ಗೋಣಿಬೀಡು ಗಣಪತಿಗೆ ಜೇಸಿಐನಿಂದ ವಿಶೇಷ ಪೂಜೆ

KannadaprabhaNewsNetwork |  
Published : Sep 25, 2026, 01:15 AM IST
 | Kannada Prabha

ಸಾರಾಂಶ

Special Puja for Gonibeedu Ganapathi by JCI

ಚಿಕ್ಕಮಗಳೂರು: ಗೋಣಿಬೀಡು ಪಟ್ಟಣದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಪ್ರತಿಷ್ಠಾಪಿಸಿರುವ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬುಧವಾರ ಜೇಸಿಐ ಗೋಣಿಬೀಡು ಹೊಯ್ಸಳ ವತಿಯಿಂದ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ವೇಳೆ ಸಮಸ್ತ ಜನತೆಗೆ ಹಾಗೂ ವಿದ್ಯಾರ್ಥಿಗಳಿಗೆ ಆರೋಗ್ಯ, ಆಯುಸ್ಸು, ಸಮೃದ್ಧಿ ಕರುಣಿಸುವಂತೆ ಹಾಗೂ ಉತ್ತಮ ಮಳೆ-ಬೆಳೆ ಆಗುವಂತೆ ಗಣಪತಿಯಲ್ಲಿ ಪ್ರಾರ್ಥಿಸಲಾಯಿತು.ಜೇಸಿಐ ಅಧ್ಯಕ್ಷ ಸಂತೋಷ ಹೊಸಳ್ಳಿ, ಕಾರ್ಯದರ್ಶಿ ದಯಾನಂದ್, ವಕೀಲ ಆದರ್ಶ, ವಲಯ ಉಪಾಧ್ಯಕ್ಷ ಬಿ.ಎಂ. ಜಗತ್, ಬಿ.ಕೆ. ಚಂದ್ರಶೇಖರ, ರಘು, ಮಹೇಶ್ ಸಾಲುಮರ, ಕೆಂಚೇಗೌಡ, ಹಿರೇಸಿಗರ ಚಂದ್ರಶೇಖರ ಸೇರಿದಂತೆ ಜೇಸಿಐ ಪದಾಧಿಕಾರಿಗಳು, ಸದಸ್ಯರು ಹಾಗೂ ಭಕ್ತರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ತಮಿಳುನಾಡು ಸಿಎಂ ಪುತ್ರನ ಚಿತ್ರದಲ್ಲಿ ಸಾನ್ವಿ ಸುದೀಪ್‌ ಹಾಡು
ಬರ ಘೋಷಣೆಗೆ ಆಗ್ರಹಿಸಿ ಕಾಂಗ್ರೆಸ್‌ ಶಾಸಕ ಯಶವಂತರಾಯ ರಾಜೀನಾಮೆ, ತಿರಸ್ಕಾರ