ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಈ ಬಗ್ಗೆ ಶ್ರೀ ನವಿಲೆ ನಾಗೇಶ್ವರ ದೇವಾಲಯದ ಸನ್ನಿಧಿಯಲ್ಲಿ ಕಾರ್ಯ ಕ್ರಮಗಳ ಸಿದ್ಧತೆ ಪರಿಶೀಲನೆ ನಡೆಸಿ ಮಾಹಿತಿ ನೀಡಿದ ಅವರು, ಭಕ್ತರು ಗ್ರಾಮಸ್ಥರು ಹಾಗೂ ಕ್ಷೇತ್ರದ ಶಾಸಕ ಸಿ.ಎನ್. ಬಾಲಕೃಷ ಹಾಗೂ ವಿವಿಧ ಪಕ್ಷಗಳ ನಾಯಕರ ಸಹಕಾರದಿಂದ ಸುಮಾರು ೧ ಕೋಟಿ ರು. ವೆಚ್ಚದಲ್ಲಿ ನೂತನ ರಥ ನಿರ್ಮಾಣವಾಗಿದ್ದು, ರಥದ ಲೋಕಾರ್ಪಣೆ ಅಂಗವಾಗಿ ಫೆಬ್ರವರಿ ೨೧ ಶನಿವಾರ ದಂಡು ಶ್ರೀ ನಾಗೇಶ್ವರ ಸ್ವಾಮಿ, ಶ್ರೀ ರಂಗನಾಥ ಸ್ವಾಮಿ, ಶ್ರೀ ಕೆಂಪಮ್ಮ ದೇವಿ ದೇವರುಗಳ ಆಗಮನದೊಂದಿಗೆ ಸಂಜೆ ಐದರಿಂದ ಆರು ಗಂಟೆಗೆ ಸಲ್ಲುವ ಶುಭ ಗೋಧೂಳಿ ಲಗ್ನದಲ್ಲಿ ಗಣಪತಿ, ಗಂಗೆ ಪೂಜೆ ಯೊಂದಿಗೆ ಹೋಮ ಇತ್ಯಾದಿಗಳು ನಡೆಯಲಿದೆ. ಫೆ.೨೨ರ ಭಾನುವಾರ ದೇವಾಲಯದಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನಡೆಯಲಿವೆ ಎಂದರು.ನೂತನ ರಥದ ಲೋಕಾರ್ಪಣೆ ಅಂಗವಾಗಿ ನಡೆಯುವ ವೇದಿಕೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ಸುಕ್ಷೇತ್ರ ಕೆರಗೋಡಿ ರಂಗಾಪುರ ಮಠದ ಶ್ರೀ ಗುರು ಪರದೇಶಿ ಕೇಂದ್ರ ಮಹಾ ಸ್ವಾಮೀಜಿ ಹಾಗೂ ವಿಶ್ವ ಒಕ್ಕಲಿಗರ ಮಠದ ಕೆಂಗೇರಿ ಶ್ರೀ ನಿಶ್ಚಲಾನಂದ ಮಹಾ ಸ್ವಾಮೀಜಿ ದಿವ್ಯ ಸಾನ್ನಿಧ್ಯ ವಹಿಸಲಿದ್ದಾರೆ. ವೇದಿಕೆ ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ಶ್ರೇಯಸ್ ಪಟೇಲ್ ಅವರು ನೆರವೇರಿಸುವರು.ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ, ಮಾಜಿ ವಿಧಾನ ಪರಿಷತ್ ಸದಸ್ಯ ಎಂ.ಎ.ಗೋಪಾಲಸ್ವಾಮಿ, ಮಾಜಿ ಶಾಸಕ ಸಿ ಎಸ್ ಪುಟ್ಟೇಗೌಡ, ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ, ಭಾರತ ಸರ್ಕಾರ ಮಧ್ಯಮ ಕೈಗಾ ರಿಕೆಗಳ ಸಚಿವಾಲಯದ ಅಪಾರ ಕಾರ್ಯದರ್ಶಿ ಬಿ.