ಕೋಟೆ ಶ್ರೀ ಮಾರಮ್ಮ ದೇವಾಲಯದಲ್ಲಿ ವಿಶೇಷ ಪೂಜೆ

KannadaprabhaNewsNetwork |  
Published : Mar 11, 2026, 01:30 AM IST
10ಎಚ್ಎಸ್ಎನ್19  :ಹೊಳೆನರಸೀಪುರ ಪಟ್ಟಣದ ಕೋಟೆ ಶ್ರೀ ಮಾರಮ್ಮದೇವಿ ದೇವಾಲಯದ ಉತ್ಸವ ಮೂರ್ತಿಯನ್ನು ವಿಶೇಷವಾಗಿ ಅಲಂಕರಿಸಿ ಪೂಜಿಸಲಾಯಿತು. ಅರ್ಚಕ ಕುಮಾರ್, ಕಿಟ್ಟಿ, ರಾಜು ಇದ್ದರು. | Kannada Prabha

ಸಾರಾಂಶ

ಬ್ರಾಹ್ಮೀ ಮಹೂರ್ತದಲ್ಲಿ ಹೇಮಾವತಿ ನದಿ ತೀರದಲ್ಲಿ ಗಂಗೆಪೂಜೆ ನೆರವೇರಿಸಿ, ಗಂಗಾ ಕಳಸ ಹೊತ್ತ ಗಂಗಾಮತಸ್ತ ಸುಮಂಗಲಿಯರು ಹಾಗೂ ಭಕ್ತರು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿ, ಗಂಗ ಕಳಸದಿಂದ ಶ್ರೀ ದೇವಿಯ ಮೂಲ ವಿಗ್ರಹಕ್ಕೆ ಪುಣ್ಯಹ, ಪಂಚಾಮೃತ ಅಭಿಷೇಕ ನರೆವೇರಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಹೋಮದ ಕುಂಡದಲ್ಲಿ ದುರ್ಗಾ ಹೋಮ ನೆರವೇರಿಸಿ, ಶ್ರೀ ದೇವಿಯ ಉತ್ಸವ ಮೂರ್ತಿಗೆ ವಿಶೇಷವಾಗಿ ಅಲಂಕರಿಸಿ, ಪೂಜಾ ಕೈಂಕರ್ಯ ನೆರವೇರಿಸಿದರು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರಪಟ್ಟಣದ ಕೋಟೆ ಶ್ರೀ ಮಾರಮ್ಮ ದೇವಾಲಯದಲ್ಲಿ ಶ್ರೀ ಮಾರಮ್ಮದೇವಿ ಹಬ್ಬ ಹಾಗೂ ೧೨ನೇ ವರ್ಷದ ವಾರ್ಷಿಕ ಪೂಜೆ ಅಂಗವಾಗಿ ಕೋಟೆಯ ಭಕ್ತರಿಗಾಗಿ ಭಾನುವಾರ ಸಂಪ್ರದಾಯದ ಆಚರಣೆಯಂತೆ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ನಡೆಯಿತು.

ಭಾನುವಾರ ಮುಂಜಾನೆ ಬ್ರಾಹ್ಮೀ ಮಹೂರ್ತದಲ್ಲಿ ಹೇಮಾವತಿ ನದಿ ತೀರದಲ್ಲಿ ಗಂಗೆಪೂಜೆ ನೆರವೇರಿಸಿ, ಗಂಗಾ ಕಳಸ ಹೊತ್ತ ಗಂಗಾಮತಸ್ತ ಸುಮಂಗಲಿಯರು ಹಾಗೂ ಭಕ್ತರು ಮಂಗಳವಾದ್ಯದೊಂದಿಗೆ ಮೆರವಣಿಗೆಯಲ್ಲಿ ದೇವಾಲಯಕ್ಕೆ ಆಗಮಿಸಿ, ಗಂಗ ಕಳಸದಿಂದ ಶ್ರೀ ದೇವಿಯ ಮೂಲ ವಿಗ್ರಹಕ್ಕೆ ಪುಣ್ಯಹ, ಪಂಚಾಮೃತ ಅಭಿಷೇಕ ನರೆವೇರಿಸಿ ವಿಶೇಷವಾಗಿ ಅಲಂಕರಿಸಲಾಗಿತ್ತು. ದೇವಾಲಯದ ಮುಂಭಾಗದಲ್ಲಿ ವಿಶೇಷವಾಗಿ ನಿರ್ಮಿಸಿದ್ದ ಹೋಮದ ಕುಂಡದಲ್ಲಿ ದುರ್ಗಾ ಹೋಮ ನೆರವೇರಿಸಿ, ಶ್ರೀ ದೇವಿಯ ಉತ್ಸವ ಮೂರ್ತಿಗೆ ವಿಶೇಷವಾಗಿ ಅಲಂಕರಿಸಿ, ಪೂಜಾ ಕೈಂಕರ್ಯ ನೆರವೇರಿಸಿದ ನಂತರ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀರ್ಥಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ಆಯೋಜನೆ ಮಾಡಲಾಗಿತ್ತು. ಹಿರಿಯ ಅರ್ಚಕ ಕುಮಾರ್‌, ಕಿಟ್ಟಿ ಉಪ್ಪಾರ್‌, ಮಂಜು, ನಂದ ಗುಂಜೇವು, ಆಟೋ ರಾಜು, ದೀಪು, ರಂಗಸ್ವಾಮಿ, ಕೇಶವ, ಮನೋಜ್, ದೇವರಾಜು, ಶ್ರೀಧರ್, ಪಾನಿಪುರಿ ಚಂದ್ರು, ಗಿರಿ ಯಾದವ್, ದೀಪಕ್, ಆನಂದ್, ಶಾಂತಮ್ಮ, ಗಿರೀಶ್ ಹಾಗೂ ಇತರರು ಶ್ರೀ ದೇವಿಯ ಸೇವಾ ಕಾರ್ಯದಲ್ಲಿ ಭಾಗಿಯಾಗಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉದ್ಯೋಗ, ಶಿಕ್ಷಣದಲ್ಲಿ ಮೀಸಲಾತಿಗೆ ಬಲಗೈ ಸಮಾಜ ಪ್ರತಿಭಟನೆ
ಅಡುಗೆ ಅನಿಲ ದರ ಏರಿಕೆ: ಪ್ರತಿಭಟನೆ