ಜನಮನ ಸೂರೆಗೊಂಡವಿಶೇಷಚೇತನ ಮಕ್ಕಳ ನೃತ್ಯ

KannadaprabhaNewsNetwork |  
Published : Jul 23, 2024, 12:30 AM IST
22 | Kannada Prabha

ಸಾರಾಂಶ

ಮೈಸೂರು ರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಉಚಿತ ವಸತಿ ಶಾಲೆ ಮಕ್ಕಳು ಶಿವ- ನಂದಿಯ ನೃತ್ಯ ಮಾಡಿ ಮನಗೆದ್ದರು.

ಕನ್ನಡಪ್ರಭ ವಾರ್ತೆ ಮೈಸೂರು

ನಗರದ ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಸೋಮವಾರ ಎಲ್ಲೆಲ್ಲೂ ಮಕ್ಕಳ ಕಲರವ ಮನೆ ಮಾಡಿತ್ತು. ಇವರುಸಾಮಾನ್ಯ ಮಕ್ಕಳಲ್ಲಾ, ವಿಶೇಷಚೇತನ ಮಕ್ಕಳು, ಏನೊಂದೂ ಅರಿಯದ ಮುದ್ದು ಮನಸಿನ ಬಾಲ ಕುಸಮಗಳು. ಅವರ ನಡೆಸಿಕೊಟ್ಟನೃತ್ಯಗಳುಹಾಡು ಮತ್ತು ವಾದ್ಯಕ್ಕೆ ತಕ್ಕಂತೆ ಹಾಕುತ್ತಿದ್ದ ಹೆಜ್ಜೆ ಹಾವ, ಭಾವ ಎಲ್ಲವೂಸಾಮಾನ್ಯರನ್ನೂ ಮೀರಿಸುವಂತಿತ್ತು.ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರ 21ನೇ ಚಾತುರ್ಮಾಸ್ಯ ವ್ರತದೀಕ್ಷೆ ಪ್ರಯುಕ್ತ ವಿಶೇಷಚೇತನ ಮಕ್ಕಳಿಂದ ಮೊದಲು ಅನಘಾ ವ್ರತ ಮಾಡಿಸಲಾಯಿತು. ಮೇಟಗಳ್ಳಿಯ ರಂಗರಾವ್ ಮೆಮೋರಿಯಲ್ ಶಾಲೆಯ ವಿಶೇಷಚೇತನ ಮಕ್ಕಳು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ರಚಿಸಿರುವ ಹಲವು ಭಜನೆಗಳನ್ನು ಹಾಡುವ ಮೂಲಕಎಲ್ಲರ ಮನಸೂರೆಗೊಂಡರು.ಮಾತೃಮಂಡಳಿ ಶಾಲೆ ಮಕ್ಕಳು ಬೆಳ್ಳಿ ಮೂಡಿತೊ... ಕೋಳಿ ಕೂಗಿತೋ ಹಾಡಿಗೆ ನೃತ್ಯ ಮಾಡಿ ಸೈ ಎನಿಸಿಕೊಂಡರು. ಯೋಗೇಶ್ ಮಾಸ್ಟರ್ ನೃತ್ಯ ನಿರಂತರ ಟ್ರಸ್ಟ್ ಸ್ಥಾಪಿಸಿ ವಿಶೇಷಚೇತನ ಮಕ್ಕಳಿಗೆ ಉಚಿತವಾಗಿ ನೃತ್ಯ ತರಬೇತಿ ನೀಡುತ್ತಿದ್ದು ಅವರ ಶಾಲೆಯ ಮಕ್ಕಳು ಮಾಡಿದ ಶಿವ ತಾಂಡವ ನೃತ್ಯ ರೂಪಕ ಅದ್ಭುತವಾಗಿತ್ತು.ಆಖಿಲ ಭಾರತ ವಾಕ್ ಮತ್ತು ಶ್ರವಣ ಸಂಸ್ಥೆಯ ಚಿರಂತನ್, ಭಗವದ್ಗೀತೆ ಶ್ಲೋಕ ಹಾಗೂ ಕ್ಯಾಸಿನೊ ನುಡಿಸಿ ಮನ ಸೆಳೆದನು. ಪುಟ್ಟವೀರಮ್ಮಶ್ರವಣ ದೋಷವುಳ್ಳ ಹೆಣ್ಣುಮಕ್ಕಳ ಶಾಲೆ ಮಕ್ಕಳು ಕಟೀಲು ದುರ್ಗಾಪರಮೇಶ್ವರಿ ನೃತ್ಯ ರೂಪಕ ಮಾಡಿ ಎಲ್ಲರ ಮನ ಸೂರೆಗೊಂಡರು.