ಎಚ್.ಕೆ. ಪಾಟೀಲರಿಗೆ ಮಂತ್ರಿ ಸ್ಥಾನಕ್ಕೆ ಪಾರ್ಥಿಸಿ ವಿಶೇಷ ಪೂಜೆ

KannadaprabhaNewsNetwork |  
Published : Jun 16, 2026, 02:15 AM IST
ನಗರದಲ್ಲಿ ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಸೋಮವಾರ ಬೆಳಗ್ಗೆ 11.45ಕ್ಕೆ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ಮಠದಲ್ಲಿ ರುದ್ರಾಭಿಷೇಕ ನೆರವೇರಿಸಿ, 101 ಇಡುಗಾಯಿ (ತೆಂಗಿನಕಾಯಿ) ಒಡೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು.

ಗದಗ: ರಾಜ್ಯದ ಹಿರಿಯ ರಾಜಕಾರಣಿ, ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ಸಿಗಲಿ ಎಂದು ಆಶಿಸಿ ಸೋಮವಾರ ನಗರದ ವಿವಿಧ ಧಾರ್ಮಿಕ ಮಂದಿರಗಳಲ್ಲಿ ಸರ್ವಧರ್ಮ ವಿಶೇಷ ಪೂಜೆ, ಸಾಮೂಹಿಕ ಪ್ರಾರ್ಥನೆ ನೆರವೇರಿಸಲಾಯಿತು.

ಸೋಮವಾರ ಬೆಳಗ್ಗೆ 11.45ಕ್ಕೆ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ಮಠದಲ್ಲಿ ರುದ್ರಾಭಿಷೇಕ ನೆರವೇರಿಸಿ, 101 ಇಡುಗಾಯಿ (ತೆಂಗಿನಕಾಯಿ) ಒಡೆಯುವ ಮೂಲಕ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ವೇಳೆ ನಗರದ ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಹಾಗೂ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲಾಯಿತು.

ಕಾರ್ಯಕ್ರಮದ ಆಯೋಜಕ ಸೈಯದ್ ಖಾಲಿದ್ ಕೊಪ್ಪಳ, ಎಸ್.ಕೆ. ನದಾಫ್, ವಿಜಯ ಮುಳುಗುಂದ, ಉಸ್ಮಾನ್ ಮಳಕೊಪ್ಪ, ಹುಲ್ಲೇಶ್ ಭಜಂತ್ರಿ, ಅಬ್ದುಲ್ ಹಮೀದ್ ಹುಯಿಲಗೋಳ, ಅಜ್ಜಣ್ಣ ಪಾಟೀಲ, ಹಸನ್ ಓಲೆಕಾರ, ಅನಿಲ ಸಿದ್ದಮ್ಮನಹಳ್ಳಿ, ನಗರಸಭಾ ಸದಸ್ಯೆ ಲಕ್ಷ್ಮಿ ಸಿದ್ದಮನಹಳ್ಳಿ, ನಾಮನಿರ್ದೇಶಿತ ಸದಸ್ಯ ಬಾಬು ನರಸಾಪುರ, ಮೋಹನ ಚಂದಪ್ಪನವರ, ಸೋಮು ಲಮಾಣಿ, ಮೋಹನ್ ಡಿ, ಸಂಗು ಕೆರಕಲಮಟ್ಟಿ, ಮೊಹಮ್ಮದ ಬೆಟಗೇರಿ, ಫಾರೂಕ್ ಸಿಂದಗಿ, ಅಕ್ಬರ್ ಅಲಿ ಬೇಗ್, ರಫೀಕ್, ವಿನೋದ್ ಶಿದ್ಲಿಂಗ್, ಅಭಿಷೇಕ ಅಬಿನ್ಸ್, ತೌಸಿಫ್ ಧಲಾಯತ, ವಕೀಲರಾದ ಮುನ್ನಾ ಮುಲ್ಲಾ, ದಾವಲ್ ತಡಸ, ಹರೀಶ್, ಪ್ರಕಾಶ್ ಸೋಂಸಾಲೆ, ವಿನೋದ್, ಅಶೋಕ್ ರಾಮನಕೊಪ್ಪ, ಫಾರೂಕ್ ಬಾರಗಿಡದ, ವಸೀಂ ಖಾಜಿ, ಸಿದ್ದು ಮಡಿವಾಳ ಸೇರಿದಂತೆ ನೂರಾರು ಅಭಿಮಾನಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನಕ್ಕೆ ಆಗ್ರಹಿಸಿ ಪ್ರತಿಭಟನೆ

ಗದಗ: ಹಿರಿಯ ರಾಜಕಾರಣಿ, ಶಾಸಕ ಡಾ. ಎಚ್.ಕೆ. ಪಾಟೀಲ ಅವರಿಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿ ಅವರ ಅಭಿಮಾನಿಗಳು ನಗರದ ಟಾಂಗಾ ಕೂಟದಲ್ಲಿ ರಸ್ತೆತಡೆ ನಡೆಸಿದರು.ಈ ವೇಳೆ ನಗರಸಭೆ ಸದಸ್ಯ ಜೆ.ಆರ್. ನಮಾಜಿ, ಜಂದಿಸಾಬ ಕಾಗದಗಾರ, ಶಬ್ಬೀರ ಮೌಲಾನ, ಯಸೂಫ ನಮಾಜಿ, ಜಹಾಂಗೀರ ಉಮಚಗಿ, ಕುಬೇರ ಗುಡದಳ್ಳಿ, ಸಲೀಂ ಹಮ್ಮಿಗಿ, ಮಹಮ್ಮದರಫೀ ಅತ್ತಾರ, ಶಬ್ಬೀರ ಪೀರಜಾದೆ, ಮದನಶಾ ಗುಡಗುಂಡಿ, ರಮೇಶ ನಾಯ್ಕರ, ಸಿರಾಜ ಧಾರವಾಡ, ಮುನ್ನಾ ಶೇಖ, ಮಹಬೂಬಿ ಗಡಾದ, ಶೇಖವ್ವ ಭಜಂತ್ರಿ, ಹನಮವ್ವ ತುಂಬ್ರಮಡ್ಡಿ, ಶಕೀಲಾ ಬೆಟಗೇರಿ, ಹುಸೇನ ಜೈನಾಪೂರ, ರಜಾಕ ಯರಗುಡಿ, ಕರೀಶ ಕಲಕೇರಿ ಸೇರಿದಂತೆ ಯುವಕರು, ಮಹಿಳೆಯರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿಕಾರಿಗಳ ಜನವಿರೋಧಿ ನೀತಿ ವಿರುದ್ಧ ಬಿಜೆಪಿ ಪ್ರತಿಭಟನೆ
ಜಲದುರಂತದಲ್ಲಿ ಮೃತಪಟ್ಟವರ ಮನೆಗಳಿಗೆ ಬ್ರಹ್ಮಾನಂದ ಸರಸ್ವತಿ ಶ್ರೀ ಭೇಟಿ