ಅಧಿವೇಶನ ಮುಗಿದ ನಂತರ ವಿಶೇಷ ಕಾರ್ಯಕ್ರಮ

KannadaprabhaNewsNetwork |  
Published : Nov 29, 2026, 01:30 AM IST
28 ಟಿವಿಕೆ 3 – ತುರುವೇಕೆರೆ ತಾಲೂಕು ಮುನಿಯೂರಿನಲ್ಲಿ ನಡೆದ ಪ್ರಜಾ ಸೇವೆ ಅಭಿಯಾನವನ್ನು ಶಾಸಕ ಎಂ.ಟಿ.ಕೃಷ್ಣಪ್ಪ ಉದ್ಘಾಟಿಸಿದರು. | Kannada Prabha

ಸಾರಾಂಶ

ಪ್ರಜಾ ಸೇವೆ ಅಭಿಯಾನ ಜನಸೇವೆಯಲ್ಲಿ ಸಾರ್ವಜನಿಕರಿಂದ ಬಂದಿರುವ ಮನವಿಗಳು ಪ್ರಗತಿಯಲ್ಲಿದೆಯೇ? ಇಲ್ಲವೇ? ಎಂಬ ಬಗ್ಗೆ ತಾವು ವಿಧಾನ ಮಂಡಲದ ಅಧಿವೇಶನ ಮುಗಿದ ನಂತರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ವಿಚಾರಣೆ ನಡೆಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ಕನ್ನಡಪ್ರಭವಾರ್ತೆ, ತುರುವೇಕೆರೆ

ಪ್ರಜಾ ಸೇವೆ ಅಭಿಯಾನ ಜನಸೇವೆಯಲ್ಲಿ ಸಾರ್ವಜನಿಕರಿಂದ ಬಂದಿರುವ ಮನವಿಗಳು ಪ್ರಗತಿಯಲ್ಲಿದೆಯೇ? ಇಲ್ಲವೇ? ಎಂಬ ಬಗ್ಗೆ ತಾವು ವಿಧಾನ ಮಂಡಲದ ಅಧಿವೇಶನ ಮುಗಿದ ನಂತರ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು ವಿಚಾರಣೆ ನಡೆಸುವುದಾಗಿ ಶಾಸಕ ಎಂ.ಟಿ.ಕೃಷ್ಣಪ್ಪ ಹೇಳಿದರು.

ತಾಲೂಕಿನ ಮುನಿಯೂರು ಗ್ರಾಮದ ವಿವೇಕಾ ನಂದ ನಗರದ ಡಾ.ಅಂಬೇಡ್ಕರ್ ಭವನದಲ್ಲಿ ನಡೆದ ಪ್ರಜಾ ಸೇವೆ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಪ್ರಜಾ ಸೇವೆ ಅಭಿಯಾನವನ್ನು ಸುಖಾಸುಮ್ಮನೆ ಮಾಡಿಲ್ಲ. ಸಾರ್ವಜನಿಕರು ನೀಡುವ ಮನವಿಯನ್ನು ಬಹಳ ಗಂಭಿರವಾಗಿ ಪರಿಗಣಿಸಬೇಕು. ಅವರಿಗೆ 15 ದಿನಗಳೊಳಗೆ ಸೂಕ್ತ ಕ್ರಮ ಕೈಗೊಂಡಿರುವ ಬಗ್ಗೆ ಮಾಹಿತಿ ನೀಡಬೇಕು. ಬೇಜವಾಬ್ದಾರಿ ಮಾಡುವ ಹಾಗಿಲ್ಲ. ಮನವಿಗಳ ಬಗ್ಗೆ ತಾತ್ಸಾರ ಮಾಡಿದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು ಹೊಣೆಗಾರರಾಗುತ್ತಾರೆ. ಅಧಿಕಾರಿಗಳು ಬಹಳ ಎಚ್ಚರಿಕೆಯಿಂದ ಕೆಲಸ ಮಾಡಬೇಕೆಂದು ಶಾಸಕರು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ತಾಲೂಕು ಶಿರಿಸ್ತೇದಾರ್ ಸುನಿಲ್ ಕುಮಾರ್, ಇಓ ಅನಂತರಾಜ್, ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಡಾ.ರೇವಣ ಸಿದ್ದಯ್ಯ, ಬೆಸ್ಕಾಂ ಎಇಇ ರಾಜಶೇಖರ್, ಪಿಡಬ್ಲ್ಯುಡಿ ಇಎಎ ಕಣ್ಮಣಿ, ಜಿಲ್ಲಾ ಪಂಚಾಯತ್ ಎಇಇ ಪುಷ್ಪಲತಾ, ತೋಟಗಾರಿಕಾ ಇಲಾಖಾ ಸಹಾಯಕ ನಿರ್ದೇಶಕ ಸುರೇಶ್ ಸೇರಿದಂತೆ ಹಲವು ಅಧಿಕಾರಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳೆಲ್ಲ ಒಗ್ಗೂಡಲಿ: ಶಂಕರ ಭಟ್ಟ
ಮಹಾಲಸಾ ಸಿದ್ಧಿವಿನಾಯಕ ದೇಗುಲದಲ್ಲಿ ಒಂದೇ ರಾತ್ರಿಯಲ್ಲಿ 25 ಸಾವಿರ ತೆಂಗಿನಕಾಯಿ ಒಡೆದ್ರು!