ಮೈಸೂರು ರಾಜ ಒಡೆಯರ್ ಅವರಿಂದ ಸ್ಥಾಪಿತವಾದ ಉಚಿತ ವಸತಿ ಶಾಲೆ ಮಕ್ಕಳು ಶಿವ- ನಂದಿಯ ನೃತ್ಯ ಮಾಡಿ ಮನಗೆದ್ದರು. ಶ್ರೀ ಸಾಯಿ ಸಂಸ್ಥೆಯ ಮಕ್ಕಳು ವಾಲಿ- ಹನುಮನ ನೃತ್ಯ ಮಾಡಿ ಎಲ್ಲರ ಮನಸೂರೆಗೊಂಡರು. ಎಸ್ ಜಿಎಸ್ ಶಾಲೆ ಮಕ್ಕಳು ಯಮುನಾ ತಟಕ ರಾಧಾ ಕೃಷ್ಣ ನೃತ್ಯ ಮಾಡಿ ಎಲ್ಲರಿಂದ ಸೈ ಎನಿಸಿಕೊಂಡರು. ಕೆ. ಚಿದಾನಂದ ಸನ್ನೆ ಭಾಷೆಯ ಮೂಲಕ ಅನಘಾವ್ರತ ಕಥೆಯನ್ನು ಮನಮುಟ್ಟುವಂತೆ ಹೇಳಿದ್ದು ಎಲ್ಲರನ್ನೂ ಮಂತ್ರಮುಗ್ದವಾಗಿಸಿತು.ಆಶ್ರಮದಸ್ವಯಂಸೇವಕರಾದ ಸತೀಶ್- ಪುಷ್ಪಲತಾಅವರ ಪುತ್ರಿ ದೃಷ್ಟಿವಿಕಲಚೇತನೆ ಅನಘಾ, ಕನ್ನಡಎಂ.ಎ ಮಾಡಿ ಚಿನ್ನದ ಪದಕ ಪಡೆದಿದ್ದಾರೆ. ಈಗ ಪಿಎಚ್.ಡಿ ಮಾಡುತ್ತಿದ್ದಾರೆ ಎಂದು ಶ್ರೀ ದತ್ತ ವಿಜಯಾನಂದ ತೀರ್ಥಸ್ವಾಮೀಜಿ ಕೊಂಡಾಡಿದರು. ಅಲ್ಲದೆ, ಚೆನ್ನೈನ ಡಾ. ಶಿವ ಎಂಬವರು ವಿಶೇಷವಾಗಿ ಸಿದ್ಧಪಡಿಸಿದ ಕನ್ನಡಕವನನ್ನು ಆಕೆಗೆ ವಿತರಿಸಲಾಯಿತು.ನಂತರ ಶ್ರೀ ದತ್ತವಿಜಯಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ವಿಶೇಷಚೇತನ ಮಕ್ಕಳೆಲ್ಲರೂ ಬಹಳ ಚೇತನವುಳ್ಳವರು. ಅವರಲ್ಲಿರುವಚೇತನ ಸಾಮಾನ್ಯ ಜನರಲ್ಲೂ ಇಲ್ಲಾ ಅನ್ನಿಸುತ್ತಿದೆ. ಈ ಮಕ್ಕಳಿಂದ ಅನಘಾಷ್ಟಮಿ ವ್ರತಮಾಡಿಸಿದ್ದು ಸಂತೋಷ ಉಂಟುಮಾಡಿದೆ. ಈಮಕ್ಕಳ ಜೀವನ ಸುಗಮವಾಗಿರಲಿ, ಎಲ್ಲರಿಗೂ ಒಳ್ಳೆಯದಾಗಲಿ, ಭಗವಂತನ ಆಶೀರ್ವಾದ, ಗುರು ಕೃಪೆ ನಿಮ್ಮೆಲ್ಲರ ಮೇಲಿರಲಿ ಹಾರೈಸಿದರು.ಕಾರ್ಯಕ್ರಮ ನಡೆಸಿಕೊಟ್ಟ10 ಶಾಲೆಯ 800 ಹೆಚ್ಚು ಮಕ್ಕಳಿಗೆ ಶಾಲಾ ಬ್ಯಾಗ್ ಮತ್ತಿತರ ವಸ್ತುಗಳನ್ನು ಅವಧೂತ ದತ್ತಪೀಠದವತಿಯಿಂದ ವಿತರಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡಕ್ಕೆ ಕೊಕ್
ಓಡಿ ಹೋದ ಹೇಡಿ ಎನಿಸಿಕೊಳ್ಳುವುದಿಲ್ಲ. ಅಲ್ಲೇ ರಾಜಕೀಯ ಅಸ್ತಿತ್ವ ಕಂಡುಕೊಳ್ಳುತ್ತೇನೆ : ನಿಖಿಲ್‌