ಹನುಮ ಜಯಂತಿ ಅಂಗವಾಗಿ ವಿಶೇಷ ಪೂಜೆ

KannadaprabhaNewsNetwork |  
Published : Dec 14, 2024, 12:46 AM IST
13ಎಚ್ಎಸ್ಎನ್10 : ಹೊಳೆನರಸೀಪುರ ಪಟ್ಟಣದ ಕಂಚುಗಾರರ ಬೀದಿಯಲ್ಲಿರುವ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯ ಹನುಮನ ಜಯಂತಿ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.  | Kannada Prabha

ಸಾರಾಂಶ

ಹೊಳೆನರಸೀಪುರ ಪಟ್ಟಣದ ಕಂಚುಗಾರರ ಬೀದಿಯಲ್ಲಿರುವ ನೇಕಾರ ಕುರುಹಿನಶೆಟ್ಟಿ ಜನಾಂಗದ ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯ, ತಾಲೂಕು ಆಫೀಸ್ ಹಿಂಭಾಗದ ರಿವರ್‌ ಬ್ಯಾಂಕ್ ರಸ್ತೆಯ ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.

ಕನ್ನಡಪ್ರಭ ವಾರ್ತೆ ಹೊಳೆನರಸೀಪುರ

ಪಟ್ಟಣದ ಕಂಚುಗಾರರ ಬೀದಿಯಲ್ಲಿರುವ ನೇಕಾರ ಕುರುಹಿನಶೆಟ್ಟಿ ಜನಾಂಗದ ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯ, ತಾಲೂಕು ಆಫೀಸ್ ಹಿಂಭಾಗದ ರಿವರ್‌ ಬ್ಯಾಂಕ್ ರಸ್ತೆಯ ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹನುಮ ಜಯಂತಿ ಪ್ರಯುಕ್ತ ವಿಶೇಷ ಪೂಜಾ ಮಹೋತ್ಸವ ವೈಭವದಿಂದ ಜರುಗಿತು.

ದೇವಾಲಯಗಳಲ್ಲಿ ಶ್ರೀ ಸ್ವಾಮಿಯ ಮೂರ್ತಿಗೆ ಪಂಚಾಮೃತ ಅಭಿಷೇಕ, ಫಲಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ ಸೇವೆ ನೆರವೇರಿಸಲಾಯಿತು. ನಂತರ ಮಧ್ಯಾಹ್ನ ೧ ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ, ಭಕ್ತರಿಗೆ ತೀಥ ಪ್ರಸಾದ ಹಾಗೂ ಅನ್ನಸಂತರ್ಪಣೆ ವ್ಯವಸ್ಥೆ ಮಾಡಲಾಗಿತ್ತು.

ಬಲಿಜ ಜನಾಂಗದ ಶ್ರೀ ವೀರಾಂಜನೇಯ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಎಚ್.ವಿ.ಸುಜಯ್ ಆಚಾರ್‌ ಹಾಗೂ ಶ್ರೀನಿವಾಸ ಆಚಾರ್ ಮತ್ತು ಎದುರು ಮುಖದ ಶ್ರೀ ರಾಮಲಿಂಗಾಂಜನೇಯಸ್ವಾಮಿ ದೇವಾಲಯದಲ್ಲಿ ಹಿರಿಯ ಅರ್ಚಕರಾದ ಸುಬ್ರಮಣ್ಯ, ಸುಧಾಕರ ಹಾಗೂ ಪಣಿಕುಮಾರ್ ಪೂಜಾ ಕೈಂಕರ್ಯ ನೆರವೇರಿಸಿದರು.

ಪೂಜಾ ಮಹೋತ್ಸವದಲ್ಲಿ ತಾಲೂಕು ಬಲಿಜ ಸಂಘದ ಅಧ್ಯಕ್ಷ ಎಚ್.ಜಿ.ವೆಂಕಟೇಶ್, ಉಪಾಧ್ಯಕ್ಷ ಎಚ್.ಎನ್.ರವೀಂದ್ರ, ಕಾರ್ಯದರ್ಶಿ ನಾರಾಯಣಸ್ವಾಮಿ, ಖಜಾಂಚಿ ಪಿ.ಶಂಕರ, ಪುರಸಭಾ ಸದಸ್ಯೆ ಸಾವಿತ್ರಿ, ಹಿರಿಯರಾದ ಗೋವಿಂದರಾಜು, ನಾಗೇಂದ್ರಸ್ವಾಮಿ, ಡಾ. ಜಗದೀಶ್, ಉದ್ಯಮಿ ಧನ್ಯಕುಮಾರ್‌, ರಾಧಮ್ಮ, ರೂಪ ಹರೀಶ್, ಜಯಶ್ರೀ ಜಗನ್ನಾಥ್, ರಾಘವೇಂದ್ರ, ಆನಂದ, ನರಸಿಂಹ, ಕುರುಹಿನಶೆಟ್ಟಿ ಜನಾಂಗ ಕಮಿಟಿ ಅಧ್ಯಕ್ಷ ಎಚ್.ಎಸ್.ಸುದರ್ಶನ್, ಆರ್‌.ರಮೇಶ್, ಎಚ್.ಟಿ.ನರಸಿಂಹಶೆಟ್ಟಿ, ರಾಘವೇಂದ್ರ, ಸುದರ್ಶನ್, ಎಚ್.ಬಿ.ಹರೀಶ, ಜಗದೀಶ, ಗುರು, ದಯಾನಂದ, ರಂಗಸ್ವಾಮಿ, ರವಿಕುಮಾರ್, ಶ್ರೀನಿವಾಸ, ಎಚ್.ಆರ್‌.ಬಾಲಕೃಷ್ಣ, ಎನ್.ಅಕ್ಷಯ್, ಬಾಲಕೃಷ್ಣ(ಗಗನ್), ವಿಜಯಕುಮಾರ್, ಸುಬ್ಬಣ್ಣ, ಮೈಲಾರಶೆಟ್ಟರು, ಇತರರು ಉಪಸ್ಥಿತರಿದ್ದರು.

ದೇವಾಂಗದ ಶ್ರೀ ರಾಮಮಂದಿರ, ನದಿ ದಂಡೆಯ ವೀರಾಂಜಾನೇಯಸ್ವಾಮಿ, ತುಳಸಿ ಆಂಜನೇಯಸ್ವಾಮಿ ಹಾಗೂ ಹುಣಸೇಮರ ವೀರಾಂಜನೇಯಸ್ವಾಮಿ ದೇವಾಲಯಗಳಲ್ಲಿ ಶ್ರೀ ಸ್ವಾಮಿಯ ಮೂಲ ವಿಗ್ರಹಕ್ಕೆ ಅಭಿಷೇಕ ಹಾಗೂ ವಿಶೇಷವಾಗಿ ಅಲಂಕರಿಸುವ ಮೂಲಕ ಹನುಮ ಜಯಂತಿಯನ್ನು ಆಚರಿಸಲಾಯಿತು.

------------------------------------------------------------

PREV

Recommended Stories

ಸಹಕಾರಿ ತತ್ವದಿಂದ ಕಟ್ಟಕಡೆ ವ್ಯಕ್ತಿಗೂ ಸಹಾಯ
ವೀರಶೈವ ಲಿಂಗಾಯತರಲ್ಲಿ ಸಮಾಜ ಒಗ್ಗಟ್ಟು ಮುಖ್ಯ