ಕನಕಪುರ: ನಗರದ ಕೋಟೆ ಹೆಬ್ಬಾಗಿಲಿನಲ್ಲಿರುವ ಶ್ರೀ ಕೋದಂಡರಾಮ ದೇವಾಲಯದಲ್ಲಿ ಶ್ರೀ ರಾಮಾನುಜಾಚಾರ್ಯರ ಜಯಂತಿ ಪ್ರಯುಕ್ತ ಬೆಳಗ್ಗೆಯಿಂದಲೇ ವಿಶೇಷ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಆಚರಣೆಗಳನ್ನು ನೆರವೇರಿಸಲಾಯಿತು. ದೇವಾಲಯದ ಅಂಗಳದಲ್ಲಿ ಶ್ರೀ ರಾಮಾನುಜಾಚಾರ್ಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ವಿವಿಧ ಹೂವುಗಳಿಂದ ಅಲಂಕರಿಸಿ ಪೂಜಿಸಲಾಯಿತು. ಮಹಿಳಾ ಭಜನಾ ಮಂಡಳಿ ಸದಸ್ಯರು ಶ್ರೀ ಗಳ ಭಕ್ತಿ ಕೀರ್ತನೆಗಳನ್ನು ಹಾಡಿ ಭಕ್ತಿ ಪ್ರದರ್ಶಿಸಿದರು.
ರಾಮಾನುಜಾಚಾರ್ಯರು 12 ವರ್ಷ ಕರ್ನಾಟಕದ ಮೇಲುಕೋಟೆಯಲ್ಲಿ ನೆಲೆಸಿ ಅಲ್ಲಿ ಅವರು ತಮ್ಮ ವಿಶಿಷ್ಟಾದ್ವೈತ ಸಿದ್ಧಾಂತ ಪ್ರಚಾರ ಮಾಡಿದರು. ಇಂದಿಗೂ ಮೇಲುಕೋಟೆ ವೈಷ್ಣವ ಸಂಪ್ರದಾಯದ ಕೇಂದ್ರವಾಗಿದೆ. 11ನೇ ಶತಮಾನದ ಮಹಾ ಸಂತ ರಾಮಾನುಜಾಚಾರ್ಯರ 216 ಅಡಿ ಎತ್ತರದ ಪ್ರತಿಮೆ ಹೈದರಾಬಾದ್‌ನ ಮುಚಿಂತಲ್‌ನಲ್ಲಿ ಪ್ರತಿಷ್ಠಾಪಿಸಲಾಗಿದೆ. ಈ ಪ್ರತಿಮೆ ಸಮಾನತೆ ಸಂಕೇತವಾಗಿದ್ದು, ಭಾರತದಲ್ಲಿ ಸಮಾನತೆಯ ಸಂದೇಶ ಸಾರಿದ ಅವರನ್ನು ಗುರು, ದಾರ್ಶನಿಕ ಮತ್ತು ಸಮಾಜ ಸುಧಾರಕ ಎಂದು ಇಂದಿಗೂ ಪೂಜಿಸಲಾಗುತ್ತಿದೆ. ಅವರು ಭೋದಿಸಿದ ವಿಶಿಷ್ಟಾದ್ವೈತ ಸಿದ್ಧಾಂತ ಇಂದಿಗೂ ಭಾರತದ ಜನಪ್ರಿಯ ಅಧ್ಯಾತ್ಮ ಮಾರ್ಗವಾಗಿ ಪ್ರಕಾಶಿಸುತ್ತಿದೆ ಎಂದರು.
ಶ್ರೀ ರಾಮಾನುಜಾಚಾರ್ಯರ ಮೂರ್ತಿಯನ್ನು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ನಂತರ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಕೆ ಕೆ ಪಿ ಸುದ್ದಿ 04:ಕನಕಪುರ ಕೋಟೆ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ತ್ರಿಮತಸ್ಥ ವೈಷ್ಣವ ಸಮುದಾಯ ಶ್ರೀ ರಾಮಾನುಜಾಚಾ ರ್ಯರ ಜಯಂತಿ ಆಚರಿಸಿದರು.