ಹನುಮ ಜಯಂತಿ: ಕುಶಾಲನಗರ ದೇವಳದಲ್ಲಿ ವಿಶೇಷ ಪೂಜೆ

KannadaprabhaNewsNetwork |  
Published : Dec 25, 2023, 01:30 AM ISTUpdated : Dec 25, 2023, 01:31 AM IST
ಹನುಮ ಜಯಂತಿ | Kannada Prabha

ಸಾರಾಂಶ

ಸಂಜೆ ಐದನೇ ವರ್ಷದ ಶೋಭಾ ಯಾತ್ರೆ ನಡೆಯಿತು.

ಕನ್ನಡಪ್ರಭ ವಾರ್ತೆ ಕುಶಾಲನಗರ

ಹನುಮ ಜಯಂತಿ ಅಂಗವಾಗಿ ಕುಶಾಲನಗರದ ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.ಶ್ರೀ ರಾಮಾಂಜನೇಯ ಉತ್ಸವ ಸಮಿತಿ ದೇವಸ್ಥಾನ ಸೇವಾ ಟ್ರಸ್ಟ್ ಮತ್ತು ಆಂಜನೇಯ ಸೇವಾ ಸಮಿತಿ ವತಿಯಿಂದ 38ನೇ ವರ್ಷದ ಹನುಮ ಜಯಂತಿ ಕಾರ್ಯಕ್ರಮ ಅಂಗವಾಗಿ ದೇವಾಲಯದಲ್ಲಿ ಬೆಳಗ್ಗೆ ಅಭಿಷೇಕ ಕಾರ್ಯಕ್ರಮ ನಂತರ ಮಧ್ಯಾಹ್ನ ದೇವರಿಗೆ ಮಹಾಮಂಗಳಾರತಿ ಮತ್ತು ಭಕ್ತರಿಗೆ ಅನ್ನ ಸಂತರ್ಪಣೆ ಕಾರ್ಯ ನಡೆಯಿತು.

ಸಂಜೆ ಆಂಜನೇಯ ಸ್ವಾಮಿಯ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಏರ್ಪಡಿಸಲಾಗಿತ್ತು. ದೇವಾಲಯದ ಅರ್ಚಕರಾದ ರಾಧಾಕೃಷ್ಣ ಭಟ್ ನೇತೃತ್ವದ ತಂಡ ಪೂಜಾ ವಿಧಿ ವಿಧಾನಗಳನ್ನು ನಡೆಸಿಕೊಟ್ಟಿತು.ಆಂಜನೇಯ ಸೇವಾ ಸಮಿತಿಯ ಅಧ್ಯಕ್ಷ ವಿ.ಡಿ. ಪುಂಡರಿಕಾಕ್ಷ ರಾಮಾಂಜನೇಯ ಉತ್ಸವ ಸಮಿತಿ ಮತ್ತು ಟ್ರಸ್ಟ್‌ ಅಧ್ಯಕ್ಷ ವಿ.ಎಚ್. ಪ್ರಶಾಂತ್, ಕಾರ್ಯದರ್ಶಿ ನವನೀತ್ ಪೊನ್ನಟ್ಟಿ, ಸಹ ಕಾರ್ಯದರ್ಶಿ ವಿನು, ಖಜಾಂಚಿ ಪ್ರವೀಣ್ ಓಂಕಾರ್, ಸಂಚಾಲಕರಾದ ಕೆ.ಎನ್. ಚಂದ್ರಶೇಖರ್, ನಿರ್ದೇಶಕರು, ಸದಸ್ಯರು ಇದ್ದರು.

ಶೋಭಾ ಯಾತ್ರೆ:

ಹನುಮ ಜಯಂತಿ ಅಂಗವಾಗಿ ದಶಮಂಟಪ ಸಮಿತಿ ನೇತೃತ್ವದಲ್ಲಿ ಎಂಟು ಮಂಟಪಗಳು ಕುಶಾಲನಗರ ಪಟ್ಟಣದಲ್ಲಿ ಸಂಜೆ ಐದನೇ ವರ್ಷದ ಶೋಭಾ ಯಾತ್ರೆ ನಡೆಸಿತು.

ಕುಶಾಲನಗರ ಎಚ್‌ಆರ್‌ಪಿ ಕಾಲೋನಿ, ಮಾದಾಪಟ್ಟಣ, ಗೋಪಾಲ ಸರ್ಕಲ್ ಕೂಡಿಗೆ ಜನತಾ ಕಾಲೋನಿ ಬೈಚನಹಳ್ಳಿ ಗ್ರಾಮಗಳಿಂದ ಒಟ್ಟು ಎಂಟು ಮಂಟಪಗಳು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದವು. ಸಾವಿರಾರು ಸಂಖ್ಯೆಯಲ್ಲಿ ಹನುಮ ಭಕ್ತರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿದ್ದರು.

ದಶಮಂಟಪಗಳ ಸಮಿತಿ ಅಧ್ಯಕ್ಷ ಎಂ.ಡಿ. ಕೃಷ್ಣಪ್ಪ, ಕಾರ್ಯದರ್ಶಿ ಕೆ.ಎನ್. ದೇವರಾಜ, ಖಜಾಂಚಿ ಡಿ.ಪಿ. ಗಿರೀಶ ಮತ್ತು ಪದಾಧಿಕಾರಿಗಳು ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಹನುಮ ಜಯಂತಿ ಶೋಭಯಾತ್ರೆ ಅಂಗವಾಗಿ ಕುಶಾಲನಗರ ಕಾರ್ ನಿಲ್ದಾಣದಲ್ಲಿ ಜೇಂಕರ್ ಆರ್ಕೆಸ್ಟ್ರಾ ಸಂಸ್ಥೆ ವತಿಯಿಂದ ಸಂಜೆ ವೇಳೆ ಮನರಂಜನಾ ಕಾರ್ಯಕ್ರಮ ನಡೆಯಿತು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