ದಂಡಿ ಮಾರಮ್ಮನಿಗೆ ಸಚಿವರಿಂದ ವಿಶೇಷ ಪೂಜೆ

KannadaprabhaNewsNetwork |  
Published : Jan 25, 2025, 01:03 AM IST
ಮಧುಗಿರಿಯ ಇತಿಹಾಸ ಪ್ರಸಿದ್ಧ ಶ್ರೀದಂಡಮಾರಮ್ಮ ದೇವಿಗೆ ತೆಪ್ಪೋತ್ಸವದ ಹಿನ್ನಲೆಯಲ್ಲಿ ಸಹಕಾರ ಸಚಿವ ಕೆ.ಎನ್‌.ರಾಜಣ್ಣ  ಕುಟುಂಬ ಸಮೇತರಾಗಿ ಗುಡಿಗೆ ಆಗಮಿಸಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.  | Kannada Prabha

ಸಾರಾಂಶ

ಗ್ರಾಮದೇವತೆ ದಂಡಿಮಾರಮ್ಮ ದೇವಸ್ಥಾನಕ್ಕೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ,ಪತ್ನಿ ಶಾಂತಲಾ , ಪುತ್ರ ಎಂಎಲ್‌ಸಿ ಆರ್‌. ರಾಜೇಂದ್ರ, ಆರ್‌. ರವೀಂದ್ರ, ಪುತ್ರಿ ರಶ್ಮಿ ಹಾಗೂ ಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ದಂಡಿಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು.

ಕನ್ನಡಪ್ರಭ ವಾರ್ತೆ ಮಧುಗಿರಿ

ಗ್ರಾಮದೇವತೆ ದಂಡಿಮಾರಮ್ಮ ದೇವಸ್ಥಾನಕ್ಕೆ ಸಹಕಾರ ಸಚಿವ ಕೆ.ಎನ್‌.ರಾಜಣ್ಣ ,ಪತ್ನಿ ಶಾಂತಲಾ , ಪುತ್ರ ಎಂಎಲ್‌ಸಿ ಆರ್‌. ರಾಜೇಂದ್ರ, ಆರ್‌. ರವೀಂದ್ರ, ಪುತ್ರಿ ರಶ್ಮಿ ಹಾಗೂ ಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ದಂಡಿಮಾರಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ತೆಪ್ಪೋತ್ಸವಕ್ಕೆ ಚಾಲನೆ ನೀಡಿದರು. ತೆಪ್ಪೋತ್ಸವವು ಯಾವುದೇ ಅಡೆತಡೆಗಳಿಲ್ಲದೆ ಶಾಂತಿ,ಸುರಕ್ಷತೆಯಿಂದ ಮತ್ತು ನೆಮ್ಮದಿಯಿಂದ ಹಿತವಾಗಿ ನಡೆಯಲಿ ಕ್ಷೇತ್ರ ಹಾಗೂ ನಾಡಿಗೆ ಸುಭಿಕ್ಷೆಯನ್ನುಂಟು ಮಾಡಲೆಂದು ದೇವತೆಯಲ್ಲಿ ಪ್ರಾರ್ಥಿಸಿದರು.

ನಂತರ ಪಟ್ಟಣದ ಖಾಸಗಿ ಬಸ್‌ ನಿಲ್ದಾಣದ ಸಮೀಪವಿರುವ ಮೂಲ ದೇವತೆಯ ಗುಡಿಗೆ ತೆರಳಿ ಪೂಜೆ ನೆರವೇರಿಸಿದರು. ದಂಡಿಮಾರಮ್ಮ ದೇವಿಯ ತೆಪ್ಪೋತ್ಸವದ ಹಿನ್ನಲೆಯಲ್ಲಿ ಮೆರವಣಿಗೆ ಸಾಗುವ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಹೆಣ್ಣು ಮಕ್ಕಳು ಶ್ರದ್ಧಾ , ಭಕ್ತಿಯಿಂದ ರಸ್ತೆಗಳ ಉದ್ದಗಲಕ್ಕೂ ಬಣ್ಣ, ಬಣ್ಣದ ರಂಗೋಲಿ ಬರೆಯುವ ನಿಟ್ಟಿನಲ್ಲಿ ಅಣಿ ಮಾಡಿದ್ದರು. ಮೆರವಣಿಗೆ ಉದ್ದಗಲಕ್ಕೂ ಮಂಗಳೂರಿಂದ ಆಗಮಿಸಿದ್ದ ಚಂಡೆವಾಧ್ಯ ಸೇರಿದಂತೆ ವಿವಿಧ ಜಾನಪದ ಕಲಾ ತಂಡಗಳೊಂದಿಗೆ ಮೆರವಣಿಗೆ ಸಾಗಿತು. ದೇವರನ್ನು ಹರೆ, ತಮಟೆ ವಾದ್ಯಗಳೊಂದಿಗೆ ಬೆಳ್ಳಿ ರಥದಲ್ಲಿ ಕೂರಿಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ತೆಪ್ಪೋತ್ಸವ ನಡೆಯುವ ಚೋಳೇನಹಳ್ಳಿ ಕೆರೆಯ ಅಂಗಳಕ್ಕೆ ಕರೆ ತಂದರು.

ಸುತ್ತಮುತ್ತಲ ಪ್ರದೇಶಗಳಿಂದ ಭಕ್ತಾದಿಗಳು ವೈಭವಯುತ ತೆಪ್ಪೋತ್ಸವ ವೀಕ್ಷಿಸಲು ತಂಡಪೋತಂಡವಾಗಿ ಆಗಮಿಸುತ್ತಿರುವ ದೃಶ್ಯ ಎಲ್ಲೆಡೆ ಕಣ್ಮನ ಸೆಳೆಯಿತು. ಬರುವ ಭಕ್ತರಿಗೆ ಮತ್ತು ಸಾರ್ವಜನಿಕರಿಗೆ ದೇವಸ್ಥಾನದ ಆವರಣದಲ್ಲಿ ಅನ್ನ ಸಂತರ್ಪಣೆ ನಡೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!