಯನ್ನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿದರು.ದುರ್ಗಮ್ಮ ದೇಗುಲ, ದರ್ಗಾದಲ್ಲಿ ಪೂಜೆ ಇಂದು:
ಆಪರೇಷನ್ ಸಿಂದೂರ ಕಾರ್ಯಾಚರಣೆಯಲ್ಲಿ ತೊಡಗಿರುವ ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ ಸಿಗಲಿ ಮತ್ತು ಯೋಧರಿಗೆ ಯಾವುದೇ ರೀತಿಯ ತೊಂದರೆ ಆಗದಂತೆ ಅನುಗ್ರಹಿಸಿ ತಾಯಿ ಎಂದು ಪ್ರಾರ್ಥಿಸಿ ಮೇ 10ರಂದು ಬೆಳಗ್ಗೆ 11 ಗಂಟೆಗೆ ನಗರದ ದುರ್ಗಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಕಡಕ್ ಶಾ ವಲಿ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವುದಾಗಿ ಜಿಲ್ಲಾ ಜವಾಹರ್ ಬಾಲ್ ಮಂಚ್ ಜಿಲ್ಲಾಧ್ಯಕ್ಷ ಮೊಹಮ್ಮದ್ ಜಿಕ್ರಿಯಾ ತಿಳಿಸಿದ್ದಾರೆ.- - --9ಕೆಡಿವಿಜಿ43:
- - --9ಎಚ್.ಎಲ್.ಐ1.ಜೆಪಿಜಿ:
ಆಪರೇಷನ್ ಸಿಂದೂರ ಕಾರ್ಯಾಚರಣೆ ಹಿನ್ನೆಲೆ ಶುಕ್ರವಾರ ಮಾಜಿ ಸಚಿವ ಎಂ.ಪಿ ರೇಣುಕಾಚಾರ್ಯ ದೇಶದ ಒಳಿತಿಗೆ ಪ್ರಾರ್ಥಿಸಿ, ಪೂಜೆ ಸಲ್ಲಿಸಿದರು.