ಎಂ. ವರಪ್ರಸಾದ್ ರೆಡ್ಡಿ, ಎಸಿ ಜಗದೀಶ್ ಗಂಗಣ್ಣ, ತಹಸಿಲ್ದಾರ್ ಶಂಕರಪ್ಪ, ತಾಪಂ ಇಒ ಹರೀಶ್ ಹರೀಶ್, ನುಗ್ಗೇಹಳ್ಳಿ ಚೆಸ್ಕಾಂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ವಜ್ರಕುಮಾರ್, ಜಿಪಂ ಮಾಜಿ ಉಪಾಧ್ಯಕ್ಷ ಎಇ ಚಂದ್ರಶೇಖರ್, ಬಿಜೆಪಿ ಮುಖಂಡ ಚಿದಾನಂದ್, ನೂತನ ರಥದ ಶಿಲ್ಪಿ ಶಿವಕುಮಾರ್ ಆಚಾರ್ ಸೇರಿದಂತೆ ವಿವಿಧ ಗಣ್ಯರು ಭಾಗವಹಿಸಲಿದ್ದಾರೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡುವಂತೆ ಕೋರಿದರು.ಶ್ರೀ ನಾಗೇಶ್ವರಸ್ವಾಮಿ ನೂತನ ರಥ ನಿರ್ಮಾಣ ಸಮಿತಿ ಅಧ್ಯಕ್ಷ ಎನ್. ಸದಾಶಿವಯ್ಯ ಮಾತನಾಡಿ, ನವಿಲೆ ನಾಗೇಶ್ವರಸ್ವಾಮಿ ರಾಜ್ಯದ ಪವಿತ್ರ ಪುಣ್ಯಕ್ಷೇತ್ರವಾಗಿದ್ದು, ರಾಜ್ಯದ ನಾನಾ ಭಾಗಗಳಿಂದ ದಿನನಿತ್ಯ ಸಹಸ್ವಾರು ಸಂಖ್ಯೆಯಲ್ಲಿ ಭಕ್ತರು ದೇವಾಲಯಕ್ಕೆ ಆಗಮಿಸಿ ದೇವರ ದರ್ಶನ ಪಡೆಯುತ್ತಾರೆ. ಎರಡು ವರ್ಷಗಳ ಹಿಂದೆ ಹಳೆಯ ರಥ ಸಂಪೂರ್ಣವಾಗಿ ಮುರಿದು ಬಿದ್ದ ಹಿನ್ನೆಲೆಯಲ್ಲಿ ಹೊಸ ರಥದ ನಿರ್ಮಾಣಕ್ಕೆ ಭಕ್ತರು ಹಾಗೂ ಗ್ರಾಮಸ್ಥರ ಸಹಕಾರದೊಂದಿಗೆ ಮುಂದಾಗಲಾಯಿತು. ಸುಮಾರು ೧ ಕೋಟಿ ರು. ವೆಚ್ಚದಲ್ಲಿ ನೂತನ ರಥ ನಿರ್ಮಾಣಗೊಂಡಿದು ರಥದ ಲೋಕಾರ್ಪಣೆ ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳಲಾಗಿದ್ದು, ಭಕ್ತರು ಹೆಚ್ಚಿನ ಆಗಮಿಸುವಂತೆ ಮನವಿ ಮಾಡಿದರು.ಶ್ರೀ ನಾಗೇಶ್ವರ ಸ್ವಾಮಿ ನೂತನ ರಥ ಸಮಿತಿ ಖಜಾಂಚಿ ಹಾಗೂ ಕೃಷಿ ಪತ್ತಿನ ಅಧ್ಯಕ್ಷ ಕುಮಾರಸ್ವಾಮಿ, ನವಿಲೆ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗಪ್ಪ ಈ ಸಂದರ್ಭದಲ್ಲಿ ರಥ ನಿರ್ಮಾಣ ಸಮಿತಿ ಕಾರ್ಯದರ್ಶಿ ಎನ್.ಜಯದೇವಪ್ಪ, ಕಾರ್ಯದರ್ಶಿ ಕಾಂತರಾಜ್ ಎನ್. ಅರ್ಚಕರಾದ ಸಿದ್ದೇಶ್ ಶಾಸ್ತ್ರಿ, ಶಂಕರ್ ಪ್ರಸಾದ್ ಶಾಸ್ತ್ರಿ, ಅಭಿಷೇಕ್, ಸಂತೋಷ್, ಶಾಮಿ ಯಾನ ಶಿವಕುಮಾರ್, ಎನ್.ಟಿ. ನಿತ್ಯಾನಂದ ಇತರರು ಇದ್ದರು.