ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಗುರುವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು ಹಾಗೂ ಸೆಪ್ಟೆಂಬರ್ 22ರ ಸೋಮವಾರದಿಂದ ಪ್ರಾರಂಭಗೊಂಡಿದ್ದ ಶ್ರೀ ಶರನ್ನವರಾತ್ರಿ ಪೂಜಾ ಮಹೋತ್ಸವ ಗುರುವಾರ ಸಂಜೆ ಶಮೀವೃಕ್ಷದ ಪೂಜಾ ಮಹೋತ್ಸವದೊಂದಿಗೆ ಸಂಪನ್ನವಾಯಿತು. . ಧಾರ್ಮಿಕ ವಿಧಿ ವಿಧಾನಗಳ ಆಚರಣೆಯಂತೆ ಪೂಜಾ ಮಹೋತ್ಸವ ಜರುಗಿದ ನಂತರ ಬನ್ನಿ ವೃಕ್ಷಕ್ಕೆ ಮಲ್ಲಪ್ಪ ಜಯಮ್ಮ ಕುಟುಂಬಸ್ಥರು ಪೂಜೆ ಸಲ್ಲಿಸಿ, ಅರ್ಚಕ ನಾರಾಯಣ ಭಟ್ಟರು ಮಾರ್ಗದರ್ಶನದಂತೆ ವಿನಯ್ ಹಾಗೂ ಶ್ರೀಕಾಂತ್ ಕತ್ತಿಯಿಂದ ಬನ್ನಿ ಛೇದಿಸಿದರು.
ಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ಪಟ್ಟಣದ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದಲ್ಲಿ ವಿಜಯದಶಮಿ ಅಂಗವಾಗಿ ಗುರುವಾರ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು ಹಾಗೂ ಸೆಪ್ಟೆಂಬರ್ 22ರ ಸೋಮವಾರದಿಂದ ಪ್ರಾರಂಭಗೊಂಡಿದ್ದ ಶ್ರೀ ಶರನ್ನವರಾತ್ರಿ ಪೂಜಾ ಮಹೋತ್ಸವ ಗುರುವಾರ ಸಂಜೆ ಶಮೀವೃಕ್ಷದ ಪೂಜಾ ಮಹೋತ್ಸವದೊಂದಿಗೆ ಸಂಪನ್ನವಾಯಿತು.ದೇವಾಲಯದಲ್ಲಿ ಮುಂಜಾನೆ ಬ್ರಾಹ್ಮಿ ಮಹೂರ್ತದಲ್ಲಿ ಶ್ರೀ ಸ್ವಾಮಿಯ ಮೂಲ ಮೂರ್ತಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ, ನೈವೇದ್ಯ, ಸಹಸ್ರನಾಮಾರ್ಚನೆ ನಂತರ ಮಹಾಮಂಗಳಾರತಿ ನಡೆಸಲಾಯಿತು. ಸಂಜೆ ಗೋದೂಳಿ ಲಗ್ನದಲ್ಲಿ ಶ್ರೀ ಸ್ವಾಮಿಯ ಉತ್ಸವ ಮೂರ್ತಿಗಳನ್ನು ರಥದಲ್ಲಿ ಪ್ರತಿಷ್ಠಾಪಿಸಿ, ಸಂಪ್ರದಾಯದ ಆಚರಣೆಯಂತೆ ಕೋಟೆ ರಾಜಬೀದಿಯಲ್ಲಿ ಉತ್ಸವ ನಡೆಸಿದ ನಂತರ ದೇವಾಲಯದ ಆವರಣದಲ್ಲಿ ಪ್ರಾಖಾರೋತ್ಸವ ನಡೆಸಲಾಯಿತು. ನಂತರ ದೇವಾಲಯದ ಪ್ರಹಾಂಗಣದಲ್ಲಿರುವ ಶಮಿವೃಕ್ಷದ ಸಮೀಪ ಶ್ರೀ ಸ್ವಾಮಿಯ ಅಡ್ಡೆಯನ್ನು ಇಡಲಾಯಿತು. ಧಾರ್ಮಿಕ ವಿಧಿ ವಿಧಾನಗಳ ಆಚರಣೆಯಂತೆ ಪೂಜಾ ಮಹೋತ್ಸವ ಜರುಗಿದ ನಂತರ ಬನ್ನಿ ವೃಕ್ಷಕ್ಕೆ ಮಲ್ಲಪ್ಪ ಜಯಮ್ಮ ಕುಟುಂಬಸ್ಥರು ಪೂಜೆ ಸಲ್ಲಿಸಿ, ಅರ್ಚಕ ನಾರಾಯಣ ಭಟ್ಟರು ಮಾರ್ಗದರ್ಶನದಂತೆ ವಿನಯ್ ಹಾಗೂ ಶ್ರೀಕಾಂತ್ ಕತ್ತಿಯಿಂದ ಬನ್ನಿ ಛೇದಿಸಿದರು.ಹಿರಿಯ ಅರ್ಚಕರಾದ ರಾಮಸ್ವಾಮಿಭಟ್ಟರ ಮಾರ್ಗದರ್ಶನದಲ್ಲಿ ಅರ್ಚಕರಾದ ನಾರಾಯಣ ಭಟ್ಟರು, ರಾಮ ಭಟ್ಟರು, ವಿಜಯ್ ಕುಮಾರ್, ಸಿಂಹಾದ್ರಿ ಹಾಗೂ ವಲ್ಲಭ ನರಸಿಂಹನ್ ಪೂಜಾ ಕೈಂಕರ್ಯ ನೆರವೇರಿಸಿದರು. ಪೂಜಾ ಮಹೋತ್ಸವದ ಹಿರಿಯರಾದ ಉಮಾಶಂಕರ್, ಕಾಂತರಾಜು, ಮಾನಸ, ಜಾನ್ನವಿ ಹಾಗೂ ಕುಟುಂಬ ಸದಸ್ಯರು, ತಾಲೂಕು ಕಚೇರಿ ವತಿಯಿಂದ ಮುಜರಾಯಿ ಇಲಾಖೆಯ ಅಧಿಕಾರಿ ಪ್ರಭಾವತಿ, ಉದ್ಯಮಿಗಳಾದ ದೊಡ್ಡಮಲ್ಲೇಗೌಡ ಹಾಗೂ ಕಾಂತರಾಜು, ರಿ. ದಫೇದಾರ್ ಅಜ್ಜೇಗೌಡ, ಶ್ರೀ ಶಿವಕುಮಾರಸ್ವಾಮಿ ಸಹಕಾರ ಸಂಘದ ಅಧ್ಯಕ್ಷ ಸುರೇಶ್, ಶಂಕರನಾರಾಯಣ, ವೆಂಕಟೇಶ್ ಯಾದವ್, ಅಭಿಲಾಷ್, ಇತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.