ಬನಶಂಕರಿ ದೇವಿಗೆ ಉಡಿ ತುಂಬಿದ ವೀಣಾ ಕಾಶಪ್ಪನವರ

KannadaprabhaNewsNetwork | Published : Oct 21, 2023 12:31 AM

ಸಾರಾಂಶ

ಬನಶಂಕರಿ ದೇವಿಗೆ ಉಡಿ ತುಂಬಿದ ವೀಣಾ ಕಾಶಪ್ಪನವರ
ಕನ್ನಡಪ್ರಭವಾರ್ತೆ ಬಾದಾಮಿ ಲೋಕಕಲ್ಯಾಣ, ಮಳೆ, ಬೆಳೆ ಚೆನ್ನಾಗಿ ಆಗಲಿ ಎಂಬ ಉದ್ದೇಶದಿಂದ ಶುಕ್ರವಾರ ವಿವಿಕೆ ಫೌಂಡೇಶನ್ ವತಿಯಿಂದ ಜಿಪಂ ಮಾಜಿ ಅಧ್ಯಕ್ಷೆ, ಕಾಂಗ್ರೆಸ್ ರಾಜ್ಯ ಮಹಿಳಾ ಘಟಕದ ಉಪಾಧ್ಯಕ್ಷೆ ವೀಣಾ ಕಾಶಪ್ಪನ್ನವರ ಬಾದಾಮಿಯ ಶ್ರೀ ಬನಶಂಕರಿದೇವಿಗೆ ಉಡಿ ತುಂಬಿದರು. ಇದೇ ಸಂದರ್ಭದಲ್ಲಿ ಸುಮಾರು 1000 ಮಹಿಳೆಯರಿಗೆ ಉಡಿ ತುಂಬಲಾಯಿತು. ರಾಜ್ಯದಲ್ಲಿ ಸಕಾಲಕ್ಕೆ ಮಳೆಯಾಗದೇ ಬೆಳೆ ಬಾರದೇ ರೈತರು ಕಂಗಾಲಾಗಿದ್ದಾರೆ. ಸಂಕಷ್ಟ ದೂರ ಮಾಡಲಿ ಎಂದು ಉಡಿ ತುಂಬಿದರು. ಗ್ರಾಪಂ ಸದಸ್ಯೆ ಅನುರಾಧಾ ದೊಡಮನಿ, ಮೆನಕಾ ಲಮಾಣಿ, ಶೈಲಾ ಪಾಟೀಲ, ರೇಣುಕಾ ನ್ಯಾಮಗೌಡ, ನೂರಜಾನ ಬೇಪಾರಿ, ಕಲಾವತಿ ಕಾಮತ, ಸುಧಾ ಪಾಟೀಲ, ಮಹಾದೇವಿ ಯರಗಲ್, ಗ್ರಾಪಂ ಸದಸ್ಯೆ ರಕ್ಷಿತಾ ಮರಡಿತೋಟದ, ಎಂ.ಡಿ.ಯಲಿಗಾರ, ಅಶೋಕ ಗಾಜಿ, ರಹೀಂ ನಾಯಕ, ಚಿದಾನಂದ ಮೆಣಸಗಿ ಸೇರಿ ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಜನ ಮಹಿಳೆಯರು, ಯುವತಿಯರು, ಗ್ರಾಪಂ ಸದಸ್ಯರು, ಮುಖಂಡರು ಪಲ್ಗೊಂಡಿದ್ದರು.

Share this article